More

    ನಿಯಮ ಮೀರಿ ಅತಿರಿಕ್ತ ಸಾಗಣೆ ವೆಚ್ಚ ಆಕರಣೆ

    ಕುಮಟಾ: ತಾಲೂಕಿನಲ್ಲಿ ಇಂಡೇನ್ ಅಡುಗೆ ಅನಿಲ ಪೂರೈಸುತ್ತಿರುವ ಚೈತ್ರದೀಪ ಎಂಟರ್​ಪ್ರೈಸಸ್​ನವರು ಗ್ರಾಹಕರಿಂದ ನಿಯಮ ಮೀರಿ ಅತಿರಿಕ್ತ ಸಾಗಣೆ ವೆಚ್ಚ ಪಡೆಯುತ್ತಿದ್ದಾರೆ. ಈ ಬಗ್ಗೆ ಕೂಡಲೆ ತಾಲೂಕಾಡಳಿತ ಗಮನಹರಿಸಬೇಕು ಎಂದು ವಕೀಲ ಆರ್.ಜಿ.ನಾಯ್ಕ ಆಗ್ರಹಿಸಿದರು.

    ಬಾಡದ ಪ್ರೌಢಶಾಲೆಯಲ್ಲಿ ಗುರುವಾರ ಅಡುಗೆ ಅನಿಲ ಗ್ರಾಹಕರ ಪರವಾಗಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ನೇತೃತ್ವವಹಿಸಿ ಮಾತನಾಡಿದರು.

    ಹಿಂದೆ ಅನೇಕ ಬಾರಿ ಸಂಘ, ಸಂಸ್ಥೆ ಗಳಿಂದ ಗ್ಯಾಸ್ ಎಜೆನ್ಸಿಗೆ ಮನವಿ ಮಾಡಿ ಸಿಲೆಂಡರ್ ಸಾಗಾಣಿಕೆ ವೆಚ್ಚ ಕಡಿಮೆ ಮಾಡುವಂತೆ ಕೋರಿದ್ದೆವು. ಕುಮಟಾದಿಂದ ಅಘನಾಶಿನಿಗೆ 14 ಕಿಮೀ ದೂರ. ಆದರೆ, ಗ್ಯಾಸ್ ಎಜೆನ್ಸಿ ಪ್ರಕಾರ 58 ಕಿಮೀ ಎಂದು ಹೇಳುತ್ತಾರೆ. ನಿಯಮದಂತೆ ಅನಿಲ ದಾಸ್ತಾನು ಪ್ರದೇಶದಿಂದ 5 ಕಿಮೀ ವ್ಯಾಪ್ತಿಯಲ್ಲಿ ಉಚಿತವಾಗಿ ಹಾಗೂ ಹೆಚ್ಚಿನ ಪ್ರತಿ ಕಿಮೀ 1.60 ರೂ. ಆಕರಣೆಗೆ ಮಾತ್ರ ಅವಕಾಶವಿದೆ. ಪ್ರತಿ ಸಿಲೆಂಡರ್​ಗೆ ಈಗ 611.50 ಅನಿಲ ವೆಚ್ಚ ಪಡೆಯುತ್ತಿದ್ದು, ಅಘನಾಶಿನಿಗೆ ಸಾಗಣೆ ವೆಚ್ಚ ಎಂದು 100 ರೂ. ಕಾಗಾಲಿಗೆ 80 ರೂ. ಹಾಗೂ ಬಾಡಕ್ಕೆ 60 ರೂ., ಕುಮಟಾ ಪಟ್ಟಣದಲ್ಲೇ 40 ರಿಂದ 50 ರೂ.ವರೆಗೂ ಗ್ರಾಹಕರಿಂದ ಪಡೆಯುತ್ತಾರೆ. ಉಚಿತವಾಗಿ ಸಿಲೆಂಡರ್ ಪೂರೈಕೆ ಮಾಡಬೇಕಾದಲ್ಲೂ ಶುಲ್ಕ ಪಡೆಯುತ್ತಾರೆ. ಇದಕ್ಕೆ ಯಾವುದೇ ರಸೀದಿಯನ್ನು ನೀಡುತ್ತಿಲ್ಲ ಎಂದು ಆರೋಪಿಸಿದರು.

    ಜಿಪಂ ಸದಸ್ಯ ರತ್ನಾಕರ ನಾಯ್ಕ ಮಾತನಾಡಿ, ಈ ಬಗ್ಗೆ ಆಹಾರ ಇಲಾಖೆಯವರಿಗೆ ನಾನು ಮಾತನಾಡಿದಾಗ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ್ದರು. ಆದರೆ ಮಾಡಿಲ್ಲ. ಚೈತ್ರದೀಪ ಎಂಟರ್​ಪ್ರೖೆಸಸ್​ನವರು ಕೂಡಲೇ ಕ್ರಮ ಕೈಗೊಂಡು ನಿಯಮದಂತೆ ಸಿಲೆಂಡರ್ ಸಾಗಣೆ ವೆಚ್ಚ ಆಕರಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

    ತಾಪಂ ಸದಸ್ಯ ಜಗನ್ನಾಥ ನಾಯ್ಕ, ರಾಘವೇಂದ್ರ ಪಟಗಾರ, ಈಶ್ವರ ಪಟಗಾರ, ನಾರಾಯಣ ಭಟ್, ಶ್ರೀನಿವಾಸ ನಾಯ್ಕ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts