More

    ನಾಲ್ವರು ವಿದ್ಯಾರ್ಥಿಗಳಿಗೆ ಪೂರ್ಣಾಂಕ, ಎಸ್ಸೆಸ್ಸೆಲ್ಸಿ ಲಿತಾಂಶದಲ್ಲಿ ಬೆಂ. ಗ್ರಾಮಾಂತರ ಜಿಲ್ಲೆಗೆ 4ನೇ ಸ್ಥಾನ

    ಬೆಂಗಳೂರು ಗ್ರಾಮಾಂತರ: ಈ ಬಾರಿಯ ಎಸ್ಸೆಸ್ಸೆಲ್ಸಿ ಲಿತಾಂಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ 4ನೇ ಸ್ಥಾನ ಪಡೆದಿದ್ದು, ನಾಲ್ವರು ವಿದ್ಯಾರ್ಥಿಗಳು ಪೂರ್ಣಾಂಕದೊಂದಿಗೆ (625) ಸಾಧನೆಗೈದಿದ್ದಾರೆ.

    ದೊಡ್ಡಬಳ್ಳಾಪುರ ತಾಲೂಕು ಮೇಳೆಕೋಟೆಯ ರೈತ ಕುಟುಂಬದ ಮೂರನೇ ಮಗ ಲಿಖಿತ್ ಪೂರ್ಣಾಂಕದೊಂದಿಗೆ ತೇರ್ಗಡೆಯಾಗಿದ್ದಾರೆ. ತಂದೆಯೊಂದಿಗೆ ಕೃಷಿ ಚಟುವಟಿಕೆ ಜತೆಜತೆಯಲ್ಲೇ ಓದಿನಲ್ಲಿ ಮುಂದಿದ್ದ ಲಿಖಿತ್ ಓದಿಗಾಗಿಯೇ ದಿನದ 10 ಗಂಟೆ ಮೀಸಲಿಟ್ಟಿದ್ದ. ನೆರ್ಟ್ ವರ್ಕ್ ಸಮಸ್ಯೆಯಿಂದ ಕೆಲ ವೇಳೆ ಜಮೀನಿನ ಮೂಲೆಮೂಲೆಯಲ್ಲಿ ನೆಟ್‌ವರ್ಕ್‌ಗಾಗಿ ಹುಡುಕಾಟ ನಡೆಸುತ್ತಿದ್ದ ಎಂದು ತಂದೆ ವಿರೂಪಾಕ್ಷ ತಿಳಿಸಿದ್ದಾರೆ.

    ಎಸ್‌ಜೆಸಿಆರ್‌ವಿ ಶಾಲೆಯಲ್ಲಿ ಓದುತ್ತಿದ್ದ ಲಿಖಿತ್ ಎಲ್ಲ ಶಾಲಾ ಪರೀಕ್ಷೆ ಗಳಲ್ಲೂ ಮುಂದಿದ್ದ. ವೈದ್ಯನಾಗಬೇಕೆಂಬ ಹೆಬ್ಬಯಕೆ ಇಟ್ಟುಕೊಂಡಿದ್ದು, ಈಗಾಗಲೇ ಪಿಸಿಎಂಬಿ ಆಯ್ಕೆ ಮಾಡಿಕೊಂಡು ಕಾಲೇಜಿಗೆ ಅಡ್ಮಿಷನ್ ಆಗಿದ್ದು, ನನ್ನ ಈ ಫಲಿತಾಂಶಕ್ಕೆ ಪಾಲಕರ ಪ್ರೋತ್ಸಾಹ ಹಾಗೂ ಶಾಲಾ ಶಿಕ್ಷಕರ ನೆರವೇ ಕಾರಣ ಎಂದು ವಿದ್ಯಾರ್ಥಿ ಲಿಖಿತ್ ತಿಳಿಸಿದ್ದಾನೆ.

    ಶಿಕ್ಷಕನ ಮಗಳಿಗೆ ವೈದ್ಯೆಯಾಗುವಾಸೆ:  ದೊಡ್ಡಬಳ್ಳಾಪುರ ಟೌನ್‌ಮೌಂಟ್ ಕಾರ್ಮೆಲ್ ವಿದ್ಯಾರ್ಥಿನಿ ಪ್ರಿಯದರ್ಶಿನಿ ಪೂರ್ಣಾಂಕ ಗಳಿಸುವಲ್ಲಿ ಯಶ ಕಂಡಿದ್ದಾರೆ. ಸರ್ಕಾರಿ ಶಾಲೆ ಶಿಕ್ಷಕ ನಾರಾಯಣ ಎಂಬುವರ ಏಕಮಾತ್ರ ಪುತ್ರಿ ಬಾಲ್ಯದಿಂದಲೇ ವೈದ್ಯೆಯಾಗುವ ಕನಸು ಕಂಡಿದ್ದಳು ಎನ್ನಲಾಗಿದೆ. ಓದಿನ ವಿಷಯದಲ್ಲಿ ಪಾಲಕರು ಒತ್ತಡ ಹಾಕಲಿಲ್ಲ. ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ತಂದೆಯೂ ಶಿಕ್ಷಕರಾಗಿದ್ದರಿಂದ ಅವರ ಮಾರ್ಗದರ್ಶನವೇ ಈ ಫಲಿತಾಂಶಕ್ಕೆ ಕಾರಣ ಎನ್ನುತ್ತಾರೆ ಪ್ರಿಯದರ್ಶಿನಿ. ಅಂದಿನ ವಿಷಯವನ್ನು ಅಂದೆ ಓದಿ ಮುಗಿಸಬೇಕು. ನಾಳೆ ಎಂದರೆ ಆಗಲ್ಲ ಎಂಬುದು ಪ್ರಿಯದರ್ಶಿನಿ ಓದಿನ ಗುಟ್ಟು.

    ಟ್ಯೂಷನ್‌ಗೆ ಹೋಗಿಲ್ಲ: ಹೊಸಕೋಟೆ ತಾಲೂಕು ನ್ಯೂ ಹಾರಿಜನ್ ಶಾಲೆಯ ವಿದ್ಯಾರ್ಥಿನಿ ಗ್ರೀಷ್ಮಾ ಪೂರ್ಣಾಂಕದ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಯಾವುದೇ ಟ್ಯೂಷನ್ ಸಹಾಯವಿಲ್ಲದೆ ಶಾಲೆಯಲ್ಲಿ ನಡೆಸುತ್ತಿದ್ದ ಪಾಠ ಪ್ರವಚನಗಳನ್ನು ಆಸಕ್ತಿಯಿಂದ ಕಲಿತ ಪರಿಣಾಮವೇ ಈ ಫಲಿತಾಂಶಕ್ಕೆ ಕಾರಣ ಎನ್ನುತ್ತಾರೆ ತಂದೆ, ಶಿಕ್ಷಕ ಶಿವಕುಮಾರ್ ವೈದ್ಯೆಯಾಗುವ ಕನಸು ಕಂಡಿದ್ದು ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ದುಕೊಂಡಿದ್ದಾರೆ.

    ಯಶ ಕಂಡ ಯಶಸ್ವಿನಿ: ದೊಡ್ಡಬಳ್ಳಾಪುರ ತಾಲೂಕು ಮೇಳೆಕೋಟೆ ಎಸ್‌ಜೆಆರ್‌ಸಿವಿ ಶಾಲೆ ವಿದ್ಯಾರ್ಥಿನಿ 625 ಅಂಕದೊಂದಿಗೆ ಯಶ ಕಂಡಿದ್ದಾರೆ. ಆಸಕ್ತಿಯಿಂದ ಕಲಿಯುವುದು ಅನುಮಾನ ಬಂದದ್ದನ್ನು ಆಗಲೇ ಬಗೆಹರಿಸಿಕೊಳ್ಳುವುದು ಉತ್ತಮ ಫಲಿತಾಂಶದ ಗುಟ್ಟು ಎನ್ನುತ್ತಾರೆ ಯಶಸ್ವಿನಿ. ವೈದ್ಯೆಯಾಗುವ ಕನಸಿನೊಂದಿಗೆ ಮುಂದಡಿ ಇಟ್ಟಿದ್ದಾರೆ. ಮಗಳ ಕನಸಿಗೆ ನಾವು ಯಾವಾಗಲು ನೆರವಿಗೆ ನಿಲ್ಲುತ್ತೇವೆ ಎನ್ನುತ್ತಾರೆ ತಂದೆ ಸೋಮಶೇಖರ್ ಗೌಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts