More

    ನೂರು ಕೆಜಿ ಪ್ಲಾಸ್ಟಿಕ್ ವಶ

    ಚಿಕ್ಕಮಗಳೂರು: ನಗರದ ವಿವಿಧೆಡೆ ಅಂಗಡಿ, ಹೋಟೆಲ್​ಗಳ ಮೇಲೆ ಮಂಗಳವಾರ ನಗರಸಭೆ ಅಧಿಕಾರಿ, ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನೂರು ಕೆಜಿಗೂ ಹೆಚ್ಚು ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದಿದೆ. ಶುಚಿತ್ವ ಕಾಪಾಡದ ಹೋಟೆಲ್ ಮಾಲೀಕರಿಗೆ ದಂಡ ವಿಧಿಸಿದರು.

    ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ನೇತೃತ್ವದಲ್ಲಿ ರತ್ನಗಿರಿ ರಸ್ತೆ, ಉಪ್ಪಳ್ಳಿ, 60 ಅಡಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆದಿದ್ದು ಲಕ್ಷಿ್ಮಕೆಫೆ, ಅನ್ನಪೂರ್ಣ ಹೋಮ್ ಮೇಡ್ ಘಟಕ, ರೆಹಮಾನಿಯ ಟ್ರೇಡರ್ಸ್ ಇನ್ನಿತರೆ ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದರು. ಸ್ವಚ್ಛತೆ ಕಾಪಾಡಿಕೊಳ್ಳದ ಅಂಗಡಿಗೆ ದಂಡ ವಿಧಿಸಿ ಬಾಗಿಲು ಮುಚ್ಚಿಸಿದರು. ಪ್ರತಿ ಅಂಗಡಿಗಳಲ್ಲೂ 20 ಕೆಜಿಗೂ ಅಧಿಕ ಪ್ರಮಾಣದ ಪ್ಲಾಸ್ಟಿಕ್ ವಸ್ತುಗಳು ಪತ್ತೆಯಾದವು.

    ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, 10 ತಿಂಗಳಿನಿಂದ ನಗರವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ನಗರಸಭೆ ಅಧಿಕಾರಿ, ಸಿಬ್ಬಂದಿ ಪ್ರಯತ್ನಿಸುತ್ತಲೇ ಇದ್ದಾರೆ. ತಳ್ಳುವ ಗಾಡಿಗಳಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಕೆಲವು ಅಂಗಡಿಯವರು ಪ್ಲಾಸ್ಟಿಕ್ ವಸ್ತುಗಳನ್ನು ಬೇರೆ ಕಡೆ ಗೋಡಾನ್​ಗಳಲ್ಲಿ ಬಚ್ಚಿಟ್ಟು ಗ್ರಾಹಕರಿಗೆ ಕೊಡುತ್ತಿರುವುದು ನಗರಸಭೆ ಗಮನಕ್ಕೆ ಬಂದಿದೆ. ಇದೇರೀತಿ ಮುಂದುವರಿದರೆ ಅಂಗಡಿ ಪರವಾನಗೆ ರದ್ದುಗೊಳಿಸುವುದಾಗಿ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts