More

    ನೆರವಿಗೆ ಬಿಸಿಯೂಟ ತಯಾರಕರ ಮನವಿ

    ಸವಣೂರ: ಏಪ್ರಿಲ್ ಹಾಗೂ ಮೇ ತಿಂಗಳುಗಳ ಗೌರವಧನ ಬಿಡುಗಡೆ ಹಾಗೂ ಕರೊನಾ ಲಾಕ್​ಡೌನ್​ಗೆ ವಿಶೇಷ ನೆರವು ನೀಡುವಂತೆ ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಸಂಘದ ತಾಲೂಕು ಘಟಕದಿಂದ ಶುಕ್ರವಾರ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

    ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ನಿತ್ಯ ಶುಚಿ, ರುಚಿಯಾದ ಅಡುಗೆ ಮಾಡಿ ನಾವು ಉಣಬಡಿಸುತ್ತಿದ್ದೇವೆ. ಆದರೆ, ಲಾಕ್​ಡೌನ್ ಘೊಷಣೆಯಾದ ಸಂದರ್ಭದಲ್ಲಿ ರಾಜ್ಯದ ವಿವಿಧ ಕಾರ್ವಿುಕರಿಗೆ 5 ಸಾವಿರ ಸಹಾಯಧನ ಘೊಷಣೆ ಮಾಡಿ ಅನುಕೂಲ ಕಲ್ಪಿಸಲಾಗಿದೆ. ನಮಗೆ ಯಾವುದೇ ನೆರವು ನೀಡಿಲ್ಲ. ನಾವು ಸಹ ಲಾಕ್​ಡೌನ್​ನಿಂದ ಸಮಸ್ಯೆಗೆ ಸಿಲುಕಿದ್ದೇವೆ. ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಯಾವುದೇ ಕೆಲಸವಿಲ್ಲದೇ ಮನೆಯಲ್ಲಿಯೇ ಇದ್ದು, ಜೀವನೋಪಾಯಕ್ಕೆ ಸಾಲ ಮಾಡಿದ್ದೇವೆ. ಸರ್ಕಾರ ಎಲ್ಲ ಕಾರ್ವಿುಕರಂತೆ ನಮ್ಮನ್ನು ಪರಿಗಣಿಸಿ ವಿಶೇಷ ನೆರವು ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.

    ಬಿಸಿಯೂಟ ತಯಾರಕರ ಸಂಘದ ಅಧ್ಯಕ್ಷೆ ಎಲ್.ಬಿ. ಬುಶೆಟ್ಟಿ, ಪಿ.ಎಂ. ಹಡಪದ, ಪ್ರೇಮಾ ಬಿ.ಟಿ., ಶೇಖವ್ವ, ಪ್ರಮಿಳಾ, ದಿಲ್​ಶಾದ, ಸುಜಾತಾ, ನಾಗವ್ವ, ಗಂಗವ್ವ ಹರಿಹರ, ವಿಜೀಯಾ ಮಿಳ್ಳೆ, ಭಾರತಿ ಕೊಕಾಟೆ, ನಿರ್ಮಲಾ ಕುಲಕರ್ಣಿ, ಲತಾ ತಳವಾರ, ಲಲಿತಾ, ಲಕ್ಷ್ಮವ್ವ ಇತರರು ಮನವಿ ಸಲ್ಲಿಸುವ ಸಮಯದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts