More

    ನಿಯಮ ಬಾಹಿರವಾಗಿದ್ದ ರಿವಾಲ್ವಾರ್, ದಾಖಲೆಯಿಲ್ಲದ 1.45 ಲಕ್ಷ ರೂ. ವಶ

    ರಾಣೆಬೆನ್ನೂರ: ನಿಯಮ ಬಾಹಿರವಾಗಿ ವ್ಯಕ್ತಿಯೊಬ್ಬ ತನ್ನ ಬಳಿ ಇಟ್ಟುಕೊಂಡಿದ್ದ ರಿವಾಲ್ವಾರ್‌ಅನ್ನು ಹಾಗೂ 4 ಜೀವಂತ ಗುಂಡುಗಳು ಮತ್ತು ದಾಖಲೆಯಿಲ್ಲದ 1.45 ಲಕ್ಷ ರೂ.ಅನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ.

    ತಾಲೂಕಿನ ಚಳಗೇರಿ ಟೋಲ್‌ನಾಕಾ ಬಳಿ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಹಾಲೋಂಡಿ ಗ್ರಾಮದ ರೋಹಿತ್ ಸುನೀಲ ಶೇಟೆ (34) ಎಂಬುವರಿಂದ ರಿವಾಲ್ವಾರ್ ವಶಪಡಿಸಿಕೊಳ್ಳಲಾಗಿದೆ. ಹಾಸನದ ಅರವಿಂದ ಮಂಜುನಾಥ (27) ಹಾಗೂ ಸಾಗರ ಮಲ್ಲಿಕಾರ್ಜುನ (29) ಎಂಬುವರಿಂದ 1.45 ಲಕ್ಷ ರೂ. ಹಣ ವಶಪಡಿಸಿಕೊಳ್ಳಲಾಗಿದೆ.

    ಪೊಲೀಸರು ಟೋಲ್‌ನಾಕಾ ಬಳಿ ವಾಹನಗಳ ತಪಾಸಣೆ ಮಾಡುತ್ತಿದ್ದ ಸಮಯದಲ್ಲಿ ರೋಹಿತ ಇರಟಿಗಾ ವಾಹನದಲ್ಲಿ ಬಂದಿದ್ದಾನೆ. ಈ ಸಮಯದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಆತನ ಬಳಿ ರಿವಾಲ್ವಾರ್ ಹಾಗೂ 4 ಜೀವಂತ ಗುಂಡುಗಳು ದೊರೆತಿವೆ. ಆದರೆ, ಇದು ನಿಯಮ ಬಾಹಿರವಾಗಿದೆ ಎನ್ನುವ ಕಾರಣಕ್ಕೆ ಪೊಲೀಸರು ರಿವಾಲ್ವಾರ್ ಹಾಗೂ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ರಾಣೆಬೆನ್ನೂರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅರವಿಂದ ಮತ್ತು ಸಾಗರ ಎಂಬುವರು ಟೋಯೊಟಾ ಇಟಿಓಸ್ ಕಾರಿನಲ್ಲಿ ದಾಖಲೆಯಿಲ್ಲದೆ 1.45 ಲಕ್ಷ ರೂ. ಸಾಗಾಟ ಮಾಡುತ್ತಿದ್ದರು. ಶಿಗ್ಗಾಂವಿ ತಾಲೂಕಿನ ವಡಗಟ್ಟಿ ಚಕ್‌ಪೋಸ್ಟ್‌ನಲ್ಲಿ ಪೊಲೀಸರು ತಪಾಸಣೆ ನಡೆಸಿದಾಗ ಹಣ ದೊರೆತಿದೆ. ಆದರೆ, ಇಬ್ಬರು ಆರೋಪಿತರು ಹಣಕ್ಕೆ ದಾಖಲೆ ನೀಡದ ಕಾರಣ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts