More

    ನೀರಿಗಾಗಿ ಗ್ರಾಮಸ್ಥರ ಪರದಾಟ

    ಅರಟಾಳ, ಬೆಳಗಾವಿ: ಸತತವಾಗಿ ಸುರಿದ ಮುಂಗಾರಿನಿಂದ ಅಥಣಿ ತಾಲೂಕಿನ ಅನೇಕ ಬೆಳೆಗಳು ಹಾಳಾದರೆ, ಇನ್ನೊಂದು ಕಡೆ ಜನರು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
    ತಾಲೂಕಿನ ಐಗಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಳಪಡುವ 13 ಗ್ರಾಮಗಳಲ್ಲಿ 15 ದಿನಗಳಿಂದ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಗ್ರಾಮಸ್ಥರು ಕುಡಿಯಲು, ದಿನಬಳಕೆ ನೀರಿಗಾಗಿ ಅಲೆದಾಡುತ್ತಿದ್ದಾರೆ. ಏಳೆಂಟು ವರ್ಷದ ಹಿಂದೆ ಅಥಣಿ ತಾಲೂಕಿನ ಅರಟಾಳ, ಬಾಡಗಿ, ಹಾಲಳ್ಳಿ, ಐಗಳಿ, ತೆಲಸಂಗ, ಕವಳಿ, ಅಡಹಳ್ಳಿ, ಪಡತಾರವಾಡಿ, ಕನಾಳ, ಕಕಮರಿ, ಕಿರಸರ ದಡ್ಡಿ, ಬನ್ನೂರು, ಅಡಹಳಹಟ್ಟಿ ಗ್ರಾಮಗಳಲ್ಲಿ ಪ್ರಾರಂಭವಾದ ಯೋಜನೆ ಮೂಲಕ ಮೊದಲಿನ ಮೂರು ವರ್ಷಗಳ ಸರಿಯಾಗಿ ನೀರು ಪೂರೈಸಿತ್ತು. ನಂತರ ಮೋಟರ್ ಸುಡುವುದು ಹಾಗೂ ಪೈಪ್ ಲಿಕೇಜ್ ಸೇರಿ ಅನೇಕ ತಾಂತ್ರಿಕ ದೋಷಗಳಿಂದ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ.

    ಹಿಂದೆ ಅನೇಕ ಬಾರಿ ಸಮರ್ಪಕ ನೀರು ಪೂರೈಕೆಯಾಗದಿದ್ದಕ್ಕೆ ಗ್ರಾಪಂಗೆ, ತಾಪಂಗೆ ಸೇರಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಾಗ ದುರಸ್ತಿ ಕಾರ್ಯ ಕೈಗೊಂಡು ನೀರು ಪೂರೈಕೆ ಮಾಡುತ್ತಿದ್ದರು. ಆದರೆ, ಮೂರ್ನಾಲ್ಕು ವಾರಗಳಲ್ಲಿ ಮತ್ತೆ ತಾಂತ್ರಿಕ ತೊಂದರೆಗಳಿಂದ ನೀರು ಪೂರೈಕೆ ಬಂದ್ ಆಗುತ್ತಿತ್ತು. 15 ದಿನಗಳಿಂದ ಯೋಜನೆಗೆ ಒಳಪಡುವ 13 ಗ್ರಾಮಗಳಲ್ಲಿ ಹನಿ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಗ್ರಾಮದ ಮಹಿಳೆಯರು ತೋಟದ ಬೋರ್‌ವೆಲ್‌ಗಳಿಗೆ ತೆರಳಿ ನೀರು ತರುತ್ತಿದ್ದಾರೆ. ಇದರಿಂದ ಬೇಸತ್ತ ಬಾಡಗಿ ಗ್ರಾಮದ ಮಹಿಳೆಯರು ಭಾನುವಾರ ಪ್ರತಿಭಟನೆ ನಡೆಸಿದರು. ನೀರು ಪೂರೈಕೆಯಾಗದ ಬಗ್ಗೆ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಇದುವರೆಗೆ ನೀರು ಪೂರೈಕೆಗೆ ಕ್ರಮ ಕೈಗೊಂಡಿಲ್ಲ. ಆದಷ್ಟು ಬೇಗ ನೀರು ಪೂರೈಸದಿದ್ದರೆ ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಬಾಡಗಿ ಗ್ರಾಮದ ಶೋಭವ್ವ ಜಂಬಗಿ, ರೇಖಾ ಹಳ್ಳಿ, ಕೃಷ್ಣವ್ವ ಕೋಳಿ, ಶಾಂತವ್ವ ಡವಳೇಶ್ವರ, ಶೋಭವ್ವ ಮಿರ್ಜಿ, ಅನುಸವ್ವ ಕರಿಗಾರ, ಲಕ್ಷ್ಮೀಬಾಯಿ ಗಾಡಿವಡ್ಡರ, ನಾಗವ್ವ ಮುಧೋಳ, ಮಹಾದೇವ ಹಿರೇಕುರುಬರ, ಭಿರಪ್ಪ ಹಿರೇಕುರುಬರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts