More

    ನೀರುಪಾಲಾಗಿದ್ದ ವೃದ್ಧೆಯ ದೇಹ ಪತ್ತೆ

    ಕಡೂರು: ತಾಲೂಕಿನ ಮದಗದಕೆರೆಯ ಕಾಲುವೆಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರುಪಾಲಾಗಿದ್ದ ವೃದ್ಧೆಯ ಮೃತದೇಹವನ್ನು ಅಗ್ನಿಶಾಮಕದಳದ ಸಿಬ್ಬಂದಿ ಬುಧವಾರ ಹೊರತೆಗೆದರು.

    ಹೊಸಸಿದ್ದರಹಳ್ಳಿ ಗ್ರಾಮದ ರೇವಮ್ಮ (63) ಮೃತರು. ಮಂಗಳವಾರ ಸಂಜೆ ಹೊಸಸಿದ್ದರಹಳ್ಳಿ-ಸಗನಿಬಸವನಹಳ್ಳಿ ಸಂಪರ್ಕಗೊಳ್ಳುವ ಮದಗದಕೆರೆಗೆ ಹರಿಯುವ ತಾಯಿಹಳ್ಳದ ಕಾಲುವೆ ಬಳಿ ರಸ್ತೆ ಮಾರ್ಗದಲ್ಲಿ ಹಾದು ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.
    ಘಟನಾ ಸ್ಥಳದಲ್ಲಿ ವೃದ್ಧೆಯ ಚಪ್ಪಲಿ ಹಾಗೂ ಊರುಗೋಲು ಪತ್ತೆಯಾಗಿದ್ದರಿಂದ ಗ್ರಾಮಸ್ಥರು ಕಾಲು ಜಾರಿಬಿದ್ದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಬುಧವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್ ಹಾಗೂ ತಹಸೀಲ್ದಾರ್ ಕವಿರಾಜ್ ಭೇಟಿ ನೀಡಿ ಅಗ್ನಿಶಾಮಕದಳ ಸಿಬ್ಬಂದಿ ಮೂಲಕ ಮೃತರ ಶವದ ಪತ್ತೆಗಾಗಿ ಬೋಟ್ ಸಹಾಯದ ಮೂಲಕ ಶೋಧ ಕಾರ್ಯಾಚರಣೆ ಕೈಗೊಂಡರು.
    ಸತತ 3 ಗಂಟೆಗೂ ಹೆಚ್ಚು ಕಾಲ ಹುಡುಕಾಟ ನಡೆಸಿದ ನಂತರ ಬೆಳಗ್ಗೆ 11ಕ್ಕೆ ಕಾಲುವೆಯ ಪೊದೆಯೊಳಗೆ ಸಿಲುಕಿಕೊಂಡಿದ್ದ ವೃದ್ಧೆಯ ಶವವನ್ನು ಪತ್ತೆಹಚ್ಚಿ ಹೊರತೆಗೆಯಲಾಯಿತು. ಸಖರಾಯಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸಲು ಕಡೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಯಿತು. ಘಟನಾ ಸ್ಥಳದಲ್ಲಿ ಕಡೂರು ಸಿಪಿಐ ಶಿವಕುಮಾರ್, ಸಖರಾಯಪಟ್ಟಣ ಪಿಎಸ್‌ಐ ಕಿರಣ್ಕುಮಾರ್ , ಕಂದಾಯ ವಿಭಾಗದ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts