More

    ನಾಲ್ವರು ಅಂತಾರಾಜ್ಯ ವಂಚಕರ ಸೆರೆ – ತಾಂತ್ರಿಕ ಕೌಶಲದಿಂದ ಎಟಿಎಂನ ಹಣ ಕಳವು – ಆರೋಪಿಗಳು ಉತ್ತರ ಪ್ರದೇಶದವರು 

    ದಾವಣಗೆರೆ: ನಗರದ ಕುವೆಂಪು ರಸ್ತೆಯ ಮುರುಘರಾಜೇಂದ್ರ ಕೋ ಆಪರೇಟಿವ್ ಬ್ಯಾಂಕ್‌ನ ಎಟಿಎಂನಲ್ಲಿ ತಾಂತ್ರಿಕ ಕೌಶಲ ಬಳಸಿ 3,47,900 ರೂ.ಗಳನ್ನು ಲಪಟಾಯಿಸಿದ್ದ ನಾಲ್ವರು ಅಂತಾರಾಜ್ಯ ವಂಚಕರನ್ನು ಕೆಟಿಜೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
    ಉತ್ತರಪ್ರದೇಶ ರಾಜ್ಯ ಮೂಲದ ಪ್ರಮೋದ ಕುಮಾರ, ಅರ್ಜುನಸಿಂಗ್, ಸಂದೀಪ್ ಸಿಂಗ್ ಹಾಗೂ ಲವ್‌ಸಿಂಗ್ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ನಾಲ್ಕು ಎಟಿಎಂ ಕಾರ್ಡ್‌ಗಳು, 5 ಲಕ್ಷ ರೂ. ಮೌಲ್ಯದ ಸ್ವಿಪ್ಟ್ ಡಿಜೈರ್ ಕಾರು ಹಾಗೂ 5 ಸಾವಿರ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
    ಮುರುಘರಾಜೇಂದ್ರ ಕೋ ಆಪರೇಟಿವ್ ಬ್ಯಾಂಕ್‌ನ ವ್ಯವಸ್ಥಾಪಕ ಎಂ.ಎಸ್. ಅರುಣ, ಜು.18ಕ್ಕೆ ಆರು ಲಕ್ಷ ಹಣವನ್ನು ಬ್ಯಾಂಕ್‌ಗೆ ಎಟಿಎಂಗೆ ಠೇವಣಿ ಮಾಡಿದ್ದರು. ಮರುದಿನ ಎಟಿಎಂನ ಹಣವನ್ನು ಭೌತಿಕ ತಪಾಸಣೆ ನಡೆಸಿದಾಗ 1.85 ಲಕ್ಷ ರೂ. ಬಾಕಿ ಇದ್ದುದು ಕಂಡುಬಂದಿದೆ. ಆದರೆ ಬ್ಯಾಂಕ್‌ನ ಲೆಡ್ಜರ್ ಗಮನಿಸಿದಾಗ 5.85 ಲಕ್ಷ ಬಾಕಿ ಇರುವುದಾಗಿ ಕಂಡುಬಂದಿದೆ.
    ಇದರಿಂದ ಅನುಮಾನಗೊಂಡು ಸಿಸಿ ಟಿವಿ ಪರಿಶೀಲಿಸಲಾಗಿ ಕೆಲವರು ತಾಂತ್ರಿಕ ಕೌಶಲ ಬಳಸಿ ಹಣ ಲಪಟಾಯಿಸಿದ್ದು ಗೊತ್ತಾಗಿದೆ. ನಂತರ ಕೆಟಿಜೆ ನಗರ ಠಾಣೆಗೆ ದೂರು ನೀಡಲಾಗಿತ್ತು. ನಗರ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಯು.ಜೆ.ಶಶಿಧರ, ಪಿಎಸ್‌ಐ ಮಂಜುಳಾ ಹಾಗೂ ಅವರ ಸಿಬ್ಬಂದಿ ಆರೋಪಿಗಳನ್ನು ಪತ್ತೆ ಹಚ್ಚಿದೆ. ಕಾರ್ಯಾಚರಣೆಗೆ ಎಸ್ಪಿ ಡಾ.ಕೆ.ಅರುಣ್ ಶ್ಲಾಘಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts