More

    ನೆಲದ ಸಂಸತಿ ಮಕ್ಕಳಲ್ಲಿ ಬಿತ್ತಿ

    ಬೆಳಗಾವಿ: ಸಮಾಜ ಶೋಧನೆಗೆ ಮತ್ತು ಜಾಗೃತಿಗೆ ನಾಟಕ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ರಾಯಣ್ಣನ ಸಾಹಸದ ಯಶೋಗಾಥೆಯನ್ನು ನಾಟಕದ ಮೂಲಕ ಇಂದಿನ ಪೀಳಿಗೆಗೆ ಪರಿಚಯಿಸುವುದು ಅವಶ್ಯವಾಗಿದೆ ಎಂದು ಮಾಜಿ ಸಚಿವ ಎಚ್​.ಎಂ.ರೇವಣ್ಣ ಹೇಳಿದರು.
    ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶುಕ್ರವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠ ಮತ್ತು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಟಕ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಕನ್ನಡ ಕೇಸರಿ ಸಂಗೊಳ್ಳಿ ರಾಯಣ್ಣ ಐತಿಹಾಸಿಕ ಸಂಗೀತ ನಾಟಕದ ಪ್ರದರ್ಶನ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ವಿದ್ಯಾರ್ಥಿಗಳೇ ನಾಟಕ ಮಾಡಿದ್ದರಿಂದ ಅವರಲ್ಲಿ ದೇಶಭಕ್ತಿ ಹೆಚ್ಚಿಸುತ್ತದೆ. ಇದು ಆಜಾದಿ ಕಾ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಒಬ್ಬ ಸ್ವಾತಂತ್ರ$್ಯ ಸೇನಾನಿಗೆ ಕೊಡುವ ಅಪ್ರತಿಮ ಗೌರವ. ಸಮಕಾಲೀನ ಸಂದರ್ಭದಲ್ಲಿ ಪೋಷಕರಿಗೆ ತಮ್ಮ ಮಕ್ಕಳ ಪರೀಾ ಅಂಕಗಳ ಕಡೆಗೆ ಗಮನವಿರುತ್ತದೆಯೇ ವಿನ@ ತಮ್ಮ ಮಕ್ಕಳಿಗೆ ನೆಲದ ಸಂಸತಿ, ಸಂಗೀತ& ಸಾಹಿತ್ಯವನ್ನು ಕಲಿಸುವಲ್ಲಿ, ವೀರಪುರುಷರ ಚರಿತ್ರೆಯನ್ನು ಮಕ್ಕಳಲ್ಲಿ ಬಿತ್ತುವುದರಲ್ಲಿ ಇರುವುದಿಲ್ಲ ಎಂದರು.
    ಸಂಗೊಳ್ಳಿ ರಾಯಣ್ಣನ ಕುರಿತಾದ ಮೌಖಿಕ ದಾಖಲೆಗಳನ್ನು ಕ್ರೋಡಿಕರಿಸಿ ಪ್ರಕಟಿಸಬೇಕು. ಸರ್ಕಾರ ಪ್ರತಿ ವರ್ಷ ಎರಡು ಕೋಟಿ ರೂ. ಈ ಪೀಠಕ್ಕೆ ನಿಡುತ್ತದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದ ಮುಂಭಾಗದಲ್ಲಿ ಸ್ಥಾಪಿಸಲಿರುವ ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ನಾನು ನೀಡುತ್ತೇನೆ ಎಂದರು.
    ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರಾಮಚಂದ್ರಗೌಡ ಮಾತನಾಡಿ, ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಇರುವ ಈ ಪೀಠ ಸಕ್ರಿಯ, ರಚನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದೆ. ನಾಡಿನ ಸಾಪ್ರೆಯಾದ ಸಂಗೊಳ್ಳಿ ರಾಯಣ್ಣನ ಬದುಕಿನ ಮಜಲುಗಳನ್ನು ಬರವಣಿಗೆ, ವಿಚಾರ ಸಂಕಿರಣದ ಮೂಲಕ ಪೀಠದಿಂದ ಅನಾವರಣಗೊಳಿಸುತ್ತಿದ್ದೇವು ಎಂದರು.
    ರಾಜ್ಯದ ಉನ್ನತ ಶಿಕ್ಷಣ ಪರಿಷತ್​ನ ವಿಶೇಷ ಅಧಿಕಾರಿ ಡಾ. ಎಂ. ಜಯಪ್ಪ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವ ಎಂ. ಹನುಮಂತಪ್ಪ, ಸಿಂಡಿಕೇಟ್​ ಸದಸ್ಯ ಡಾ. ಆನಂದ ಹೊಸೂರ, ಮೌಲ್ಯ ಮಾಪನ ಕುಲಸಚಿವ ಪ್ರೊ. ಶಿವಾನಂದ ಗೊರನಾಳೆ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಂಕರ ತೇರದಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts