More

    ನಿರಂತರ ಪರಿಶ್ರಮದಿಂದ ಸಾಧನೆ ಸಾಧ್ಯ

    ಬೆಳಗಾವಿ: ಹುಟ್ಟಿನಿಂದಲೇ ಯಾರೂ ಪ್ರತಿಭಾವಂತರಾಗಿರುವುದಿಲ್ಲ. ನಿರಂತರ ಪರಿಶ್ರಮದಿಂದ ಸಾಧನೆ ಮಾಡಬಹುದು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದರ ಜತೆಗೆ ಉದ್ಯೋಗ ಕೇಳುವ ಬದಲು ಉದ್ಯೋಗ ನೀಡುವ ವ್ಯಕ್ತಿಗಳಾಗಬೇಕು ಎಂದು ಅಂಚೆ ಇಲಾಖೆ ಅಧೀಕ್ಷಕ ಎಚ್.ಬಿ. ಹಸಬಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಬೆಳಗಾವಿಯ ಅಂಗಡಿ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಕಲ್ಯಾಣ ಒಕ್ಕೂಟ ಹಾಗೂ ವಿದ್ಯಾರ್ಥಿಗಳ ಪರಿಷತ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸಂಸ್ಥೆಯ ನಿರ್ದೇಶಕಿ ಡಾ. ಸ್ಫೂರ್ತಿ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಪಡೆದ ನಂತರ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ವರ್ಷದುದ್ದಕ್ಕೂ ವಿದ್ಯಾರ್ಥಿಗಳ ಚಟುವಟಿಕೆಗಳು ನಿರಂತರವಾಗಿ ನಡೆಯಲಿ. ಭಾರತವು ಆತ್ಮ ನಿರ್ಭರತೆಯಡೆಗೆ ಸಾಗಬೇಕು ಎಂದು ಹೇಳಿದರು.

    ಪ್ರಾಚಾರ್ಯೆ ಸಂಗೀತಾ ದೇಸಾಯಿ, ಕಾರ್ಯಕ್ರಮದ ಸಂಯೋಜಕಿ ಪ್ರೊ.ರಶ್ಮಿ ಮಹೇಂದ್ರಕರ್, ವಿದ್ಯಾರ್ಥಿ ಪರಿಷತ್ ಮಹಿಳಾ ಪ್ರತಿನಿಧಿ ಧನಶ್ರೀ ರಾಥೋಡ ಸ್ವಾಗತಿಸಿದರು. ಸ್ವಾತಿ ಹೆಗಡೆ ಪರಿಚಯಿಸಿದರು. ವಿದ್ಯಾರ್ಥಿಗಳ ಪರಿಷತ್ ಪ್ರಧಾನ ಕಾರ್ಯದರ್ಶಿ ತುಕಾರಾಮ ಲಮಾಣಿ ವಂದಿಸಿದರು. ಮೇಘಾ ಹರಿಹರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts