More

    ನೀರ್ ಕೊಡದ ಖರ್ಗೆ ಕಿಡಿಕಾರಿದ ತೇಜಸ್ವಿ

    ಕಲಬುರಗಿ: ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗುರುವಾರ ಪ್ರವಾಸ ಕೈಗೊಂಡಿರುವ ಸಂಸದ, ಬಿಜೆಪಿ ರಾಷ್ಟಿçÃಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕೆಂಡಕಾರಿದ್ದಾರೆ.

    ಖಾನಾಪುರ ಗ್ರಾಮದಲ್ಲಿ ಜಲಜೀವನ್ ಮಿಷನ್ ಅಡಿ ನಲ್ಲಿ ನೀರಿನ ಸಂಪರ್ಕ ಪರಿಶೀಲಿಸಿ ಫಲಾನುಭವಿಗಳ ಜತೆ ಚರ್ಚಿಸಿದರು. ನಮ್ಮ ಮನೆಗೆ ಈಗ ನಿತ್ಯ ನೀರು ಬರುತ್ತಿದೆ ಎಂದು ಸ್ಥಳೀಯರು ತೇಜಸ್ವಿ ಗಮನಕ್ಕೆ ತಂದರು. ಬಳಿಕ ಈ ಬಗ್ಗೆ ಟ್ವೀಟ್ ಮಾಡಿದ ತೇಜಸ್ವಿ, ಒಂಬತ್ತು ಸಲ ಶಾಸಕ, ಒಮ್ಮೆ ಸಂಸದರಾಗಿ ಜನರಿಗೆ ನೀರು ಕೊಡದ ಮಲ್ಲಿಕಾರ್ಜುನ ಖರ್ಗೆ ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದ್ದಾರೆ.

    ಕಲಬುರಗಿ ಜಿಲ್ಲೆಯಲ್ಲಿ ೨೦೧೯ರವರೆಗೆ ಕೇವಲ ೬೮,೭೦೯ ನಲ್ಲಿ ನೀರಿನ ಸಂಪರ್ಕ (ಶೇ.೧೫) ಇದ್ದರೆ, ೨೦೧೯ರ ನಂತರ ೧,೮೭,೧೨೮ ಮನೆಗಳಿಗೆ ನೇರ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಹಿಂದುಳಿದ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಆಡಳಿತದ ವ್ಯತ್ಯಾಸವನ್ನು ಈ ಮೂಲಕ ಗಮನಿಸಬಹುದು. ನಮ್ಮಿಂದಾದ ಕೆಲಸ ಖರ್ಗೆ ಅವರಿಂದ ಏಕೆ ಆಗಿಲ್ಲ ಎಂದು ಟಾಂಗ್ ನೀಡಿದ್ದಾರೆ.

    ಸುದೀರ್ಘ ಅವಧಿ ಈ ಭಾಗವನ್ನು ಖರ್ಗೆ ಪ್ರತಿನಿಧಿಸಿದ್ದರೂ ಅಭಿವೃದ್ಧಿ ಬಗ್ಗೆ ಕಾಳಜಿ ತೋರಿಸಲಿಲ್ಲ. ರಾಜ್ಯದ ಅತಿ ಹಿಂದುಳಿದ ಪ್ರದೇಶದ ಜನತೆಯನ್ನು ಮೂಲಸೌಕರ್ಯಗಳಿಂದ ವಂಚಿಸಿz್ದÉÃ ಕಾಂಗ್ರೆಸ್. ಈ ಪಕ್ಷವನ್ನು ಜನರು ಮೂಲೆಗೆ ತಳ್ಳಲಿದ್ದಾರೆ ಎಂದಿದ್ದಾರೆ.

    ಗ್ರಾಮದ ಯಮನಪ್ಪ ಪೂಜಾರಿ ನಿವಾಸಕ್ಕೆ ಭೇಟಿ ನೀಡಿದಾಗ ಎರಡು ತಿಂಗಳ ಹಿಂದಷ್ಟೇ ತಮ್ಮ ಮನೆಗೆ ಜಲಜೀವನ್ ಮಿಷನ್ ಅಡಿ ನಲ್ಲಿ ನೀರು ಸಂಪರ್ಕ ಕಲ್ಪಿಸಿದ್ದು, ನಿರಂತರ ನೀರು ಬರುತ್ತಿದೆ ಎಂದು ಹೇಳಿದರು. ಬಿಜೆಪಿ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಇದು ನನಗೆ ಖುಷಿ ತಂದಿದೆ ಎಂದು ತೇಜಸ್ವಿ ಹೇಳಿದ್ದಾರೆ. ಬರುವ ದಿನಗಳಲ್ಲಿ ಪ್ರಧಾನಿ ಮೋದಿ, ರಾಜ್ಯದ ಬಿಜೆಪಿಗೆ ನಿಮ್ಮ ಆಶೀರ್ವಾದ ಇರಲಿ ಎಂದೂ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts