More

    ನಿಯಮ ಉಲ್ಲಂಘಿಸಿ ಜಮೀನು ಮಂಜೂರು

    ನಿಯಮ ಉಲ್ಲಂಘಿಸಿ ಜಮೀನು ಮಂಜೂರು
    ಕೆಜಿಎಫ್​ ನಗರದಿಂದ 5 ಕಿಮೀ ವ್ಯಾಪ್ತಿಯಲ್ಲಿ ಸ್ವೀಕೃತವಾಗಿರುವ ಅರ್ಜಿ ಕುರಿತು ತಹಸೀಲ್ದಾರ್​ ಹೊರಡಿಸಿರುವ ಜರೂರು ಜ್ಞಾಪನ ಪತ್ರ.

    ಕೆಜಿಎಫ್ : ಸರ್ಕಾರಿ ಜಮೀನು ಉಳಿಸಬೇಕಾದ ತಹಸೀಲ್ದಾರ್​ ಹಾಗೂ ಸಿಬ್ಬಂದಿ ಆಮಿಷಕ್ಕೆ ಒಳಗಾಗಿ ಖಾಸಗಿ ವ್ಯಕ್ತಿಗಳಿಗೆ ಕೋಟ್ಯಂತರ ರೂ. ಬೆಲೆಬಾಳುವ ನಗರ ವ್ಯಾಪ್ತಿಯ ಗೋಮಾಳವನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿಕೊಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ.
    ಸಾಗುವಳಿ ಜಮೀನು ಸಕ್ರಮಗೊಳಿಸಲು ಕರ್ನಾಟಕ ಭೂ ಮಂಜೂರಾತಿ ನಿಯಮ 1969ರಂತೆ ಮತ್ತು ಕಂದಾಯ ಕಾಯ್ದೆ 1964ರ ಕಲಂ 94ಎ(4) ಅಡಿ ನಮೂನೆ&53ರಲ್ಲಿ ಮಂಜೂರಾತಿ ಮಾಡಬಾರದು ಎಂದು ಅಧಿಕೃತ ಜ್ಞಾಪನವನ್ನು ಅವರೇ ಹೊರಡಿಸಿದ್ದು, 2&3 ಕಿಮೀ ಹತ್ತಿರದ ಪಾರಾಂಡಹಳ್ಳಿಗೆ ಹೊಂದಿ ಕೊಂಡಂತಿರುವ ಗರುಡಾದ್ರಹಳ್ಳಿಯ ಸರ್ವೇ ನಂಬರ್​ 10 ರಲ್ಲಿ 4&25 ಎಕರೆ ಜಮೀನನ್ನು ಮಹಿಳೆಯೊಬ್ಬರ ಹೆಸರಿಗೆ 2022ರ ನ.16ರಂದು ಮಾಡಿದ್ದಾರೆ.
    ದರಕಾಸ್ತು ಸಮಿತಿಗೆ ಶಾಸಕರು ಅಧ್ಯಕ್ಷರಾಗಿದ್ದು, ಮೂವರು ಸದಸ್ಯರು ಮತ್ತು ತಹಸೀಲ್ದಾರ್​ ಕಾರ್ಯದರ್ಶಿಯಾಗಿರುತ್ತಾರೆ. ಆದರೆ ಹಿಂದಿನ ತಹಸೀಲ್ದಾರ್​ ಸುಜಾತಾ, ಸಮಿತಿ ಗಮನಕ್ಕೆ ತಾರದೆ ಜಮೀನು ಮಂಜೂರು ಮಾಡಿದ್ದಾರೆ. ಮಂಜೂರು ಮಾಡಬೇಕಾದರೆ ಸಮಿತಿಯ 3 ಸಭೆಗಳಲ್ಲಿ ಕಡ್ಡಾಯವಾಗಿ ಕಡತ ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕು. ಮಂಜೂರು ಮಾಡುವ ಮುನ್ನ ಕಡತವನ್ನು 3 ಸಭೆಗಳಲ್ಲಿ ಮಂಡಿಸಲಾಗಿದೆಯೇ? ಮಂಡಿಸಿದ್ದಲ್ಲಿ ಅಧ್ಯಕ್ಷರು, ಕಾರ್ಯದರ್ಶಿಗಳನ್ನೂ ಒಳಗೊಂಡಂತೆ ಎಲ್ಲರ ಅನುಮತಿ ಪಡೆದುಕೊಳ್ಳಲಾಗಿದೆಯೇ ಎಂಬುದಕ್ಕೆ ಹಿಂದಿನ ತಹಸೀಲ್ದಾರ್​ ಸುಜಾತಾ ಉತ್ತರಿಸಬೇಕು ಎಂದು ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿಕೊಂಡಿದ್ದವರು ಆಗ್ರಹಿಸಿದ್ದಾರೆ.
    2022ರ ಏ.27ರಂದು ನಡೆದ ದರಖಾಸ್ತು ಸಮಿತಿ ಸಭೆಗೆ 40 ಕಡತಗಳನ್ನು ಮಂಡಿಸಿಲ್ಲ. 2022ರ ಅ.13ರಂದು ವಜಾಗೊಳಿಸಿರುವ 18 ಕಡತಗಳ ಪಟ್ಟಿಯಲ್ಲಿಯೂ ಈ ಕಡತ ಇಲ್ಲ ಎಂದು ತಿಳಿದುಬಂದಿದೆ.
    ಕಾನೂನು ಕ್ರಮಕ್ಕೆ ಆಗ್ರಹ : ಈ ಹಿಂದಿನ ತಹಸೀಲ್ದಾರ್​ ಸುಜಾತಾ, ಶಿರಸ್ತೇದಾರ್​ ಸುರೇಶ್​, ಗ್ರಾಮ ಲೆಕ್ಕಾಧಿಕಾರಿ ಪ್ರೇಮಾ, ಎಲ್​ಎನ್​ಡಿ ಗುಮಾಸ್ತ ಬಾಲಾಜಿ, ತಾಲೂಕು ಸರ್ವೇಯರ್​ ಮೌಲಾಖಾನ್​ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಸರ್ಕಾರ ನಿಷ್ಠಾವಂತ ಐಎಎಸ್​ ಅಧಿಕಾರಿ ಇಲ್ಲವೇ ನಿವೃತ್ತ ಐಎಎಸ್​ ಅಧಿಕಾರಿಯೊಬ್ಬರನ್ನು ನೇಮಿಸಿ ಕಾನೂನು ಕ್ರಮ ಕೈಗೊಳ್ಳಬೇಕಿದೆ.

    ಗರುಡಾದ್ರಿಹಳ್ಳಿ ಕೆಜಿಫ್ ನಗರದಿಂದ 2&3 ಕಿಮೀ ದೂರದಲ್ಲಿದ್ದು ಇಲ್ಲಿನ ಜಮೀನನ್ನು ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಮೊದಲು ತನಿಖೆ ಮಾಡಲಾಗುವುದು, ಒಂದು ವೇಳೆ ತಹಸೀಲ್ದಾರ್​ ಮತ್ತು ಸಿಬ್ಬಂದಿ ಅಕ್ರಮ ಎಸಗಿರುವುದು ಸಾಬೀತಾದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ವೆಂಕಟ್​ರಾಜಾ ಜಿಲ್ಲಾಧಿಕಾರಿ, ಕೋಲಾರ

    ವೀರಾಪುರದ ಗೋಮಾಳದಲ್ಲಿ ಅನುಭವದಲ್ಲಿದ್ದು, ಸಾಗುವಳಿ ಚೀಟಿಗೆ ಅರ್ಜಿ ಸಲ್ಲಿಸಿಕೊಂಡಿದ್ದರೂ, 7 ಕಿಮೀ ವ್ಯಾಪ್ತಿ ತೋರಿಸಿ ಮಂಜೂರು ಮಾಡಲಿಲ್ಲ. ಆದರೆ 1 ತಿಂಗಳ ಅಂತರದಲ್ಲಿ 4 ಸಾವಿರ ಅರ್ಜಿ ವಜಾಗೊಳಿಸಿದ್ದರು. ಪ್ರಸ್ತುತ ನಡೆದಿರುವ ಅಕ್ರಮದ ವಿರುದ್ಧ ಸೂಕ್ತ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ. ತ್ಯಾಗರಾಜ್​ ಉರಿಗಾಂಪೇಟೆ, ಕೆಜಿಎಫ್​

    ಟ್ಟಕಾಮಧೇನಹಳ್ಳಿಯ ಗೋಮಾಳದಲ್ಲಿ ಅನುಭವದಲ್ಲಿದ್ದು ಸಾಗುವಳಿ ಚೀಟಿಗಾಗಿ ಅರ್ಜಿ ಸಲ್ಲಿಸಿಕೊಳ್ಳಲಾಗಿತ್ತು. ಆದರೆ 3 ವರ್ಷದ ಹಿಂದೆ ಈ ಜಮೀನು ನಗರ ವ್ಯಾಪ್ತಿಯ 7 ಕಿಮೀ ವ್ಯಾಪ್ತಿಯೊಳಗೆ ಬರುತ್ತದೆ ಎಂದು ವಜಾಗೊಳಿಸಲಾಗಿತ್ತು. ಆದರೆ ಈಗ ನಗರಕ್ಕೆ 2 ಕಿಮೀ ಹತ್ತಿರದ ಜಮೀನು ಮಂಜೂರು ಮಾಡಿರುವುದರ ಹಿಂದಿನ ರಹಸ್ಯವೇನು? ಋಷಿಕಪ್ಪ ಘಟ್ಟರಾಗಡಹಳ್ಳಿ, ಕೆಜಿಎಫ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts