More

    ನಿಪ್ಪಾಣಿಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ

    ನಿಪ್ಪಾಣಿ: ಕುಡಿಯುವ ನೀರಿನ ಸಮಸ್ಯೆ ಇರುವ ಸ್ಥಳಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ ಸೂಚನೆ ನೀಡಿದರು.

    ನಗರಸಭೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ 2023&24ನೇ ಸಾಲಿನ ಆಯವ್ಯಯ ಅಂದಾಜು ಪತ್ರಿಕೆ ತಯಾರಿಸುವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪೊಲೀಸ್​ ಠಾಣೆ ಕಟ್ಟಡ ಕಾಮಗಾರಿ ಆರಂಭಗೊಂಡಿದೆ.

    ಸರ್ಕಾರಿ ಪದವಿ ಮಹಾವಿದ್ಯಾಲಯಕ್ಕೆ ಜಾಗ ಕಲ್ಪಿಸಲಾಗಿದೆ. ತಿನಿಸು ಕಟ್ಟೆ ಯೋಜನೆ ಟೆಂಡರ್​ ಪ್ರಕ್ರಿಯೆ ನಡೆದಿದೆ. ಯುವಜನ ಕ್ರೀಡಾ ಇಲಾಖೆಗೆ ತಾಲೂಕು ಕ್ರೀಡಾಂಗಣಕ್ಕಾಗಿ 12 ಎಕರೆ ಜಾಗ ಕಲ್ಪಿಸಲಾಗಿದೆ ಎಂದರು.

    ನಗರದಲ್ಲಿ ಅಗತ್ಯವಿರುವ ಅಭಿವದ್ಧಿ ಕಾಮಗಾರಿಗಳು ಮತ್ತು ಅದಕ್ಕೆ ಬೇಕಾದ ಅನುದಾನದ ಬಗ್ಗೆ ನಿಖರವಾದ ಸಲಹೆಗಳನ್ನು ನೀಡಲು ಸಭೆ ಕರೆಯಲಾಗಿತ್ತು. ಆದರೆ, ಹಲವು ಬಾರಿ ಮನವಿ ಸಲ್ಲಿಸಿದರೂ ಮೂಲ ಸಮಸ್ಯೆಗಳು ಬಗೆಹರಿದಿಲ್ಲ ಎಂದು ಸಾರ್ವಜನಿಕರು ಸಭೆಯಲ್ಲಿ ದೂರಿದರು.

    ರಂಜಿತಾ ಭಾಟಲೆ ಮಾತನಾಡಿ, ಕ್ರೀಡೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಗರದಲ್ಲಿ ಸಿಂಥೆಟಿಕ್​ ಟ್ರ್ಯಾಕ್​ ನಿರ್ಮಿಸಬೇಕು ಎಂದರು. ನಗರಸಭೆ ಸದಸ್ಯರು ತಮ್ಮ ವಾರ್ಡ್​ಗಳಲ್ಲಿರುವ 24*7 ಕುಡಿಯುವ ನೀರಿನ ಯೋಜನೆ, ಕಸಾಯಿಖಾನೆ, ಅನಧಿಕತ ಅಂಗಡಿಗಳು, ಉದ್ಯಾನವನಗಳ ಅಭಿವದ್ಧಿ, ವಾಹನ ನಿಲುಗಡೆ, ರಸ್ತೆ, ಚರಂಡಿ, ಶೌಚಾಗೃಹ ಸೇರಿ ಮೊದಲಾದ ಪ್ರಮುಖ ಸಮಸ್ಯೆ ಕುರಿತು ಒತ್ತಾಯಿಸಿದರು. ಉಪಾಧ್ಯೆ ನೀತಾ ಬಾಗಡೆ, ಸ್ಥಾಯಿ ಸಮಿತಿ ಚೇರ್ಮನ್​ ರಾಜು ಗುಂಡೇಶಾ, ಪ್ರದಿಪ ಶಿಂಧೆ, ಅಲಿ ಹುಸೇನ್​ ಶೇಖ್​, ನಜೀರ್​ ಶೇಖ್​, ಡಾ. ಉಮೇಶ ಬುದ್ಧಾಚಾರ್ಯ, ಚಂದ್ರಕಾಂತ ಸವದಿ, ಜರಾಖಾನ್​ ಪಠಾಣ್​, ಸುಧಾಕರ ಮಾನೆ, ವಿಶಾಲ ಡಾಂಗ್ರೆ, ಸಚಿನ ಲೋಕರೆ, ಕಬೀರ್​ ವರಾಳೆ, ಉದಯ ಶಿಂಧೆ, ದಿಲೀಪ ಪಠಾಡೆ, ಸಿದ್ಧಾರ್ಥ ಸಾಳುಂಖೆ, ರಂಜನಾ ಭಾಟಲೆ, ಪ್ರತಾಪ ಪಾಟೀಲ, ಮಧುಕರ ಪಕಳೆ, ಸಂತೋಷ ಮೇಸ್ತ್ರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts