More

    ನೀಲಮ್ಮ, ಜಗದೀಶ್ ಅವರಿಗೆ ಮೀನಸ್ ಶ್ರಮ ಜೀವಿ ಪ್ರಶಸ್ತಿ

    ಮೈಸೂರು: ಕಾಯಕದಲ್ಲಿಯೇ ಕೈಲಾಸ ಕಾಣುವ ಎನ್ನುವ ಶರಣ ನುಡಿಯದಂತೆ ಸ್ಮಶಾನದಲ್ಲಿಯೇ ಕೆಲಸ ಮಾಡುತ್ತಾ ಶವಗಳಿಗೆ ಗುಂಡಿ ತೋಡಗುವ ನೀಲಮ್ಮ ಅವರ ಸೇವೆ ಅನನ್ಯ ಎಂದು ನಿಕಟ ಪೂರ್ವ ರೋಟರಿ ಜಿಲ್ಲಾ ಗೌರ್ನರ್ ಎ.ಆರ್.ರವೀಂದ್ರ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು.
    ರೋಟರಿ ಮೈಸೂರು ಮಿಡ್‌ಟೌನ್‌ನಿಂದ ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವೀನಸ್ ಶ್ರಮಜೀವಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಅರ್ಹತೆ ಬೇರೆ, ಯೋಗ್ಯತೆ ಬೇರೆ. ಅವರ ಅರ್ಹತೆಗೆ ತಕ್ಕಂತೆ ಮಾನ್ಯತೆ ಸಿಗುತ್ತದೆ. ಅದೀಗ ಕಾಯಕವನ್ನೆ ದೇವರು ಎಂದು ಭಾವಿಸಿ ಹೆಚ್ಚಿನ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಿಕ ಸೇವೆ ಸಲ್ಲಿಸಿದವರಿಗೆ ಸನ್ಮಾನ ಭಾಗ್ಯ ಲಭಿಸಿದ್ದು ಪುಣ್ಯ ಎಂದು ಭಾವಿಸುತ್ತೇನೆ.
    ವಿದ್ಯಾರಣ್ಯಪುರಂ ವೀರಶೈವ ರುದ್ರಭೂಮಿಯಲ್ಲಿ ಶವಗಳಿಗೆ ಗುಂಡಿ ಕೋಡುವ ಕಾರ್ಯ ಮಾಡುತ್ತಿರುವ ನೀಲಮ್ಮ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕಚೇರಿ ಸಹಾಯಕರಾಗಿರುವ ಎನ್.ಜಗದೀಶ್ ಉತ್ತಮ ಕಾಯಕ ಜೀವಿಗಳು. ಅಂತವರನ್ನು ಸಂಸ್ಥೆ ಗುರುತಿಸಿ ಸನ್ಮಾನಿಸುತ್ತಿರುವುದು ಅತ್ಯಂತ ಸಂತಸ ವಿಷಯ ಎಂದರು.
    ಎಲೆಮರೆಕಾಯಿಯಂತೆ ಸೇವೆ ಸಲ್ಲಿಸುತ್ತಿರುವವರನ್ನು ಹುಡುಕಿ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಒಂದು ದೊಡ್ಡ ಸಾಧನೆಯೇ ಸರಿ. ಲೇಡಿ ಹರಿಶ್ಚಂದ್ರ ಎಂದೇ ಬಿರುದು ಪಡೆದಿರುವ ನೀಲಮ್ಮ ಅವರು ಇಲ್ಲಿಯವರೆಗೆ ಸುಮಾರು 5 ಸಾವಿರ ಶವಗಳಿಗೆ ಗುಂಡಿ ತೋಡುವ ಕಾಯಕದಿಂದಾಗಿ ಶವಸಂಸ್ಕಾರಕ್ಕೆ ಸಹಕರಿಸಿದ್ದಾರೆ. ನೀಲಮ್ಮರಿಗೆ ತಾವು ಮಾಡುತ್ತಿರುವ ಸೇವೆ ಬಗ್ಗೆ ತಿಳಿದೇ ಇಲ್ಲ. ಇದೊಂದು ಸಾಮಾನ್ಯ ಕೆಲಸವೆಂದು ಭಾವಿಸಿ, ಹಣಕ್ಕೆ ಆಸೆ ಪಡದೇ ನಿಷ್ಕಲ್ಮಶ ಮನಸ್ಸಿನಿಂದ ಸೇವೆ ಸಲ್ಲಿಸುವ ಮೂಲಕ ಅಪರೂಪದ ವ್ಯಕ್ತಿಯಾಗಿದ್ದಾರೆ ಎಂದರು.
    ಸತ್ತವರು ದೇವರ ಸಮಾನ:
    ಸನ್ಮಾನ ಸ್ವೀಕರಿಸಿ ಮಾತನಾಡಿದ ನೀಲಮ್ಮ ಅವರು, ಸುಮಾರು 30 ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿಕೊಂಡಿದ್ದು, ಇದರಲ್ಲಿಯೇ ದೇವರನ್ನು ಕಾಣುತ್ತಿದ್ದೇನೆ. ಸತ್ತವರೆಲ್ಲ ದೇವರ ಸಮಾನ ಎನ್ನುವ ಭಾವನೆ ಇರುವುದರಿಂದ ನನಗೆ ಯಾವ ಹೆದರಿಕೆ ಇಲ್ಲ. ಹಾಗಾಗಿ ಸನ್ಮಾನದಲ್ಲಿಯೇ ವಾಸಿಸುತ್ತಿದ್ದೇನೆ ಎಂದರು.
    ಸಹಜ ಸಾವಿಗೀಡಾದ ಶವಗಳು ಬಂದಾಗ ಅಷ್ಟೇನೂ ಬೇಸರವಾಗಲ್ಲ. ಆದರೆ ಚಿಕ್ಕಮಕ್ಕಳು, ವಯಸ್ಸಿರುವಂತವರು ಸಾವನ್ನಪ್ಪಿದರೆ ತುಂಬಾ ಬೇಸರವಾಗುತ್ತದೆ. ಆತ್ಮಹತ್ಯೆ ಸಾವುಗಳು ಬಂದರೆ ತುಂಬಾ ಕೋಪ ಬರುತ್ತೆ. ತಮ್ಮ ಅಮೂಲ್ಯವಾದ ಜೀವವನ್ನು ಕೊಂದುಕೊಂಡಿದ್ದಲ್ಲದೇ ತಮ್ಮ ಹೆತ್ತವರಿಗೆ ಅಪಾರ ನೋವು ನೀಡಿರುತ್ತಾರೆ ಎನ್ನುವ ಬೇಸರ ಅಗುತ್ತದೆ ಎಂದು ಹೇಳಿದರು.
    ರೋಟರಿ ಮಿಡ್ ಟೌನ್ ಅಧ್ಯಕ್ಷ ನವೀನ್‌ಚಂದ್ರ, ಕಾರ್ಯದರ್ಶಿ ಕುಮಾರಸ್ವಾಮಿ, ರೋಟರಿಯ ಭೀಮೇಶ್, ವೆಂಕಟೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts