More

    ನೇತಾಜಿ ನಿತ್ಯ ಸ್ಮರಣೀಯರು

    ಕಾರವಾರ: ಸ್ವಾತಂತ್ರ್ಯ್ಕಾಗಿ ಆಜಾದ್ ಹಿಂದ್ ಫೌಜ್ ಕಟ್ಟಿ ದುಡಿದ ನೇತಾಜಿ ಸುಭಾಷ್​ಚಂದ್ರ ಬೋಸ್ ಅವರು ಎಂದೆಂದಿಗೂ ಸ್ಮರಣೀಯರು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

    ನೇತಾಜಿ ಸುಭಾಷ್​ಚಂದ್ರ ಬೋಸ್ ಜಯಂತಿ ಅಂಗವಾಗಿ ನಗರಸಭೆಯಿಂದ ನವೀಕೃತ ನೇತಾಜಿ ವೃತ್ತ ಉದ್ಘಾಟಿಸಿ, ಬೋಸ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ನಗರಸಭೆ ಅಧ್ಯಕ್ಷ ಡಾ. ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಪೌರಾಯುಕ್ತ ಆರ್.ಪಿ. ನಾಯ್ಕ ಇದ್ದರು.

    ಕುಮಟಾ ವರದಿ: ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ನೇತಾಜಿ ಸುಭಾಷ್​ಚಂದ್ರ ಬೋಸ್ ಜಯಂತಿಯನ್ನು ಶನಿವಾರ ಆಚರಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ದೇಶ ಸ್ವಾತಂತ್ರ್ಯ ಪಡೆಯುವಲ್ಲಿ ಮಹಾತ್ಮ ಗಾಂಧಿ ಅವರ ಅಹಿಂಸೆ ಮಂತ್ರಕ್ಕೆ ನೇತಾಜಿ ಸುಭಾಷ್​ಚಂದ್ರ ಬೋಸ್ ಅವರ ಕ್ರಾಂತಿಕಾರಿ ವಿಚಾರಧಾರೆಯೂ ಅಷ್ಟೇ ಪೂರಕ ಎಂದು ಹೇಳಿದರು. ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಮೋಹಿನಿ ಗೌಡ ಇದ್ದರು. ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ ಸ್ವಾಗತಿಸಿ, ನಿರ್ವಹಿಸಿದರು. ಸುಧಾ ಗೌಡ, ಜಯಾ ಶೇಟ, ದತ್ತಾತ್ರೇಯ ನಾಯ್ಕ, ವಿಶ್ವನಾಥ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

    ಹಳಿಯಾಳ ವರದಿ: ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನೇತಾಜಿ ಜನ್ಮ ದಿನವನ್ನು ಶನಿವಾರ ಆಚರಿಸಲಾಯಿತು. ಶಿಕ್ಷಣ ತಜ್ಞ ಸುರೇಂದ್ರ ಬಿರ್ಜೆ, ವಿದ್ಯಾರ್ಥಿನಿಯರಾದ ತೇಜಸ್ವಿನಿ ಕದಂ, ಪೂಕಾ ಹಣಬರ ಮಾತನಾಡಿದರು. ರಾಷ್ಟ್ರೀಯ ಚಿಹ್ನೆಗಳು, ಐತಿಹಾಸಿಕ ಹಿನ್ನೆಲೆ ಕುರಿತು ರಸಪ್ರಶ್ನೆ ಕಾರ್ಯಕ್ರಮ ಜರುಗಿತು. ಮುಖ್ಯೋಧ್ಯಾಪಕ ವಿನಾಯಕ ಶೇಟ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ವಿಮಲಾ ನಾಯಕ, ಗೀತಾ, ವೀಣಾ ಗಾಂವಕರ, ಅನ್ನಪೂರ್ಣಾ ಶಿರೇಶಿ, ಕಮಲಾ ಕೊಗೇರ, ರಾಜು ಪಾಲಕರ, ನಿವೇದಿತಾ ಬೆಕ್ವಾಡಕರ, ಲಕ್ಷ್ಮೀ ಕೊಳಾಪ್ಟೆ ಇದ್ದರು. ಪುರಸಭೆಯ ಪ್ರೌಢಶಾಲೆ ವಿದ್ಯಾರ್ಥಿನಿಯರು, ಶಿಕ್ಷಕರು ಪುರಸಭೆ ಎದುರಿನ ನೇತಾಜಿ ಪುತ್ಥಳಿಗೆ ನಮನ ಸಲ್ಲಿಸಿದರು.

    ಇಂಜಿನಿಯರಿಂಗ್ ಕಾಲೇಜ್:
    ಎಲ್​ಎಸ್ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನೇತಾಜಿ ಜನ್ಮ ದಿನಾಚರಣೆ, ಆತ್ಮನಿರ್ಭರ ಭಾರತ ಕುರಿತು ಪ್ರಬಂಧ ಸ್ಪರ್ಧೆ ನಡೆಯಿತು. ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ, ಆಡಳಿತ ವಿಭಾಗ ಮುಖ್ಯಸ್ಥ ಪ್ರೊ. ಮಂಜುನಾಥ ಡಿ., ಎನ್​ಎಸ್​ಎಸ್ ಸಂಚಾಲಕ ಪ್ರೊ. ವಿ.ಎಂ. ಚೌಗುಲಾ, ಪ್ರೊ. ಎಸ್.ಡಿ. ಕುಲಕರ್ಣಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts