More

    ನೆಮ್ಮದಿಗಾಗಿ ಜನಪರ ಸೇವೆ

    ಸಂಬರಗಿ: ಬಡವರು, ರೈತರು, ನಿರ್ಗತಿಕರ ಸೇವೆಯಿಂದಲೇ ನನಗೆ ನೆಮ್ಮದಿ ಸಿಗುತ್ತದೆ. ಅದಕ್ಕಾಗಿ ನಾನು ಜನಪರ ಕಾರ್ಯ ಮಾಡುತ್ತೇನೆ ವಿನಃ ರಾಜಕೀಯ ಲಾಭಕ್ಕಾಗಿ ಅಲ್ಲ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.

    ಸಮೀಪದ ಮದಬಾವಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ರೈತರ ಆರ್ಥಿಕ ಬಲ ಹೆಚ್ಚಾಗಲು ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಗೊಳ್ಳಲೇಬೇಕಿದೆ. ನೀತಿ ಸಂಹಿತೆ ಜಾರಿಯಾಗುವ ಮುನ್ನ ಕಾಲುವೆಗೆ ನೀರು ಹರಿಸಲಾಗುತ್ತಿದೆ ಎಂದರು. ಬಿಜೆಪಿ ಮುಖಂಡ ಈಶ್ವರ ಕುಂಬಾರೆ ಮಾತನಾಡಿ, ಮದಬಾವಿ ಸಮಗ್ರ ಅಭಿವೃದ್ಧಿಗೆ ಇಲ್ಲಿಯವರೆಗೆ ಸುಮಾರು 100 ಕೋಟಿ ರೂ. ಅನುದಾನವನ್ನು ಶಾಸಕರು ತಂದಿದ್ದಾರೆ ಎಂದರು.

    ಮುಖಂಡ ಆರ್.ಎಂ.ಪಾಟೀಲ ಮಾತನಾಡಿ, ಶಾಸಕ ಶ್ರೀಮಂತ ಪಾಟೀಲ ಕಾಗವಾಡ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ ಹಾಗೂ ಕುಡಿಯುವ ನೀರು ಸೇರಿ ಮೂಲಸೌಕರ್ಯಕ್ಕೆ 3 ಸಾವಿರ ಕೋಟಿ ರೂ.ಗೂ. ಹೆಚ್ಚಿನ ಅನುದಾನ ತಂದಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಮುಖಂಡ ಮಹಾದೇವ ಕೋರೆ ಹಾಗೂ ಕೆಎಂಎಫ್ ನಿರ್ದೇಶಕ ಅಪ್ಪಾಸಾಹೇಬ ಅವತಾಡೆ ಮಾತನಾಡಿದರು. ಮುಖಂಡರಾದ ವಿನಾಯಕ ಬಾಗಡಿ, ತಮ್ಮಣ್ಣ ಪಾರಶೆಟ್ಟಿ, ಅಪ್ಪಾಸಾಹೇಬ ಚೌಗಲಾ, ಡಿ.ಕೆ.ಪವಾರ, ನಾನಾಸಾಹೇಬ ಅವತಾಡೆ, ನಿಜಗುಣಿ ಮಗದುಮ್ಮ, ಅಪ್ಪಣ್ಣ ಮಗದುಮ್ಮ, ಸಂಜಯ ಅದಾಟೆ, ಮುರಿಗೆಪ್ಪ ಮಗದುಮ್ಮ, ಪ್ರವೀಣ ಭಂಡಾರೆ, ಮಹಾಂತೇಶ ಕಾಂಬಳೆ, ಅಶೋಕ ಪೂಜಾರಿ, ರಂಜಿತ ಪೂಜಾರಿ, ರಾಮು ಮಗದುಮ್ಮ, ವಿಠ್ಠಲ ಅವಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts