More

    ಕ್ರೋಧಿನಾಮ ಸಂವತ್ಸರ ನಾಡಿಗೆ ಉತ್ತಮ

    ಎನ್.ಆರ್.ಪುರ: ಕ್ರೋಧಿನಾಮ ಸಂವತ್ಸರವು ನಾಡಿಗೆ ಲಪ್ರದವಾಗಿದೆ ಎಂದು ಅಗ್ರಹಾರದ ಪುರೋಹಿತ ಪ್ರಸನ್ನ ಐತಾಳ್ ಹೇಳಿದರು.
    ಅಗ್ರಹಾರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಯುಗಾದಿ ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಪಂಚಾಂಗದ ಅಂಶಗಳನ್ನು ತಿಳಿಸುತ್ತಾ, ಈ ಬಾರಿಯ ಯುಗಾದಿಯು ಮಂಗಳವಾರ ಬಂದಿರುವುದರಿಂದ ದೇಶದಲ್ಲಿ ಉತ್ತಮ ಮಳೆಯಾಗುವ ಜತೆಯಲ್ಲಿ, ಅಲ್ಲಲ್ಲಿ ಪ್ರವಾಹ ಭೀತಿ ಉಂಟಾಗಿ ಬೆಳೆನಷ್ಟ. ಹೆಚ್ಚಾಗಿ ದಕ್ಷಿಣ ಭಾಗದಲ್ಲಿ ನದಿ,ಕೊಳ, ಸರೋವರಗಳು ತುಂಬಿ ತುಳುಕುತ್ತವೆ. ಚಂದ್ರನು ಧಾನ್ಯಾಧಿಪತಿಯಾಗಿರುವುದರಿಂದ ಗೋವುಗಳು ಸಮೃದ್ಧಿಯಾಗಿ ಹಾಲನ್ನು ಕೊಡುತ್ತವೆ. ಪ್ರಜೆಗಳು ಆರೋಗ್ಯವಾಗಿರುತ್ತಾರೆ. ಎಲ್ಲಾ ಸಸ್ಯಗಳು, ವೃಕ್ಷಗಳು ಚೆನ್ನಾಗಿ ಬೆಳೆಯುತ್ತವೆ.ವಾಣಿಜ್ಯ ಬೆಳೆಗಳಿಗೆ ಹೆಚ್ಚು ಬೆಲೆ ಸಿಗಲಿದೆ. ಕಬ್ಬು, ತೆಂಗು,ಎಣ್ಣೆಕಾಳುಗಳು, ಭೂಮಿಯೊಳಗಡೆ ಬೆಳೆಯುವ ಗೆಡ್ಡೆ ಜಾತಿಯಬೆಳೆಗಳು ಹಾಗೂ ತರಕಾರಿ ಬೆಳೆಗಳ ಇಳುವರಿ ಹೆಚ್ಚಾಗಲಿದೆ. ಈ ಬಾರಿ ಯಾವುದೇ ರೀತಿಯ ಕಾಯಿಲೆಗಳ ಆತಂಕವಿಲ್ಲ. ಪ್ರಕೃತಿ ವಿಕೋಪದ ಭಯವಿರುವುದಿಲ್ಲ ಎಂದರು.
    ರಾಮೋತ್ಸವದ ಪತ್ರಿಕೆ ಅನಾವರಣಗೊಳಿಸಲಾಯಿತು. ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಮಹಾಮಂಗಳಾರತಿ ನಂತರ ಎಲ್ಲರಿಗೂ ಬೇವು ಬೆಲ್ಲ ವಿತರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಎಚ್.ನಂಜುಂಡಸ್ವಾಮಿ, ರಾಮ ಸೇವಾ ಸಮಿತಿ ಅಧ್ಯಕ್ಷ ಶಿವಶಂಕರ್, ಕಾರ್ಯದರ್ಶಿ ಗುರುಮೂರ್ತಿ, ಶಶಿ ಮೋಹನ್, ನಾಗೇಶ್, ಶಂಕರ್ ಮತ್ತು ರಾಮಚಂದ್ರ , ಭಾಗ್ಯಾ ನಂಜುಂಡಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts