More

    ನೃತ್ಯ, ಸಂಗೀತ, ನಾಟಕ ತರಲಿದೆ ನೆಮ್ಮದಿ

    ಚಿತ್ರದುರ್ಗ:ರಂಗಭೂಮಿ ಆರೋಗ್ಯ ಪೂರ್ಣ ಜಾಗತಿಕ ಸಂಬಂಧಗಳನ್ನು ಬಯಸುವ ಏಕೈಕ ಮಾಧ್ಯಮ ಎಂದು ಕತೆಗಾರ ಜಿ.ಎಸ್.ಉಜ್ಜಿನಪ್ಪ ಹೇಳಿದರು.
    ನಗರದ ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮನಸ್ಸಿನ ನೆಮ್ಮದಿಗೆ ನೃತ್ಯ, ಸಂಗೀತ, ನಾಟಕಗಳ ಅಗತ್ಯವಿದೆ ಎಂದರು.
    ಶಿಕ್ಷಣದಲ್ಲಿ ರಂಗಭೂಮಿ ಪ್ರಸ್ತುತತೆ ಕುರಿತು ಮಾತನಾಡಿದ ನಿವೃತ್ತ ಮುಖ್ಯಶಿಕ್ಷಕ ಹುರುಳಿಬಸವರಾಜ್, ರಂಗಭೂಮಿಗೆ ಯಾವುದೇ ಭಾಷೆ, ಸಂಸ್ಕೃತಿ, ಜಾತಿ, ಮತಪಂಥಗಳಿಲ್ಲ. ಇವನ್ನೂ ಮೀರಿ ರಂಗಭೂಮಿ ಜಗತ್ತಿನಾದ್ಯಂತ ಸಾಮರಸ್ಯವನ್ನು ಸಾರುತ್ತಿದೆ. ಶಿಕ್ಷಕರಿಗೆ ರಂಗಭೂಮಿ ಶಿಕ್ಷಣ ವರದಾನ ಆಗಲಿದೆ ಎಂದು ಹೇಳಿದರು.
    ಪ್ರಾಚಾರ್ಯ ಡಾ.ಎ.ಜಿ.ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ರಂಗನಿರ್ದೇಶಕ ಕೆಪಿಎಂ.ಗಣೇಶಯ್ಯ ಅವರು ರಂಗಸಂದೇಶ ವಾಚಿಸಿದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ನಿವೃತ್ತ ಮುಖ್ಯಶಿಕ್ಷಕ ವೆಂಕಟಸ್ವಾಮಿ, ಉಪ ನ್ಯಾಸಕರಾದ ಡಾ.ಕೆ.ಮೋಹನ್‌ಕುಮಾರ್, ಬಿ.ಎಸ್.ನಟರಾಜ, ಸ್ವಾತಿ, ಬಿ.ಹೇಮಲತಾ, ಪಲ್ಲವಿ ವಿಜಯ್, ಆರ್.ಕಾವೇರಿ, ಇ.ಮಹಾಂತೇಶ್ ಮತ್ತಿತರರು ಇದ್ದರು.
    ರಂಗಸೌರಭ ಕಲಾವಿದರು ರಂಗ ಗೀತೆಗಳನ್ನು ಹಾಡಿದರು. ಪ್ರಶಿಕ್ಷಣಾರ್ಥಿಗಳಾದ ಟಿ.ಲಕ್ಷ್ಮೀ ಮತ್ತು ಬಿ.ಮಮತಾ ಪ್ರಾರ್ಥಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts