More

    ಬಿಡಾಡಿ ಜಾನುವಾರು ಸ್ಥಳಾಂತರಿಸಿ

    ಮೂಡಿಗೆರೆ: ಪಟ್ಟಣದ ಜನಸಂದಣಿ ಪ್ರದೇಶ, ರಸ್ತೆ ಮತ್ತು ಹಳೇಮೂಡಿಗೆರೆ ಗ್ರಾಪಂ ವ್ಯಾಪ್ತಿಯ ಹ್ಯಾಂಡ್‌ಪೋಸ್ಟ್ ಸರ್ಕಲ್ ಬಳಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಬಿಡಾಡಿ ಜಾನುವಾರುಗಳ ಉಪಟಳ ಹೆಚ್ಚಾಗುತ್ತಿದೆ. ಪಪಂ, ಗ್ರಾಪಂ ಅಧಿಕಾರಿಗಳು ಬಿಡಾಡಿ ಜಾನುವಾರುಗಳನ್ನು ಸ್ಥಳಾಂತರಿಸಬೇಕೆಂದು ಸುಂದ್ರೇಶ್ ಹೊಯ್ಸಳಲು ಒತ್ತಾಯಿಸಿದ್ದಾರೆ.

    ಪಟ್ಟಣದ ವಿವಿಧ ರಸ್ತೆಗಳು, ಹ್ಯಾಂಡ್‌ಪೋಸ್ಟ್ ಹಾಗೂ ಕಿತ್ತಲೆಗಂಡಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ 30 ರಿಂದ 40 ಬಿಡಾಡಿ ಜಾನುವಾರುಗಳು ರಸ್ತೆಯಲ್ಲಿ ಸಂಚರಿಸುತ್ತ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಿವೆ. ರಾತ್ರಿ ಹೊತ್ತಿನಲ್ಲಿ ರಸ್ತೆ ಮಧ್ಯೆ ಜಾನುವಾರುಗಳು ಮಲಗುತ್ತವೆ. ಜಾನುವಾರುಗಳು ಮಲಗಿರುವುದು ವಾಹನ ಸವಾರರಿಗೆ ಅರಿವಿಲ್ಲದೆ ಅಪಘಾತಗಳು ಸಂಭವಿಸುತ್ತಿವೆ. ಈ ಹಿಂದೆ ಚಿಕ್ಕಮಗಳೂರಿನಲ್ಲಿ ನಡೆದ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆಯಲ್ಲಿ ಡಿಸಿ ಹಾಗೂ ಎಸ್ಪಿ ಗಮನಕ್ಕೆ ತರಲಾಗಿತ್ತು. ಗ್ರಾಪಂಗೆ ನೋಟೀಸ್ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪಪಂ ಮತ್ತು ಗ್ರಾಪಂ ಅಧಿಕಾರಿಗಳು ಜಾನುವಾರುಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಾರಸುದಾರರು ಇಲ್ಲದಿದ್ದರೆ ಗೋಶಾಲೆಗಳಿಗೆ ಸ್ಥಳಾಂತರಿಸಬೇಕೆಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts