More

    ನುಡಿದಂತೆ ರೈತರ ಕಬ್ಬಿಗೆ ಹೆಚ್ಚು ದರ ನಿಗದಿ

    ಅಥಣಿ: ಸಹಕಾರ ತತ್ತ್ವದ ಆಧಾರದ ಮೇಲೆ ಪ್ರಾರಂಭಗೊಂಡ ದಿ. ಕಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ ಕಬ್ಬಿಗೆ 2700 ರೂ. ನೀಡಿ, ಕೇಂದ್ರ ಸರ್ಕಾರ ನಿಗದಿ ಪಡಿಸಿದ ಎ್ಆರ್‌ಪಿಗಿಂತಲೂ ಹೆಚ್ಚಿನ ದರ ನೀಡಿ ನುಡಿದಂತೆ ನಡೆದುಕೊಂಡಿದ್ದೇವೆ ಎಂದು ಕಾರ್ಖಾನೆ ಅಧ್ಯಕ್ಷ ಪರಪ್ಪಣ್ಣ ಸವದಿ ಹೇಳಿದರು.
    ಪಟ್ಟಣದ ಕಾರ್ಖಾನೆ ಆವರಣದಲ್ಲಿ ಈಚೆಗೆ ಆಯೋಜಿಸಿದ್ದ ಕಬ್ಬು ಅರೆಯುವ ಹಂಗಾಮಿನ ಮುಕ್ತಾಯ ಸಮಾರಂಭವನ್ನುದ್ದೇಶಿಸಿ ಮಾತನಾಡಿ, 2021-22ನೇ ಸಾಲಿನಲ್ಲಿ 134 ದಿನಗಳಲ್ಲಿ 7 ಲಕ್ಷ 23 ಸಾವಿರ ಟನ್ ಕಬ್ಬು ನುರಿಸುವ ಮೂಲಕ ಇತಿಹಾಸ ಸಷ್ಟಿಸಿದ್ದೇವೆ ಎಂದರು.

    ಈ ವರ್ಷ ಕಾರ್ಖಾನೆಗೆ ಐದು ವಿಭಾಗಗಳಿಂದ ಅತಿ ಹೆಚ್ಚು ಕಬ್ಬು ಪೂರೈಸಿದ ಟ್ರ್ಯಾಕ್ಟರ್ ಮಾಲೀಕರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಖಾನೆ ವ್ಯಾಪ್ತಿಯಲ್ಲಿ ಅತಿಹೆಚ್ಚು ಕಬ್ಬು ಪೂರೈಸಿದ ಮುರಗೆಪ್ಪ ಬಸಗೌಡ ಮುಳ್ಳಟ್ಟಿ ಪ್ರಥಮ 20 ಸಾವಿರ ರೂ., ಬಸಪ್ಪ ಭೀಮಪ್ಪ ಜಂಬಗಿ ದ್ವಿತೀಯ 10 ಸಾವಿರ ರೂ. ಹಾಗೂ ಬಾಳಪ್ಪ ಶಿವಲಿಂಗ ಠಕ್ಕಣ್ಣವರ ತತೀಯ 5 ಸಾವಿರ ರೂ. ನಗದು ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಖಾನೆ ಉಪಾಧ್ಯಕ್ಷ ಶಂಕರ ವಾಘಮೋಡೆ, ವ್ಯವಸ್ಥಾಪಕ ನಿರ್ದೆಶಕರಾದ ಜಿ.ಎಂ.ಪಾಟೀಲ, ಗುರುಬಸು ತೆವರಮನಿ, ಶಾಂತಿನಾಥ ನಂದೇಶ್ವರ, ಗೂಳಪ್ಪ ಜತ್ತಿ, ಸೌರಭ ಪಾಟೀಲ, ರಮೇಶ ಪಟ್ಟಣ, ಶಿದ್ರಾಮ ನಾಯಿಕ, ವಿಶ್ವನಾಥ ಪಾಟೀಲ, ಹನಮಂತ ಜಗದೇವ, ಸುನಂದಾ, ಶ್ರೀಶೈಲ ನಾಯಿಕ, ರುಕ್ಮಿಣಿ ಕುಲಕರ್ಣಿ, ಶ್ರೀಶೈಲ ನಾಯಿಕ, ಸತ್ಯಪ್ಪ ಪೂಜಾರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts