More

    ನಿರಂತರ ಶ್ರಮದಿಂದ ದೊರೆಯುವ ಅಗೋಚರ ಶಕ್ತಿಯೇ ಭಕ್ತಿ: ರೇಣುಕಾನಂದ ಶ್ರೀ ಹೇಳಿಕೆ

    ರಿಪ್ಪನ್‌ಪೇಟೆ: ಭಕ್ತಿ ಎನ್ನುವುದು ಅಂಗಡಿಯಲ್ಲಿ ಸಿಗುವ ಸರಕಲ್ಲ. ನಿರಂತರ ಶ್ರಮ, ಸಂಸ್ಕಾರದಿಂದ ಬರುವಂತಹ ಒಂದು ಅಗೆೋಚರ ಶಕ್ತಿ ಎಂದು ನಿಟ್ಟೂರು ಶ್ರೀ ನಾರಾಯಣಗುರು ಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ ಹೇಳಿದರು.
    ಸಮೀಪದ ವಡಗೆರೆ ಶ್ರೀ ತುಳಜಾಭವಾನಿ ದೇವಸ್ಥಾನದ ಪ್ರತಿಷ್ಠಾಪನಾ ವರ್ಧಂತಿ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಭಕ್ತಿಯ ಪ್ರಾಪ್ತಿಗಾಗಿ ಗುರು-ಹಿರಿಯರು ಹಾಕಿದ ದಾರಿಯಲ್ಲಿ ಏಕಾಗ್ರತೆಯಿಂದ ಸಾಗಬೇಕು. ಭಕ್ತಿಗೆ ಬೇಕಾದ ಪೂರಕ ವ್ಯವಸ್ಥೆಯೇ ದೇವರ ಪ್ರತಿಷ್ಠಾಪನೆ, ಪೂಜಾ ಆಚರಣೆಗಳು ಎಂದರು.
    ಅನಾದಿ ಕಾಲದಿಂದ ರೂಢಿಸಿಕೊಂಡು ಬಂದ ಸಾಂಪ್ರದಾಯಿಕ, ಧಾರ್ಮಿಕ ಪದ್ಧತಿಯಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸಮಾಜದಲ್ಲಿ ಸುಖ, ಶಾಂತಿ ಸ್ಥಾಪಿಸುವಂತೆ ಮಾಡುವುದೇ ಧರ್ಮಾಚರಣೆಗಳ ಉದ್ದೇಶ. ಇತ್ತೀಚೆಗೆ ಬದಲಾದ ಜೀವನ ಪದ್ಧತಿಯಿಂದ ಜನರಲ್ಲಿ ಸಂಪತ್ತು ಇದೆ. ಆದರೆ ನೆಮ್ಮದಿ ಇಲ್ಲ. ಯಾಂತ್ರಿಕ ಬದುಕಿನತ್ತ ಸಾಗಿರುವ ಮನುಷ್ಯ ಧಾರ್ಮಿಕ ಆಚರಣೆ ಮರೆತು ಸಂಕಷ್ಟಕ್ಕೀಡಾಗಿದ್ದಾನೆ. ಜಂಜಾಟದ ಬದುಕಿಗೆ ಪರಿಹಾರವೆಂದರೆ ಅದು ದೇವರ ಪೂಜೆ ಎಂದು ಹೇಳಿದರು.
    ಒಳ್ಳೆಯ ಕಾರ್ಯ ಮಾಡುವ ಮೊದಲು ಶಕ್ತಿ ದೇವತೆಯ ಆರಾಧನೆ ಮಾಡಲಾಗುತ್ತದೆ. ದೇವರೊಬ್ಬನೇ ಆಗಿದ್ದರೂ ಬೇರೆ ಬೇರೆ ರೀತಿ ಆಚರಣೆ ಮಾಡುವ ಪರಂಪರೆ ಭಾರತದಲ್ಲಿದೆ. ಇಂತಹ ಶ್ರೇಷ್ಠ ಪರಂಪರೆಯನ್ನು ಅನುಸರಿಸಿಕೊಂಡು ವಿವಿಧತೆಯಲ್ಲಿ ಏಕತೆ ಸಾಧಿಸಿದ ವಿಶಿಷ್ಟ ಸಂಸ್ಕೃತಿ ಹೊಂದಿದ ದೇಶ ಭಾರತ. ಸಮಾಜದ ಎಲ್ಲ ಸಂಕಷ್ಟಗಳಿಗೆ ಧಾರ್ಮಿಕ ಆಚರಣೆಗಳೇ ಪರಿಹಾರ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts