More

    ನಿಸರ್ಗ ಉದ್ಯಾನದಲ್ಲಿ ಹಾರ್ನಬಿಲ್ ಉತ್ಸವ

    ಹಳಿಯಾಳ: ಪಟ್ಟಣದ ಕಿಲ್ಲಾ ಕೋಟೆ ಮತ್ತು ಮರಡಿ ಗುಡ್ಡದಲ್ಲಿರುವ ನಿಸರ್ಗ ಉದ್ಯಾನಗಳತ್ತ ಪ್ರವಾಸಿಗರನ್ನು ಆಕರ್ಷಿಸಲು ಯೋಜಿಸಲಾಗುತ್ತಿದ್ದು, ಈ ಬಾರಿ ಹಾರ್ನಬಿಲ್ ಉತ್ಸವದ ಕೆಲವು ಕಾರ್ಯಕ್ರಮಗಳನ್ನು ಹಳಿಯಾಳದ ನಿಸರ್ಗ ಉದ್ಯಾನದಲ್ಲಿ ನಡೆಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಹೇಳಿದರು.

    ಇಲ್ಲಿಯ ಮರಡಿ ಗುಡ್ಡದಲ್ಲಿರುವ ನಿಸರ್ಗ ಉದ್ಯಾನದಲ್ಲಿ ಗುರುವಾರ ಆಯೋಜಿಸಿದ್ದ ನಿರ್ವಹಣೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ಯಾನಗಳ ನಿರ್ವಹಣೆ ಪರಿಣಾಮಕಾರಿಯಾಗಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಅವಶ್ಯವಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಮಿತಿಯ ಸಭೆ ನಡೆಸಿ ಉದ್ಯಾನಗಳ ಸ್ಥಿತಿಗತಿಗಳನ್ನು ಪರಿಶೀಲಿಸಲಾಗುವುದು ಎಂದರು.

    ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ ಮಾತನಾಡಿ, ಈವರೆಗೆ ಕಿಲ್ಲಾ ಕೋಟೆ ವೀಕ್ಷಣೆಯಿಂದ 1.15 ಲಕ್ಷ ರೂ. ಹಾಗೂ ಮರಡಿ ಗುಡ್ಡ ವೀಕ್ಷಣೆಯಿಂದ 1.89 ಲಕ್ಷ ರೂ. ಪ್ರವೇಶ ಶುಲ್ಕ ಸಂಗ್ರಹಿಸಲಾಗಿದೆ ಎಂದರು.

    ವಿ.ಆರ್.ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಮಾತನಾಡಿ, ಉದ್ಯಾನದಲ್ಲಿರುವ ಮಕ್ಕಳ ಆಟಿಕೆಗಳನ್ನು ನಮ್ಮ ಸಂಸ್ಥೆಯ ವತಿಯಿಂದ ದುರಸ್ತಿ ಮಾಡಿಕೊಡಲಾಗುವುದು ಎಂದರು.

    ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಸಿಪಿಐ ಬಿ.ಎಸ್. ಲೋಕಾಪುರ ಮಾತನಾಡಿದರು. ಬಿಇಒ ಸಮೀರ್ ಮುಲ್ಲಾ, ಶಿರಸ್ತೇದಾರ್ ಅನಂತ ಚಿಪ್ಪಲಗಟ್ಟಿ, ವಲಯ ಅರಣ್ಯಾಧಿಕಾರಿ ಪ್ರಸನ್ನ ಸುಬೇದಾರ, ತಾ.ಪಂ. ವ್ಯವಸ್ಥಾಪಕ ಬೆನಿತ್ ಪಣ್ಸೆಕರ, ಮಂಗಳಾ ಕಶೀಲಕರ, ಭಾರತಿ ಬಿರ್ಜೆ, ವಿಲಾಸ ಕಣಗಲಿ, ಮಹಮದ್ ಸೈಫ್ ಮೊದಲಾದವರು ಉಪಸ್ಥಿತರಿದ್ದರು.

    ಸ್ವಚ್ಛತೆ ಮತ್ತು ಹಸರೀಕರಣ : ಉದ್ಯಾನಗಳನ್ನು ಸ್ವಚ್ಛವಾಗಿಡಲು ಹಾಗೂ ಹಸರೀಕರಣಗೊಳಿಸಲು ತೀರ್ವನಿಸಲಾಯಿತು. ಎನ್​ಸಿಸಿ ಹಾಗೂ ಎನ್​ಎಸ್​ಎಸ್ ವಿದ್ಯಾರ್ಥಿಗಳಿಂದ ಉದ್ಯಾನದಲ್ಲಿ ಸ್ವಚ್ಛತೆ ಕೈಗೊಳ್ಳಲು ಠರಾವು ಪಾಸು ಮಾಡಲಾಯಿತು. ಫೆ. 17 ಮತ್ತು 18ರಂದು ಬೆಳಗ್ಗೆ 6 ಗಂಟೆಗೆ ಉದ್ಯಾನದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ತೀರ್ವನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts