More

    ನೆಮ್ಮದಿಯ ಜೀವನಕ್ಕಾಗಿ ಸಂಘಟಿತರಾಗಿ ಹೋರಾಡಿ

     ಎನ್.ಆರ್.ಪುರ: ಕಾರ್ವಿುಕರು ನಿವೃತ್ತಿ ನಂತರ ನೆಮ್ಮದಿಯ ಬದುಕಿಗಾಗಿ ಸಂಘಟಿತರಾಗಬೇಕೆಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

    ಪಟ್ಟಣದ ಶನಿವಾರ ಉಮಾಮಹೇಶ್ವರ ಸಮುದಾಯ ಭವನದಲ್ಲಿ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ವಿುಕರ ನೂತನ ತಾಲೂಕು ಶಾಖೆ ಉದ್ಘಾಟಿಸಿ ಮಾತನಾಡಿದರು. 2006ರಲ್ಲಿ ಕಾರ್ವಿುಕರ ಅಭಿವೃದ್ಧಿ ಮಂಡಳಿ ಸ್ಥಾಪಿಸಿ 9.50 ಸಾವಿರ ಕೋಟಿ ರೂ. ಅನುದಾನ ಮಂಡಳಿಗೆ ನೀಡಿದ್ದಾರೆ. ಇದರಿಂದ ಇಂದು ವಾರ್ಷಿಕ 400 ಕೋಟಿ ರೂ. ಬಡ್ಡಿ ಬರುತ್ತಿದೆ. ಅರ್ಹರಿಗೆ ಮಾತ್ರ ಕಾರ್ವಿುಕರ ಗುರುತಿನ ಚೀಟಿ ದೊರೆಯುವಂತೆ ಮಾಡಬೇಕಿದೆ ಎಂದು ಹೇಳಿದರು.

    ಒಕ್ಕೂಟದ ಜಿಲ್ಲಾಧ್ಯಕ್ಷ ಜಯರಾಮ್ ಸಜಿತ್ ಮಾತನಾಡಿ, ಇಂದು ಅನೇಕ ಅನರ್ಹರು ಕಾರ್ವಿುಕರ ಕಾರ್ಡ್​ಗಳನ್ನು ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಮೊದಲು ಕಡಿವಾಣ ಹಾಕಬೇಕಾಗಿದೆ. ಕಾರ್ವಿುಕರಲ್ಲದವರು ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಿದ್ದಾರೆ ಎಂದರು.

    ಪಪಂ ಅಧ್ಯಕ್ಷೆ ಜುಬೇದಾ ಮಾತನಾಡಿ, ಮಧ್ಯವರ್ತಿಗಳು ಸರ್ಕಾರ ನೀಡುವ ಸವಲತ್ತುಗಳಿಂದ ಕಾರ್ವಿುಕರನ್ನು ವಂಚಿತರನ್ನಾಗಿ ಮಾಡುತ್ತಿದ್ದಾರೆ. ಅರ್ಹ ಕಾರ್ವಿುಕರಿಗೆ ಮಾತ್ರ ಸರ್ಕಾರದ ಸವಲತ್ತು ದೊರಕಿಸಿಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದು ಹೇಳಿದರು.

    ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ ಮಾತನಾಡಿ, ಶಾಸಕ ಟಿ.ಡಿ.ರಾಜೇಗೌಡ ಶ್ರಮದಿಂದಾಗಿ ಪಟ್ಟಣದಲ್ಲಿ ಕಾರ್ವಿುಕರ ಕಲ್ಯಾಣ ಇಲಾಖೆ ಕಚೇರಿ ಪ್ರಾರಂಭವಾಗಿದೆ. ಕರೊನಾ ಸಂದರ್ಭದಲ್ಲಿ ಶಾಸಕರು ಕಾರ್ವಿುಕರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅನೇಕರಿಗೆ ಕಿಟ್​ಗಳನ್ನು ವಿತರಿಸಿದ್ದಾರೆ ಎಂದರು.

    ಪಪಂ ಸದಸ್ಯರಾದ ಶೋಜ, ಎನ್.ಎಲ್.ಮುಕುಂದ, ಹಾಸನ ಕಾರ್ವಿುಕರ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಣ್ಣ, ಕಡೂರು ತಾಲೂಕು ಅಧ್ಯಕ್ಷ ಬಸವರಾಜ್, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ, ತಾಲೂಕು ಘಟಕದ ಅಧ್ಯಕ್ಷೆ ಎನ್.ಕೆ.ವಾಣಿ, ಸಂಘಟನಾ ಕಾರ್ಯದರ್ಶಿ ಬಿ.ಶೋಭಾ, ಶಿವಣ್ಣ ಇತರರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts