More

    ನಾಳೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

    ಬೋರಗಾಂವ: ಭೋಜ ಗ್ರಾಮದ ಪ್ರಥಮಾಚಾರ್ಯ ಶ್ರೀ ಶಾಂತಿಸಾಗರ ಸ್ಮಾರಕದ ಪ್ರಜ್ಞಾಸಾಗರ ಸಭಾಮಂಟಪದಲ್ಲಿ ಡಿ. 11ರಂದು ತಾಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಈರಣ್ಣ ಶಿರಗಾವಿ ತಿಳಿಸಿದರು.

    ಗ್ರಾಮದಲ್ಲಿ ಗುರುವಾರ ಹಮ್ಮಿಕೋಮಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಉದ್ಘಾಟಕರಾಗಿ ಆಗಮಿಸುವರು. ಸಾಹಿತಿ ಅದ್ವಯಾನಂದ ಗಳತಗೆ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವರು. ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷತೆ ವಹಿಸುವರು. ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಅಲ್ಲಮಪ್ರಭು ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಸಿದ್ಧಯೋಗಿ ಅಮರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಳಗ್ಗೆ ರಾಷ್ಟ್ರ ಧ್ವಜಾರೋಹಣ, ಪರಿಷತ್ ಧ್ವಜಾರೋಹಣ, ನಾಡ ಧ್ವಜಾರೋಹಣ, ತಾಯಿ ಭುವನೇಶ್ವರಿ ದೇವಿ ಪೂಜೆ, ಭವ್ಯ ಮೇರವಣಿಗೆ, 300 ಅಡಿ ಉದ್ದ ಕನ್ನಡ ಬಾವುಟ ಮೆರವಣಿಗೆ ನಡೆಯಲಿದೆ. ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಗ್ರಂಥ ಬಿಡುಗಡೆ ಮಾಡುವರು. ಬಳಿಕ ಕವಿಗೋಷ್ಠಿ, ಗ್ರಾಮದ ದಾನಿಗಳು ಹಾಗೂ ಸಾಧಕರ ಸತ್ಕಾರ ನಡೆಯಲಿದೆ. ಬಳಿಕ ಸರ್ವಾಧ್ಯಕ್ಷರೊಂದಿಗೆ ಸಂವಾದ, ಸಮಾರೋಪ ಸಮಾರಂಭ ಜರುಗುವುದು. ರಾತ್ರಿ ಸರ್ಕಾರಿ ಕನ್ನಡ ಶಾಲೆಯ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

    ಸಮಾರಂಭಕ್ಕೆ ಸಂಸದ ಅಣ್ಣಾಸಾಹೇಬ ಜೊಲ್ಲೆ, ಎಂಎಲ್‌ಸಿ ಪ್ರಕಾಶ ಹುಕ್ಕೇರಿ, ವಿಧಾನ ಪರಿಷತ್ ಸರ್ಕಾರದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸೇರಿ ಗಣ್ಯರು ಆಗಮಿಸುವರು. ಗಡಿಯಲ್ಲಿ ಕನ್ನಡ ಭಾಷೆ ಬೆಳೆಸುವ ಉದ್ದೇಶದಿಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರಯತ್ನಿಸುತ್ತಿದೆ ಎಂದರು.ಗೌ.ಕಾರ್ಯದರ್ಶಿ ಮಿಥುನ ಅಂಕಲಿ ಮಾತನಾಡಿ, ತಾಯಿ ಭುವನೇಶ್ವರಿ ಪ್ರತಿಮೆ ಮೆರವಣಿಗೆಯಲ್ಲಿ ವಿವಿಧ ವಾದ್ಯಗಳು, ಆನೆ, ಅಂಬಾರಿ, ರಥ, ವಿವಿಧ ಕಲಾ ತಂಡಗಳು ಇರಲಿವೆ ಎಂದರು. ಇದೆ ವೇಳೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಕೋಶಾಧ್ಯಕ್ಷ ಶಿವಾನಂದ ಪುರಾಣಿಕಮಠ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಪ್ಪಾಸಾಹೇಬ ಜೊಲ್ಲೆ, ನಿರ್ದೇಶಕ ರಾಮಗೊಂಡಾ ಪಾಟೀಲ, ಬೀರೇಶ್ವರ ಸಂಸ್ಥೆ ಅಧ್ಯಕ್ಷ ಜಯಾನಂದ ಜಾಧವ, ಡಾ. ಸುದರ್ಶನ ಮುರಾಬಟ್ಟೆ, ಪ್ರಶಾಂತ ಪಾಟೀಲ, ಶಕುಂತಲಾ ಕಮತೆ, ರಾಜು ಬುರಜಿ, ರಾಜು ಅಲಾಸೆ, ಸಂಜೀವ್ ಕಾಂಬಳೆ, ಸುರಜ ಪಾಟೀಲ, ಭೈರು ಪಾಟೀಲ, ಶಿವಾಜಿ ಕೇಸರಕರ, ಶೀತಲ ಪಾಟೀಲ, ಅನೀಲ ಶಿರಗಾವೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts