More

    ನಿಯಮ ಮೀರಿ ಗ್ರಾಮಠಾಣಾ ಹರಾಜು, ಹಣ ದುರ್ಬಳಕೆ ಆರೋಪ, ತನಿಖೆಗೆ ಆಗ್ರಹ

    ದಾವಣಗೆರೆ: ಹೊನ್ನಾಳಿ ತಾಲೂಕು ಯಕ್ಕನಹಳ್ಳಿಯ ಹಳೇ ಗ್ರಾಮಠಾಣವನ್ನು ನಿಯಮಾನುಸಾರ ಹರಾಜು ನಡೆಸದೆ ಲಕ್ಷಾಂತರ ರೂಪಾಯಿ ದುರುಪಯೋಗ ಮಾಡಲಾಗಿದೆ ಎಂದು ಯಕ್ಕನಹಳ್ಳಿ ಗ್ರಾಮದ ಪ್ರಕಾಶ್ ಆರೋಪಿಸಿದರು.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
    ಗ್ರಾಮ ಪಂಚಾಯತಿಯ ಸಭೆಯಲ್ಲಿ ಯಾವ ಅಧಿನಿಯಮದಡಿ,
    ಯಾವ ವರ್ಷದಿಂದ ಹಾಗೂ ಯಾವ ಅದೇಶದಡಿ ಹರಾಜು ಪ್ರಕ್ರಿಯೆ ನಡಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ಒದಗಿಸಬೇಕು. ಹರಾಜು ಪ್ರಕ್ರಿಯೆ ಹಾಕಲಾಗಿದೆ. ಎಷ್ಟು ಹಣ ಜಮೆ ಆಗಿದೆ ಎಂದು ಮಾಹಿತಿ ನೀಡಬೇಕೆಂದು ಆಗ್ರಹಿಸಿದರು.
    ಹರಾಜು ಮಾಡಿದ ಹಣ ಯಕ್ಕನಹಳ್ಳಿಗ್ರಾಮಕ್ಕೆ ಸಂಬಂಧಿಸಿದ್ದೇ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಹಣವೇ, ಈ ಹಣವನ್ನು ಯಾವ ಉದ್ದೇಶಕ್ಕೆ ಬಳಸಿದ್ದೀರಿ ಎಂಬುದರ ಬಗ್ಗೆ ದಾಖಲಾತ ನೀಡಬೇಕು. ಪ್ರತಿ ವರ್ಷ ಹರಾಜು ಪ್ರಕ್ರಿಯೆಗೆ ಗ್ರಾಮ ಪಂಚಾಯಿತಿ ನಡವಳಿ ಮಾಡಿದ್ದರೆ ಅದರ ನಕಲು ಹರಾಜು ಪ್ರಕ್ರಿಯೆ ಮಾಡಿದ ಯಾವ ವರ್ಷದಿಂದ ಹರಾಜು ನಡೆದಿದೆ ಅಲ್ಲಿಂದ 2022 ವರೆಗಿನ ಅಧಿಕೃತ ದಾಖಲಾತಿ ನೀಡಬೇಕು. ಎಲ್ಲಾ ದಾಖಲಾತಿಗಳನ್ನು ಮಾಹಿತಿ ಹಕ್ಕು ಅಧಿ ನಿಯಮದ ಅಡಿಯಲ್ಲಿ ಒದಗಿಸುವಂತೆ ಗ್ರಾಮಪಂಚಾಯತಿ ಮನವಿ ಮಾಡಿದ್ದರೂ
    ಸಹ ಯಾವುದೇ ಅಧಿಕೃತ ದಾಖಲೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಈ ಬಗ್ಗೆ ಜಿಲ್ಲಾ ಪಂಚಾಯತ ಸಿಇಒ, ತಾಪಂ ಇಒ, , ತಹಸೀಲ್ದಾರ್ ಸೇರಿ ಹಲವು ಅಧಿಕಾರಿಗಳಿಗೆ ಒತ್ತಾಯಿಸಿದ್ದರೂ ಕ್ರಮ ಕೈಗೊಂಡಿಲ್ಲ.
    ಎಲ್ಲಾ ಇಲಾಖೆಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು. ಒಂದು ವೇಳೆ ಬ್ಯಾಂಕಿಗೆ ಹಣ ತುಂಬಿದ್ದರೆ ತಪ್ಪು ಕಂಡುಬಂದರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಒತ್ತಾಯಿಸಿದರು.
    ಸುದ್ದಿಗೋಷ್ಠಿಯಲ್ಲಿ ಬಿ.ಎಂ.ಯಲ್ಲಪ್ಪ, ಪಿ.ವೈ.ನಾಗರಾಜ್, ಬಿ.ವೈ.ಬಸವರಾಜಪ್ಪ, ಬಿ.ಕೆ.ಯಲ್ಲಪ್ಪ. ಜಗದೀಶ್ ಇದ್ದರು.
    ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts