More

    ನೀರಿಲ್ಲದ ಜೀವನವನ್ನು ಊಹಿಸಲೂ ಆಗದು

    ಚಿತ್ರದುರ್ಗ:ಪ್ರಕೃತಿ ಸಂಪತ್ತಿನ ಮನಸೋ ಇಚ್ಛೆ ಬಳಕೆಯಿಂದ ಭವಿಷ್ಯದಲ್ಲಿ ಸಕಲ ಜೀವರಾಶಿಗಳಿಗೂ ಆಪತ್ತು ಎದುರಾಗಲಿದೆ ಎಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಪ್ರೊ.ಆರ್.ಕೆ.ರಂಗಸ್ವಾಮಿ ಆತಂಕ ವ್ಯಕ್ತಪಡಿಸಿದರು. ನೆಹರು ಯುವ ಕೇಂದ್ರ‘ನ್ಯಾಷನಲ್ ವಾಟರ್ ಮಿಷನ್’ಅಡಿ ಮಳೆನೀರು ಹೇಗೆ ಹಿಡಿದು ಸಂರಕ್ಷಿಸಿಟ್ಟು ಕೊಳ್ಳ ಬೇಕೆಂಬುದರ ಕುರಿತು ಗುರುವಾರ ಗುರುವಾರ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಸಹಿತ ಎಲ್ಲ ಜೀವರಾಶಿಗಳಿಗೂ ನೀರು ಬಹಳ ಮುಖ್ಯ.
    ನೀರಿಲ್ಲದ ಜೀವನವನ್ನು ಊಹಿಸಲೂ ಆಗದು. ಮಳೆನೀರನ್ನು ವ್ಯರ್ಥವಾಗಲು ಬಿಡದೆ ಅದರ ಸಂರಕ್ಷಣೆ,ಸದ್ಬಳಕೆ ಅರಿವು ಪ್ರತಿಯೊ ಬ್ಬರಲ್ಲೂ ಮೂಡಬೇಕು. ಮಾನವನ ದುರಾಸೆಯಿಂದ ನೀರು ಕಲುಷಿತಗೊಳ್ಳುತ್ತಿದೆ. ನಗರದ ಹೊರವಲಯ ಮಲ್ಲಾಪುರ ಕೆರೆ ಭರ್ತಿ ಇ ದ್ದರೂ ಪ್ರಯೋಜನಕ್ಕೆ ಬಾರದಾಗಿದೆ. ನಗರದ ತ್ಯಾಜ್ಯನೀರಿನಿಂದ ಕೆರೆ ನೀರು ಕಲುಷಿತವಾಗಿದ್ದು,ವೈಜ್ಞಾನಿಕ ಶುದ್ಧೀಕರಣದ ಅಗತ್ಯವಿದೆ ಎಂದರು.

    ಅಂತರ್ಜಲ ತಜ್ಞ ಎನ್.ಜೆ.ದೇವರಾಜರೆಡ್ಡಿ ಮಾತನಾಡಿ,ನಾಗರಿಕರಲ್ಲಿ ಜಲಸಾಕ್ಷರತೆ ಕೊರತೆಯಿದೆ. ದೇಶದಲ್ಲಿಯೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಕೇರಳವಾಗಿದ್ದರೂ ಅಲ್ಲಿ ಜಲಸಾಕ್ಷರತೆ ಮತ್ತು ನೀರಿನ ಮಿತಬಳಕೆ ಕುರಿತು ಅರಿವು ಜಾಸ್ತಿಯಿದೆ. ಪ್ರಕೃತಿ ವಿಕೋಪ, ಹ ವಾಮಾನ ವೈಪರೀತ್ಯದಿಂದಾಗಿ ಮಳೆಯ ಪ್ರಮಾಣ ಮತ್ತು ಕಾಲಮಾನದಲ್ಲಿ ಏರುಪೇರಾಗುತ್ತಿದೆ. ಸಬ್ಸಿಡಿಗೆ ಕಾಯದೆ ಯು ದ್ದೋಪಾದಿ ಯಲ್ಲಿ ಜಲಸಂರಕ್ಷಣೆಗೆ ಮುಂದಾಗ ಬೇಕಿದೆ ಎಂದರು. ಪ್ರೊ.ರಮೇಶ್ ಎಚ್.ರಟಗೇರಿ,ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಎನ್.ಸುಹಾಸ್,ಪ್ರೊ.ಬಿ. ಟಿ.ನಟರಾಜ್ ಇದ್ದರು. ವಿದ್ಯಾರ್ಥಿನಿಯರಾದ ಹೇಮಾ ಪ್ರಾರ್ಥಿಸಿ,ರಕ್ಷಾ ಸ್ವಾಗತಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts