More

    ನೆರೆ ಪೀಡಿತರಿಗೆ ತೊಂದರೆಯಾಗದಂತೆ ಕ್ರಮವಹಿಸಿ

    ಕಾಗವಾಡ: ಕಾಗವಾಡ ತಾಲೂಕಿನ ನೆರೆ ಪೀಡಿತ ಗ್ರಾಮಗಳಿಗೆ ಶಾಸಕ ಶ್ರೀಮಂತ ಪಾಟೀಲ ಭೇಟಿ ನೀಡಿ, ಸಂತ್ರಸ್ತರ ಕುಂದು ಕೊರತೆಗಳನ್ನು ಚರ್ಚಿಸುವ ಜತೆಗೆ ನೆರೆ ಹಾವಳಿ ಎದುರಾದಾಗ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ನೆರೆ ಪೀಡಿತರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

    ಕಾಗವಾಡ ತಾಲೂಕಿನ ನೆರೆಪೀಡಿತ ಗ್ರಾಮಗಳಾದ ಕುಸನಾಳ ಹಾಗೂ ಮೊಳವಾಡ ಗ್ರಾಮಗಳಿಗೆ ಗುರುವಾರ ಭೇಟಿ ನೀಡಿ ಮಾತನಾಡಿ, ಜನರು ಪ್ರವಾಹಕ್ಕೆ ಭಯಪಡಬೇಕಿಲ್ಲ. ಜಿಲ್ಲಾಡಳಿತ ಹಾಗೂ ಸರ್ಕಾರ ನಿಮ್ಮ ಸೇವೆಗೆ ಸದಾ ಸಿದ್ಧ. ಈಗಾಗಲೆ ನೆರೆ ಹಾವಳಿ ಕುರಿತು ಅಧಿಕಾರಿಗಳ ಜತೆ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದರು.

    ಕುಸನಾಳ ಗ್ರಾಪಂ ಮಾಜಿ ಅಧ್ಯಕ್ಷ ಜಯಪಾಲ ಯರಂಡೋಲೆ ಮಾತನಾಡಿ, ಗ್ರಾಮಕ್ಕೆ ನೆರೆ ಹಾವಳಿ ಬಂದಾಗ ಗ್ರಾಮದಿಂದ ಹೊರಗೆ ಹೋಗಲು ಒಂದು ಬೋಟ್‌ನ ಅವಶ್ಯಕತೆ ಇದ್ದು, ವ್ಯವಸ್ಥೆ ಮಾಡುವಂತೆ ಶಾಸಕರಿಗೆ ಕೋರಿದರು. ಕೂಡಲೇ ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ಶಾಸಕರು, ಆದಷ್ಟು ಬೇಗ ಬೋಟ್ ನೀಡುವಂತೆ ಸೂಚಿಸಿದರು. ಒಂದು ವೇಳೆ ಸರ್ಕಾರದಿಂದ ಬೋಟ್ ನೀಡಲು ವಿಳಂಬವಾದರೆ ನನ್ನ ಸ್ವಂತ ಖರ್ಚಿನಿಂದ ಬೋಟ್ ಖರೀದಿಸಿ ಗ್ರಾಮಕ್ಕೆ ನೀಡುವದಾಗಿ ಶ್ರೀಮಂತ ಪಾಟೀಲ ಭರವಸೆ ನೀಡಿದರು.

    ನಂತರ ಶಾಸಕರು ಕುಸನಾಳ-ಮೊಳವಾಡ ಗ್ರಾಮದಲ್ಲಿ ಸ್ಥಳೀಯ ಮುಖಂಡರೊಂದಿಗೆ ಕೃಷ್ಣಾ ನದಿಯಲ್ಲಿ ಬೋಟ್ ಮೂಲಕ ತೆರಳಿ ಪ್ರವಾಹ ವೀಕ್ಷಣೆ ಮಾಡಿದರು. ಮುಖಂಡರಾದ ದಾದಾ ಪಾಟೀಲ, ರಾಜೇಂದ್ರ ಪೋತದಾರ, ಜಯಪಾಲ ಯರಂಡೋಲೆ, ದೀಪಾ ಖನ್ನಿಕೋಡೆ, ನಿರ್ಮಾಲಾ ಪಾಟೀಲ, ಸುಭಾಷ ಅಥಣಿ, ಅಮಿತ ಪಾಟೀಲ, ವಿಜಯ ಖನ್ನಿಕೋಡೆ, ಚಿದಾನಂದ ಅಥಣಿ, ಸಂದೀಪ ಮಗದುಮ್ಮ, ರಾಣಿ ಗುರವ, ವಿನಯಶ್ರೀ ಮಗದುಮ್ಮ, ಪ್ರಕಾಶ ದುಗ್ಗೆ, ಸುಶೀಲ ಮಾಂಜರೆ, ಅಶೋಕ ನಾಂದಣಿ, ಭಾಸ್ಕರ ಹಳ್ಯಾಳ, ರಾಜು ಕಾಂಬ್ಳೆ, ಅಭಯ ಪಾಟೀಲ, ಪಿಂಟು ಕಾಂಬಳೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts