More

    ನೇತ್ರದಾನದಿಂದ ಅಂಧತ್ವ ನಿವಾರಣೆ ಸಾಧ್ಯ

    ಬೈಲಹೊಂಗಲ: ಮನುಷ್ಯನ ಜ್ಞಾನೇಂದ್ರಿಯಗಳಲ್ಲಿ ಕಣ್ಣು ಅತಿ ಪ್ರಮುಖವಾದ ಅಂಗವಾಗಿದ್ದು, ಅಂಧತ್ವದಿಂದ ಜೀವನದಲ್ಲಿ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ಶಸ್ತ್ರ ಚಿಕಿತ್ಸೆಯ ಮೂಲಕ ಅಂಧತ್ವವನ್ನು ನಿವಾರಣೆ ಮಾಡಲಾಗುತ್ತಿದೆ. ನೇತ್ರದಾನ ಮೂಲಕ ಅಂಧತ್ವ ನಿವಾರಣೆಗೆ ಮುಂದಾಗಬೇಕು ಎಂದು ಬೆಂಗಳೂರು ನಾರಾಯಣ ಹೃದಯಾಲಯದ ಹೃದ್ರೋಗ ತಜ್ಞ ಡಾ.ದಯಾನಂದ ಎಲಿಗಾರ ಹೇಳಿದರು.

    ತಾಲೂಕಿನ ದೊಡವಾಡ ಗ್ರಾಮದ ಗ್ರಾಮದೇವತೆ ದೇವಸ್ಥಾನದಲ್ಲಿ ಸಂಗಮೇಶ್ವರ ಪಿಕೆಪಿಎಸ್ ಹಾಗೂ ಹುಬ್ಬಳ್ಳಿಯ ಅಶೋಕಾ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಕಣ್ಣು, ಹೃದಯರೋಗ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

    ಗ್ರಾಮೀಣ ಪ್ರದೇಶಗಳ ಜನತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕೂಡ ಆರ್ಥಿಕ ಸಮಸ್ಯೆಯಿಂದ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದು ಅಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ ಮಾನವೀಯ ಕಳಕಳಿಯ ಇಟ್ಟು ಕೊಂಡು ಶತಮಾನೋತ್ಸವ ಆಚರಿಸಿದ ಸಂಗಮೇಶ್ವರ ಪಿಕೆಪಿಎಸ್ ನುರಿತ ತಜ್ಞ ವೈದ್ಯರು ಸಹಕಾರದಿಂದ ಶಿಬಿರ ಹಮ್ಮಿಕೊಂಡು ಜನತೆಗೆ ನೆರವಾಗುತಿರುವುದು ಸಂತಸದ ವಿಚಾರ. ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗಿಸಲು ನನ್ನ ಸಂರ್ಪೂಣ ಸಹಕಾರ ಇದೆ ಎಂದರು.

    ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಸಂಗಮೇಶ್ವರ ಪಿಕೆಪಿಎಸ್ ನಿರ್ದೇಶಕ ನಿಂಗಪ್ಪ ಚೌಡಣ್ಣವರ ಮಾತನಾಡಿ, ಕಣ್ಣಿನ ಲೆನ್ಸ್‌ಗಳನ್ನು ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ಒದಗಿಸಿ ಎಲ್ಲರಿಗೂ ಉತ್ತಮ ದೃಷ್ಟಿ ಭಾಗ್ಯ ನೀಡುತ್ತಿರುವ ಹುಬ್ಬಳ್ಳಿ ಅಶೋಕ ಆಸ್ಪತ್ರೆ ಕಾರ್ಯ ಶ್ಲಾಘನೀಯವಾಗಿದೆ. ಸಂಘದ ವತಿಯಿಂದ ಪಶು ಚಿಕಿತ್ಸಾ ನಂತರ ಬಡ ಜನತೆಗೆ ಅನುಕೂಲವಾಗಲು ಕಣ್ಣು, ಹೃದಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದರು.

    ಸಂಗಮೇಶ್ವರ ಪಿಕೆಪಿಎಸ್ ಅಧ್ಯಕ್ಷ ವೀರೇಂದ್ರ ಸಂಗೊಳ್ಳಿ ಮಾತನಾಡಿ, ದೊಡವಾಡ ಹಾಗೂ ಸುತ್ತಲಿನ 250ಕ್ಕೂ ಜನರು ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆ ಪಡೆದಿದ್ದು, 52 ಜನರಿಗೆ ಹೆಚ್ಚಿನ ಚಿಕಿತ್ಸೆಗೆ ಕ್ರಮ ಜರುಗಿಸಲಾಗುತ್ತಿದೆ ಎಂದರು.

    ಉಪಾಧ್ಯಕ್ಷ ಬಸವರಾಜ ಮುರಗೋಡ, ನಿರ್ದೇಶಕರಾದ ವಿಠ್ಠಲ ಗಾಬಿ, ಉದಯ ಕೊಟಬಾಗಿ, ನಾಗಪ್ಪ ಸವದತ್ತಿ, ಈಶ್ವರ ಅಂದಾನಶೆಟ್ಟಿ, ಲಕ್ಕಪ್ಪ ಅಲಕ್ಕನವರ, ಶೋಭಾ ಕಂಚಿನಮಠ, ಶಂಕ್ರೆಮ್ಮ ಚೌಡಣ್ಣವರ ಉಪಸ್ಥಿತರಿದ್ದರು. ಸಿಇಒ ಎಂ.ಎಸ್.ಶಿಂಧೆ ನಿರೂಪಿಸಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts