More

    ನಾರಗೇರಿಯಲ್ಲಿ ನೌಕಾನೆಲೆ ತ್ಯಾಜ್ಯ

    ಕಾರವಾರ: ಶಿರವಾಡ ನಾರಗೇರಿಯ ಖಾಸಗಿ ಜಾಗದಲ್ಲಿ ಕದಂಬ ನೌಕಾನೆಲೆಯ ತ್ಯಾಜ್ಯವನ್ನು ತಂದು ಎಸೆಯುತ್ತಿದ್ದು, ಜನರಿಗೆ ತೊಂದರೆ ಉಂಟಾಗುತ್ತಿದೆ ಎಂದು ಶಿರವಾಡ ಡೆವಲಪ್​ವೆುಂಟ್ ಅಸೋಸಿಯೇಶನ್ ದೂರಿದೆ.

    ಶಿರವಾಡ ಶೇಜವಾಡ ಸಮೀಪ ನಗರಸಭೆ ತ್ಯಾಜ್ಯವಿಲೇವಾರಿ ಘಟಕವಿದೆ. ಅದರಿಂದಲೇ ಸಾಕಷ್ಟು ವಾಸನೆ ಬರುತ್ತಿದೆ. ಆದರೆ, ಈಗ ನಾರಗೇರಿಯಲ್ಲಿ ಸೀಬರ್ಡ್ ನೌಕಾನೆಲೆಯ ಗುತ್ತಿಗೆದಾರನೊಬ್ಬ ರಾಶಿ, ರಾಶಿ ಕಸ ತಂದು ಖಾಸಗಿ ಕೃಷಿ ಜಮೀನಿನಲ್ಲಿ ಎಸೆಯುತ್ತಿದ್ದಾನೆ. ಇದರಿಂದ ಸುತ್ತಲಿನ ನಿವಾಸಿಗಳಿಗೆ ಕೆಟ್ಟ ವಾಸನೆ ಹರಡುತ್ತಿದೆ. ಇದರಿಂದ ಸೋಳ್ಳೆಗಳ ಪ್ರಮಾಣ ಹೆಚ್ಚಿದೆ. ಕ್ರಿಮಿ ಕೀಟಗಳ ಪ್ರಮಾಣ ಹೆಚ್ಚಿದ್ದು, ಶಾಲಾ ಮಕ್ಕಳಿಗೂ, ಸಾರ್ವಜನಿಕರಿಗೂ ರೋಗ ಹರಡುವ ಭೀತಿ ಎದುರಾಗಿದೆ.

    ಈ ಕುರಿತು ಜಮೀನಿನ ಮಾಲೀಕರಿಗೆ ಹಾಗೂ ಗ್ರಾಪಂಗೆ ತಿಳಿಸಿ ಇದರಿಂದ ಆಗುತ್ತಿರುವ ಸಮಸ್ಯೆಯನ್ನು ಮೌಖಿಕವಾಗಿ ವಿವರಿಸಲಾಗಿದೆ. ಆದರೆ, ಗ್ರಾಪಂ ಯಾವುದೇ ಕಾನೂನು ಕ್ರಮ ವಹಿಸಿಲ್ಲ. ಇದರಿಂದ ಗ್ರಾಪಂ ಸದಸ್ಯರೂ ಶಾಮೀಲಾಗಿರುವ ಅನುಮಾನವಿದೆ ಎಂದು ಶಿರವಾಡ ಡೆವಲಮ್ೆುಂಟ್ ಅಥಾರಿಟಿ ಅಧ್ಯಕ್ಷರು ದೂರಿದ್ದಾರೆ.

    ದೂರು ಬಂದ ಹಿನ್ನೆಲೆಯಲ್ಲಿ ನಾನು ಹಾಗೂ ಗ್ರಾಪಂ ಪಿಡಿಒ ಹೋಗಿ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಆದರೆ, ಅದು ಖಾಸಗಿ ಜಾಗವಾಗಿದ್ದು, ಅಲ್ಲಿ ಯಾವುದೇ ಹಸಿ ಕಸ ಹಾಕುತ್ತಿಲ್ಲ. ಖಾಸಗಿ ಜಮೀನಿನ ಹೊಂಡವನ್ನು ಒಣಕಸದೊಂದಿಗೆ ತುಂಬುತ್ತಿದ್ದಾರೆ. ಅದರಿಂದ ಯಾವುದೇ ಸಮಸ್ಯೆ ಇಲ್ಲ. ನಗರಸಭೆಯ ತ್ಯಾಜ್ಯ ವಿಲೇವಾರಿ ಘಟಕದಿಂದ ವಾಸನೆ ಬರುತ್ತಿದೆ.

    ದಿಲೀಪ ನಾಯ್ಕ

    ಶಿರವಾಡ ಗ್ರಾಪಂ ಅಧ್ಯಕ್ಷ

    ತ್ಯಾಜ್ಯದಿಂದ ಸುತ್ತಲಿನ ನಿವಾಸಿಗಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಉಪವಿಭಾಗಾಧಿಕಾರಿ ಕಚೇರಿಗೆ ದೂರು ನೀಡಿದ್ದೇವೆ. ಖಾಸಗಿ ಜಮೀನಿನ ಮಾಲೀಕರ ವಿರುದ್ಧ ಕ್ರಮ ವಹಿಸುವಂತೆ ಮನವಿ ಮಾಡಿದ್ದೇವೆ.

    ಮಾರುತಿ ಬಾಂದೇಕರ್, ಮಂಜುನಾಥ ಬಾಂದೇಕರ್, ಸೂರಜ್ ಬಾಂದೇಕರ್, ಅಲೋಕ ದೇಸಾಯಿ

    ಇತರ ಗ್ರಾಮಸ್ಥರು, ನಾರಗೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts