More

    ನೆರೆ ಸಂತ್ರಸ್ತರಿಗೆ ಮನೆ ಮಂಜೂರಾತಿಗೆ ಆಗ್ರಹ

    ಕಾಗವಾಡ: ತಾಲೂಕಿನ ಜುಗೂಳ ಗ್ರಾಪಂ ವ್ಯಾಪ್ತಿಯ ಶಹಾಪುರ ಗ್ರಾಮದ ನೆರೆ ಸಂತ್ರಸ್ತರಿಗೆ ಮನೆ ಮಂಜೂರುಗೊಳಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಕಾರ್ಯಾಲಯದ ಎದುರು ಸಂತ್ರಸ್ತರು, ಸೋಮವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

    ಪಟ್ಟಣದ ಚನ್ನಮ್ಮ ವೃತ್ತದಿಂದ ತಹಸೀಲ್ದಾರ್ ಕಚೇರಿಗೆ ರ‌್ಯಾಲಿ ಮೂಲಕ ಆಗಮಿಸಿದ ಗ್ರಾಮಸ್ಥರು, ಡಾ. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸತ್ಯಾಗ್ರಹ ಪ್ರಾರಂಭಿಸಿದರು. 2019ರಲ್ಲಿ ಕಷ್ಣಾ ನದಿ ಪ್ರವಾಹದಲ್ಲಿ ಹಾನಿಗೀಡಾದ ಮನೆಗಳ ಅಧಿಕೃತ ಪಟ್ಟಿಗೆ ಅನುಮೋದನೆ ನೀಡಬೇಕು. 2021ರ ಪ್ರವಾಹದಿಂದ ಹಾನಿಯಾದ ಮನೆಗಳನ್ನು ಪಾರದರ್ಶಕತೆಯಿಂದ ಮಂಜೂರಾತಿಗೊಳಿಸುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು. ಜುಗೂಳ ಗ್ರಾಪಂ ಸದಸ್ಯ ಉಮೇಶ ಪಾಟೀಲ ಮಾತನಾಡಿ, 3 ವರ್ಷಗಳ ಹಿಂದೆ ಬಂದ ಪ್ರವಾಹದಿಂದ 92 ಮನೆಗಳು ಹಾನಿಯಾಗಿದ್ದು, ಇಲ್ಲಿಯವರೆಗೆ ಮನೆಗಳಿಗೆ ಮಂಜೂರಾತಿ ನೀಡಿಲ್ಲ. ಈ ಕುರಿತು ಹಲವಾರು ಸಲ ಪ್ರತಿಭಟನೆ ಮಾಡಿದರೂ ಕೂಡ ಪರಿಹಾರ ದೊರೆಯದೇ ಇರುವುದರಿಂದ ಗ್ರಾಮಸ್ಥರು ಆಮರಣ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಸರ್ಕಾರ ಕೂಡಲೇ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿಕೊಂಡರು.

    ಮಾದಗೌಡ ಪಾಟೀಲ, ವಿಜಯ ನಾಯಿಕ, ಬಾಬಾಸಾಬ ಹುನ್ನರಗೆ, ದೀಪಕ ಪಾಟೀಲ, ಬಬನ ಕಮತೆ, ಸದಾಶಿವ ಕಾಂಬಳೆ, ಬಾಬು ಕಾಂಬಳೆ, ನಾನಾ ಜಾಧವ, ಶಿವಾನಂದ ಪಾಟೀಲ, ಮಹೇಶ ಪಾಟೀಲ, ಸುಮನ ಸ್ವಾಮಿ, ಶಾಂತಾ ಸ್ವಾಮಿ, ಶೋಭಾ ಕಾಂಬಳೆ, ನೀಲಾ ಕಾಳೆ, ನರ್ಮದಾ ಕಾಂಬಳೆ, ಸುಮನ ಕಾಂಬಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts