More

    ನೆಟ್ಟ ಸಸಿಗಳು ಮರವಾಗಿವೆ, ಜಿಪಂ ಅಧ್ಯಕ್ಷೆ ಜಯಮ್ಮ ಮೆಲುಕು, ಸಿಇಒ ಎನ್.ಎಂ.ನಾಗರಾಜ್ ಭಾಗಿ

    ಬೆಂಗಳೂರು ಗ್ರಾಮಾಂತರ: ಕಳೆದ ವರ್ಷ ಪರಿಸರ ದಿನದಂದು ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಡಿಸಿ ಕಚೇರಿ ಎದುರು ಸಸಿ ನೆಡಲಾಗಿತ್ತು. ಇದೀಗ ಅವುಗಳೆಲ್ಲ ಬೆಳೆದು ಮರವಾಗುತ್ತಿವೆ. ಇಂಥ ಸಮಾಜಮುಖಿ ಕಾರ್ಯಕ್ರಮಗಳು ಸದಾ ಜನಮಾನಸದಲ್ಲಿ ಉಳಿಯುತ್ತವೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಮ್ಮಲಕ್ಷ್ಮೀನಾರಾಯಣ್ ಕಳೆದ ಸಾಲಿನ ಪರಿಸರ ದಿನಾಚರಣೆ ನೆನಪುಗಳನ್ನು ಮೆಲಕು ಹಾಕಿದರು.

    ದೇವನಹಳ್ಳಿ ತಾಲೂಕು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಜಿಪಂ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.

    ಪರಿಸರಕ್ಕೆ ಮರಗಿಡಗಳು ಅತ್ಯವಶ್ಯಕ. ಸಸಿಗಳನ್ನು ನೆಟ್ಟು ಅವುಗಳನ್ನು ಪಾಲಿಸುವ ಜವಾಬ್ದಾರಿ ಹೊತ್ತ್ತುಕೊಳ್ಳುವುದೂ ಅಷ್ಟೇ ಮುಖ್ಯ ಎಂದು ಹೇಳಿದರು.

    ಕಳೆದ ವರ್ಷ ಇದೇ ಜಾಗದಲ್ಲಿ ಪುಟ್ಟ ಸಸಿಗಳನ್ನು ನೆಡಲಾಗಿತ್ತು. ಈಗ ಅವುಗಳೆಲ್ಲ ಹಸಿರು ತುಂಬಿಕೊಂಡು ಎತ್ತರಕ್ಕೆ ಬೆಳೆದಿವೆ. ಕಳೆದ ಬಾರಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಸಾರ್ಥಕ ಎನಿಸಿದೆ. ಇದೇ ರೀತಿ ವರ್ಷ ಪೂರ್ತಿ ಮರಗಿಡಗಳನ್ನು ಬೆಳೆಸುವ ಕೆಲಸವಾಗಬೇಕು ಎಂದರು.

    ಮರಗಿಡ ರಕ್ಷಣೆ ಅತಿಮುಖ್ಯಪ್ರತಿಯೊಬ್ಬರೂ ಜೀವಮಾನದಲ್ಲಿ ಐದಾರು ಸಸಿಗಳನ್ನಾದರೂ ನೆಟ್ಟು ಅವುಗಳನ್ನು ರಕ್ಷಣೆ ಮಾಡಬೇಕು. ಇದು ನಾವು ಪರಿಸರಕ್ಕೆ ನೀಡುವ ಸಣ್ಣ ಕೊಡುಗೆಯಾಗಿದೆ ಎಂದು ಜಿಪಂ ಸಿಇಒ ಎನ್.ಎಂ.ನಾಗರಾಜ್ ಹೇಳಿದರು.

    ಗ್ರಾಮಾಂತರ ಜಿಲ್ಲೆಯಲ್ಲಿ ಸಾಧ್ಯವಾಗುವ ಎಲ್ಲ ಕಡೆಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂಥ ಕಾರ್ಯಗಳಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

    ಹಳೇ ನೆನಪಿನೊಂದಿಗೆ ಹೊಸ ಹುರುಪುಕಳೆದ ವರ್ಷ ವಿಶ್ವಪರಿಸರ ದಿನಾಚರಣೆ ಅಂಗವಾಗಿ ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ರಾಜ್ಯದಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಗ ಡಿಸಿ ಕಚೇರಿ ಎದುರು ನೇರಳೆ, ಹಲಸು ಸೇರಿ ವಿವಿಧ ಜಾತಿಯ ಹತ್ತಾರು ಸಸಿಗಳನ್ನು ನೆಡಲಾಗಿತ್ತು. ಅವುಗಳೆಲ್ಲ ಬೆಳೆದು ಮರವಾಗುತ್ತಿವೆ. ಪ್ರಸ್ತುತ ಈ ಸಾಲಿನಲ್ಲೂ ಜಿಪಂ ವತಿಯಿಂದ ಇದೇ ಜಾಗದಲ್ಲಿ ಮತ್ತಷ್ಟು ಸಸಿಗಳನ್ನು ನೆಡಲು ಜಿಪಂ ಉತ್ಸುಕತೆ ತೋರಿದ್ದು ವಿಶೇಷ.

    ಕಳೆದ ಸಾಲಿನಲ್ಲಿ ನೆಟ್ಟ ಸಸಿಗಳಲ್ಲಿ ಆಗಿನ ಜಿಲ್ಲಾಧಿಕಾರಿ ಕರೀಗೌಡ ಅವರು ಬಾಟಲಿ ಮೂಲಕ ಹನಿ ನೀರಾವರಿ ಪ್ರಯೋಗ ನಡೆಸಿ ಅದರಲ್ಲಿ ಯಶಸ್ವಿಯಾಗಿದ್ದರು. ಈ ಬಾರಿಯೂ ಇದೆ ಪ್ರಯೋಗದ ಮೂಲಕ ಸಸಿಗಳ ಪೋಷಣೆಗೆ ಸೂಚಿಸಲಾಗಿದೆ.

    ಜಯಮ್ಮ ಲಕ್ಷ್ಮೀನಾರಾಯಣ್, ಜಿಪಂ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts