More

    ದೇವಾಲಯ ಜೀಣೋದ್ಧಾರಕ್ಕೆ ಕೈಜೋಡಿಸಿ

    ತ್ಯಾಗರ್ತಿ: ಪ್ರಾಚೀನ ದೇವಾಲಯ ಜೀರ್ಣೋದ್ಧಾರಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸಿಗಂದೂರು ದೇವಾಲಯದ ಧರ್ಮದರ್ಶಿ ಡಾ. ಎಸ್.ರಾಮಪ್ಪ ಹೇಳಿದರು.
    ಸಮೀಪದ ಜಂಬಾನಿಯಲ್ಲಿ ಬುಧವಾರ ಪ್ರಾಚೀನ ಮಹಾಗಣಪತಿ ದೇವಸ್ಥಾನದ ಪ್ರತಿಷ್ಠೆ ಅಂಗವಾಗಿ ಭವ್ಯವಾಗಿ ನಿರ್ಮಾಣ ಆಗುತ್ತಿರುವ ಕಟ್ಟಡದ ವಾಸ್ತು ಪ್ರತಿಷ್ಠೆಯ ಪೂಜಾ ಕಾರ್ಯದಲ್ಲಿ ಭಾಗವಹಿಸಿ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿ, ದೇವಾಲಯ ನಿರ್ಮಾಣ ಹಾಗೂ ಧಾರ್ಮಿಕ ಕಾರ್ಯಕ್ಕೆ ಎಷ್ಟು ದಾನ ಮಾಡಿದರೂ ನಮ್ಮ ಆದಾಯ ಕಡಿಮೆ ಆಗುವುದಿಲ್ಲ. ಅದರ 10 ಪಟ್ಟು ಸಂಪತ್ತು ನಮಗೆ ಮತ್ತೆ ಸಿಗುತ್ತದೆ. ಅದಕ್ಕೆ ನಾನೇ ಸಾಕ್ಷಿ. ಪ್ರಾಮಾಣಿಕ ಸೇವೆಯಿಂದ ಈ ದೇವಾಲಯ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ವಿನಂತಿಸಿದರು.
    ಸಂಸ್ಕೃತ ವಿದ್ವಾಂಸ ಜಿ.ಎಸ್.ಗಣಪತಿ ಭಟ್ ಬಾಗಬನ ಮಾತನಾಡಿ, ಮನಸ್ಸಿನ ನೆಮ್ಮದಿಗೆ ಧರ್ಮ ಕೇಂದ್ರಗಳು ಅತಿ ಮುಖ್ಯ. ಜನ, ಜಾನುವಾರಗಳ ರಕ್ಷಣೆಗೆ ದೇವರಲ್ಲಿ ನಂಬಿಕೆ ಇರಬೇಕು ಎಂದು ಹೇಳಿದರು. ಆಲಳ್ಳಿ ಮಠದ ಪ್ರಧಾನ ಅರ್ಚಕ ಪುಟ್ಟಯ್ಯ ಶಾಸ್ತ್ರಿ ಧಾರ್ಮಿಕ ವಿಧಿ ನೆರವೇರಿಸಿದರು. ಸೋಮಶೇಖರ್ ಜಂಬಾನಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮಹೇಶ್ ನಾಯ್ಕ್ ಕಪ್ಪನಹಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts