More

    ನಾಳೆ ಅಥಣಿಯಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ

    ಅಥಣಿ: ಇಲ್ಲಿನ ರಾಯಣ್ಣ ವೃತ್ತದಲ್ಲಿ ನಿರ್ಮಿಸಿರುವ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಡಿ.19 ರಂದು ಮಧ್ಯಾಹ್ನ 2ಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಚಿಕ್ಕೋಡಿ ಹಾಲುಮತ ಸಮುದಾಯದ ಮುಖಂಡ ಲಕ್ಷ್ಮಣರಾವ ಚಿಂಗಳೆ ಹೇಳಿದರು.

    ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಳಿ ಸಮುದಾಯದ ಮುಖಂಡ ಎಸ್.ಕೆ.ಬುಟಾಳೆ ಸ್ವಂತ ಖರ್ಚಿನಿಂದ ರಾಯಣ್ಣ ಮೂರ್ತಿ ನಿರ್ಮಿಸಿದ್ದು ಇತರರಿಗೂ ಮಾದರಿಯಾಗಿದೆ ಎಂದರು.

    ಮುಖಂಡ ಸದಾಶಿವ ಬುಟಾಳೆ ಮಾತನಾಡಿ, ಬಹುದಿನಗಳಿಂದ ರಾಯಣ್ಣ ಮೂರ್ತಿ ಕೊಡುಗೆ ನೀಡುವ ಕನಸಿತ್ತು. ಆ ನಿಟ್ಟಿನಲ್ಲಿ ಹಾಲುಮತ ಸಮುದಾಯಕ್ಕೆ ನಮ್ಮ ಕುಟುಂಬದಿಂದ ಕೊಡುಗೆ ನೀಡಲಾಗಿದೆ. ಇದರಲ್ಲಿ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

    ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಕೌಲಗುಡ್ಡದ ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಲಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ಶಾಸಕ ಎಂ.ಬಿ.ಪಾಟೀಲ ಮೂರ್ತಿ ಉದ್ಘಾಟಿಸಲಿದ್ದು, ಹಾಲುಮತ ಸಮುದಾಯಸ ತಾಲೂಕು ಅಧ್ಯಕ್ಷ ರಾವಸಾಹೇಬ ಬೇವನೂರ, ಶಾಸಕರಾದ ಮಹಾಂತೇಶ ಕೌಜಲಗಿ, ಡಾ.ಅಂಜಲಿ ನಿಂಬಾಳ್ಕರ್, ಸುನೀಲಗೌಡ ಪಾಟೀಲ, ಮಾಜಿ ಶಾಸಕ ಎಚ್.ಸಿ.ಮಹಾದೇವಪ್ಪ, ವೀರಕುಮಾರ ಪಾಟೀಲ ಹಾಗೂ ವಿನಯ ಕುಲಕರ್ಣಿ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ರಾವಸಾಹೇಬ ಬೇವನೂರ, ಕೆಪಿಸಿಸಿ ಸದಸ್ಯ ಶ್ಯಾಮರಾವ ಪೂಜಾರಿ, ಚಿದಾನಂದ ಮುಕಣಿ, ಮುಖಂಡ ನಿಂಗಪ್ಪ ಐನಾಪೂರ, ಅನಿಲ ಸುಣಧೋಳಿ, ರಮೇಶ ಸಿಂದಗಿ, ಸುಭಾಷ ಪಾಟನಕರ, ಬಸು ಗುಮಟಿ, ಅಸ್ಲಂ ನಾಲಬಂದ್, ಸಚಿನ ಬುಟಾಳೆ, ಬಾಬುರಾವ ವಾಘಮೋಡೆ, ರವಿ ಬಡಕಂಬಿ, ಪುರಸಭೆ ಸದಸ್ಯರಾದ ರಾವಸಾಬ ಐಹೊಳೆ, ಬಿರಪ್ಪ ಯಂಕಚಿ, ಬಸು ಹಳ್ಳದಮಳ, ವಿಲಿನ ಯಳಮಲೆ, ಸೈಯ್ಯದ್ ಗದ್ಯಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts