More

    ನೀವೂ ಬದುಕಿ, ನಿಮ್ಮವರನ್ನು ಬದುಕಿಸಿ…

    ಗದಗ: ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆಯು ಮರಣ ಮೃದಂಗ ಬಾರಿಸುತ್ತಿದ್ದು, ಸರ್ಕಾರ ಮಾರ್ಗಸೂಚಿಗಳನ್ನು ಜಾರಿಗೆ ತಂದರೂ ಜನ ಅದನ್ನು ಸರಿಯಾಗಿ ಪಾಲಿಸುತ್ತಿಲ್ಲ. ದಯವಿಟ್ಟು ಎಲ್ಲರೂ ಕೋವಿಡ್-19 ನಿಯಮ ಪಾಲಿಸಿ ನೀವೂ ಬದುಕಿ, ನಿಮ್ಮವರನ್ನು ಬದುಕಿಸಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ ಮನವಿ ಮಾಡಿದರು.
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೋವಿಡ್-19 ಜನಜಾಗೃತಿ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಂಚರಿಸಿ ಮಾಸ್ಕ್ ಮಾತನಾಡಿದರು.
    ಮುಂದಿನ ದಿನಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ, ನಾವೆಲ್ಲಾ ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗಿದೆ. ಬದುಕಿದ್ದರೆ ಮಾತ್ರ ವ್ಯಾಪಾರ, ವಹಿವಾಟು ಮಾಡಬಹುದು. ದಯವಿಟ್ಟು ಎಲ್ಲರೂ ಸರ್ಕಾರದ ನಿಯಮಗಳನ್ನು ಪಾಲಿಸಿ ಎಂದು ವ್ಯಾಪಾರಸ್ಥರಲ್ಲಿ ಮನವಿ ಮಾಡಿಕೊಂಡರು.
    ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ. ಮೌಲ್ವಿ ಅವರು ಮಾಸ್ಕ್ ಧರಿಸುವ ಕುರಿತು ತಿಳಿವಳಿಕೆ ನೀಡಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಬಿ. ಮತ್ತೂರ, ಜಂಟಿ ಕಾರ್ಯದರ್ಶಿ ಕುಮಾರ ಜಿ.ವಿ, ವಕೀಲರಾದ ಐ.ಎಲ್. ದೇಸಾಯಿ, ಗಿರೀಶ ಪಾಟೀಲ, ಎಂ.ಬಿ. ನದಾಫ್, ವೆಂಕಟೇಶ ಕುಲಕರ್ಣಿ, ಎಸ್.ಎ. ರಮಣಿ, ಸಂದೀಪ ಮಾನ್ವಿ, ಪ್ರಸಾದ ಸತ್ಯಣ್ಣವರ, ರೋಶನ್ ಕರ್ಜಗಿ ಉಪಸ್ಥಿತರಿದ್ದರು.
    ಸರ್ಕಾರದ ಕ್ರಮ ಅಭಿನಂದನೀಯ: ಗದಗ: ಜನತಾ ಕರ್ಫ್ಯೂ ಸಮಯದಲ್ಲೂ ಕಟ್ಟಡ ಕಾರ್ವಿುಕರ ಕೆಲಸ ಅಬಾಧಿತವಾಗಿ ಮುನ್ನಡೆದಿದೆ. ಕಾರ್ವಿುಕರ ಕಾರ್ಯಕ್ಕೆ ಅನುಕೂಲ ಮಾಡಿಕೊಟ್ಟ ಸರ್ಕಾರದ ಕ್ರಮ ಅಭಿನಂದನೀಯ ಎಂದು ಜಿಲ್ಲಾ ಕಟ್ಟಡ ಕಾರ್ವಿುಕರ ಅಧ್ಯಕ್ಷ ಎಂ.ಐ. ನವಲೂರ ತಿಳಿಸಿದ್ದಾರೆ. ಕಳೆದ ಲಾಕ್​ಡೌನ್​ನಲ್ಲಿ ಕಟ್ಟಡ ಕಾರ್ವಿುಕರಿಗೆ ನಿರ್ಬಂಧ ಹೇರಿದ್ದರಿಂದ ಕಾರ್ವಿುಕರು ಉಪಜೀವನ ನಡೆಸಲು ಪರದಾಡಿದ್ದರು. ಆದರೆ, ಈ ಬಾರಿ ನಮ್ಮ ಆಶೋತ್ತರಕ್ಕೆ ಸ್ಪಂದಿಸಿರುವ ಸರ್ಕಾರ ಕಟ್ಟಡ ಕಾರ್ವಿುಕರಿಗೆ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದು ಸಂತಸದ ಸಂಗತಿಯಾಗಿದೆ. ಸಂಘದ ವತಿಯಿಂದ ಜಿಲ್ಲೆಯಲ್ಲಿ ಕೆಲಸ ಮಾಡುವ ಕಾರ್ವಿುಕರಿಗೆ ಅಧಿಕೃತ ಗುರುತಿನ ಚೀಟಿ ನೀಡಲಾಗಿದ್ದು, ಪೊಲೀಸರು ಈ ಚೀಟಿ ಇರುವವರಿಗೆ ವಿನಾಯಿತಿ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
    ಬೀದಿ ಬದಿ ಜಾನುವಾರುಗಳಿಗೆ ಮೇವು: ಜನತಾ ಕರ್ಫ್ಯೂನಿಂದಾಗಿ ಕೇವಲ ಮಾನವರಷ್ಟೇ ಅಲ್ಲ, ಜಾನುವಾರುಗಳಿಗೂ ಸಂಕಷ್ಟ ಎದುರಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ಥಳೀಯ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವೂ ಬೀದಿ ಬದಿ ಜಾನುವಾರುಗಳಿಗೆ ಮೇವು ವಿತರಣೆ ಮಾಡುವ ಕಾಯಕಕ್ಕೆ ಮುಂದಾಗಿದೆ. ವಿವಿ ಸಿಬ್ಬಂದಿ ನಗರದಲ್ಲಿ ಸಂಚರಿಸಿ ಮೇವು ವಿತರಣೆ ಮಾಡುತ್ತಿದ್ದು ಆಸಕ್ತರು ಕೈ ಜೋಡಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ವಿಶ್ವವಿದ್ಯಾಲಯದ ಸಂಶೋಧನಾ ಸಂಯೋಜಕ ಲಿಂಗರಾಜ ನಿಡುವಣಿ (8050501377) ಅವರನ್ನು ಸಂರ್ಪಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts