More

    ನಿಯಮಿತ ಶಿಬಿರದಿಂದ ರಕ್ತಕ್ಕಿಲ್ಲ ಕೊರತೆ -ಡಾ.ಕುಮಾರ್ ಹೇಳಿಕೆ – ಸ್ವಯಂಪ್ರೇರಿತ ರಕ್ತದಾನ ಶಿಬಿರ

    ದಾವಣಗೆರೆ: ದಾವಣಗೆರೆ ನಗರದಲ್ಲಿ ನಿತ್ಯ ಕನಿಷ್ಠ 30 ಯೂನಿಟ್‌ಗಳಷ್ಟು ರಕ್ತದ ಅಗತ್ಯವಿದೆ. ರಕ್ತದಾನ ಶಿಬಿರಗಳು ನಿಯಮಿತವಾಗಿ ನಡೆದಲ್ಲಿ ರಕ್ತದ ಕೊರತೆ ಬಾರದು ಎಂದು ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಡಿ.ಎಸ್. ಕುಮಾರ್ ಹೇಳಿದರು.
    ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್‌ಮೆಂಟ್ ರಿಸರ್ಚ್ ಹಾಗೂ ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್‌ನಿಂದ ಎಸ್.ಎಸ್. ಕೇರ್ ಟ್ರಸ್ಟ್, ಜೆಜೆಎಂ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್‌ರವರ 56ನೇ ಜನ್ಮದಿನದ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ಪ್ರತಿ ಯೂನಿಟ್ ರಕ್ತ ಸಂಗ್ರಹಣೆಗೂ ಕನಿಷ್ಠ 800 ರೂ. ವೆಚ್ಚ್ಚವಾಗಲಿದೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜನ್ಮದಿನದ ಅಂಗವಾಗಿ 5,555 ಯೂನಿಟ್ ರಕ್ತ ಸಂಗ್ರಹಣೆ ಗುರಿ ಇದ್ದು ಗುರಿ ಇದ್ದು ಈಗಾಗಲೇ 2,000 ಯೂನಿಟ್‌ಗಳಷ್ಟು ಸಂಗ್ರಹವಾಗಿದೆ ಎಂದರು.
    ಒಬ್ಬರ ರಕ್ತದಾನದಿಂದ ಮೂರು ಜನರ ಅಮೂಲ್ಯ ಜೀವ ಉಳಿಸಬಹುದಾಗಿದ್ದು ಸ್ವಯಂಪ್ರೇರಿತ ರಕ್ತದಾನದಿಂದ ಖುಷಿ ಮತ್ತು ತೃಪ್ತಿ ಸಿಗಲಿದೆ ಎಂದು ಹೇಳಿದರು.
    ಜೆಜೆಎಂ ವೈದ್ಯಕೀಯ ಕಾಲೇಜಿನ ಡಾ. ಶುಕ್ಲಾ ಎಸ್. ಶೆಟ್ಟಿ ಮಾತನಾಡಿ ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರ ನೀಡಲಾಗುತ್ತಿದೆ. ರಕ್ತದಾನಿಗಳು ಅಥವಾ ಅವರ ಕುಟುಂಬದ ಸದಸ್ಯರಿಗೆ ರಕ್ತದ ಅವಶ್ಯಕತೆ ಬಂದಾಗ ದಾನ ಮಾಡಿದಷ್ಟೇ ಪ್ರಮಾಣದ ರಕ್ತವು ಉಚಿತವಾಗಿ ಲಭ್ಯವಾಗುತ್ತದೆ ಎಂದರು.
    ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್‌ನ ಪ್ರಾಚಾರ್ಯ ಡಾ. ಬಿ ವೀರಪ್ಪ, ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್‌ಮೆಂಟ್ ಮತ್ತು ರಿಸರ್ಚ್‌ನ ನಿರ್ದೇಶಕ ಡಾ.ಸ್ವಾಮಿ ತ್ರಿಭುವನಾನಂದ, ಪ್ರಾಚಾರ್ಯ ಡಾ.ನವೀನ್ ನಾಗರಾಜ್, ವಿಭಾಗ ಮುಖ್ಯಸ್ಥ ಡಾ.ಸುಜಿತ್‌ಕುಮಾರ್, ಡಾ.ಶ್ರುತಿ ಮಾಕನೂರು, ಜೆಜೆಎಂ ಕಾಲೇಜಿನ ಡಾ. ವರದೇಂದ್ರ ಕುಲಕರ್ಣಿ, ಡಾ.ಬಿ. ನಿಕೇತನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts