More

    ನೀರು ಪೂರೈಸುವಂತೆ ನಿವಾಸಿಗಳ ಪ್ರತಿಭಟನೆ

    ಬೆಳಗಾವಿ: ಸಹ್ಯಾದ್ರಿ ನಗರದಲ್ಲಿ ನಿಯಮಿತವಾಗಿ ನೀರು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿ ನಿವಾಸಿಗಳು ಗುರುವಾರ ಜಿಲ್ಲಾಧಿಕಾರಿ ಎದುರು ಪ್ರತಿಭಟಿಸಿ, ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

    ನೀರಿಲ್ಲದಿದ್ದರೆ ಜೀವನ ದುಸ್ತರ. ಸತತ ಮೂರು ವರ್ಷಗಳಿಂದ ನಮಗೆ ನೀರಿನ ಬವಣೆ ತಪ್ಪಿಲ್ಲ. ಸಹ್ಯಾದ್ರಿ ನಗರದ ಸಾರಥಿ ನಗರ, ಡಿ-ಗ್ರೂಪ್ ಕಾಲನಿ, ಪೊಲೀಸ್ ಕಾಲನಿ, ಆಶ್ರಯ ಕಾಲನಿಗಳಲ್ಲಿ ಈ ಮೊದಲು ನಾಲ್ಕು ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತಿತ್ತು. ಪ್ರಸ್ತುತ 8 ದಿನಗಳಿಗೊಮ್ಮೆ ನೀರಿನ ಸರಬರಾಜು ಆಗುತ್ತಿರುವುದರಿಂದ ಎಲ್ಲ ಕಾಲನಿಗಳ ನಿವಾಸಿಗಳಿಗೆ ಬಹಳ ತೊಂದರೆಯಾಗಿದೆ. ಹಿಡಕಲ್ ಡ್ಯಾಂ, ರಕ್ಕಸಕೊಪ್ಪ ತುಂಬಿ ತುಳುಕುತ್ತಿದ್ದರೂ ನಮಗೆ ನೀರಿನ ಬವಣೆ ತಪ್ಪಿಲ್ಲ. ಈ ಕೂಡಲೇ ನಿಯಮಿತವಾಗಿ ನೀರು ಬಿಡುಗಡೆ ಮಾಡಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಖಾಲಿ ಕೊಡಗಳನ್ನು ಹಿಡಿದು ಬಾಕ್ಸೈಟ್ ರಸ್ತೆ ಸಂಚಾರ ಸ್ಥಗಿತಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಎಸ್.ಎಸ್. ಜಗಜಂಪಿ, ಆರ್.ಎಂ. ಹಿರೇಮಠ, ಯೋಗೇಶ ಆಚಾರಿ, ಎಸ್.ಡಿ. ಕರಿಶೆಟ್ಟಿ, ಎಂ.ಕೆ. ತಂಗಡಿ, ಎಂ.ಜಿ. ಮುಜಾವರ, ಸುಶೀಲಮ್ಮ ಕಾಂಬಳೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts