More

    ನಾಲೆಗಳನ್ನು ಸ್ವಚ್ಛ ಮಾಡಿ ನೀರು ಹರಿಸಿ

    ಸಾಲಿಗ್ರಾಮ: ಹಳೆಯ ಮತ್ತು ಸೀಳು ನಾಲೆಗಳಲ್ಲಿ ಹೂಳು ತೆಗೆಯದೆ ನೀರು ಹರಿಸಲಾಗುತ್ತಿದ್ದು, ಕೂಡಲೇ ನಾಲೆಗಳನ್ನು ಸ್ವಚ್ಛ ಮಾಡಿ ನೀರು ಹರಿಸಬೇಕು. ಇಲ್ಲದಿದ್ದರೆ ರೈತರ ಜತೆಗೂಡಿ ಹೋರಾಟದ ಮಾಡಲಾಗುವುದು ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಅಂಕನಹಳ್ಳಿ ತಿಮ್ಮಪ್ಪ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

    ಪ್ರತಿ ವರ್ಷ ಒಂದು ಅಥವಾ ಎರಡು ನಾಲೆಗಳ ಹೂಳು ತೆಗೆಯಲಾಗುತ್ತದೆ. ಅದೇ ರೀತಿ ಈ ವರ್ಷವೂ ಆಗಿದೆ. ನಾಲೆಗಳಲ್ಲಿ ಹೂಳು ತೆಗೆದು ನೀರು ಹರಿಸದಿದ್ದರೆ ನಾಲೆ ಏರಿ ಮತ್ತು ಗದ್ದೆಯ ಬದಗಳು ಹೊಡೆದು ಹೋಗುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಈಗಾಗಲೇ ದೊಡ್ಡ ನಾಲೆಗಳಿಗೆ ಕಾವೇರಿ ನದಿಯಿಂದ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆದರೆ ಮಿರ್ಲೆ, ಸಾಲಿಗ್ರಾಮ, ಅಂಕನಹಳ್ಳಿ, ಹಂಪಾಪುರ ಭಾಗದಲ್ಲಿ ನಾಲೆಗಳ ಹೂಳೆತ್ತಿಲ್ಲ.ಅಲ್ಲದೆ ಏರಿಗಳು ದುರಸ್ತಿಯಲ್ಲಿರುವುದು ಮತ್ತು ಕಾಂಕ್ರೀಟ್ ಕಿತ್ತಿ ಹೋಗಿದೆ. ಹಾಗಾಗಿ ಕಾವೇರಿ ನೀರಾವರಿ ಇಲಾಖೆಯ ಅಧಿಕಾರಿ ಗುರುರಾಜ್ ಅವರು ಈ ಸಂಬಂಧ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

    ಫೋಟೋ ಇದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts