More

    ನಾಯಕ ಸಮಾಜದ ಬೇಡಿಕೆ ಈಡೇರಿಕೆ

    ಹುಣಸೂರು: ಧರ್ಮಾಪುರ ಗ್ರಾಮದ ನಾಯಕ ಸಮಾಜದ ಬೇಡಿಕೆಯನ್ನು ಈಡೇರಿಸಿದ ಸಮಾಧಾನ ನನ್ನದಾಗಿದೆ. ತಾಲೂಕಿನ ಸಮಗ್ರ ಅಭಿವೃದ್ಧಿಗೆ ಮುಂದೆಯೂ ದುಡಿಯಲಿದ್ದೇನೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.

    ತಾಲೂಕಿನ ಧರ್ಮಾಪುರ ಗ್ರಾಮದಲ್ಲಿ ನಾಯಕ ಸಮಾಜದ ಸ್ಮಶಾನ ಅಭಿವೃದ್ಧಿಗೆ ತಮ್ಮ ತಾಯಿ ಹೆಸರಿನಲ್ಲಿ 7 ಲಕ್ಷ ರೂ. ನೀಡಿದ ಅವರು, ಖಾಸಗಿ ವ್ಯಕ್ತಿಯಿಂದ ಅರ್ಧ ಎಕರೆ ಭೂಮಿ ಖರೀದಿಸಿ ಸಮುದಾಯದ ಮುಖಂಡರಿಗೆ ಹಸ್ತಾಂತರಿಸಿ ಮಾತನಾಡಿದರು. 5 ತಿಂಗಳ ಹಿಂದೆ ಗ್ರಾಮಕ್ಕೆ ಬಂದಿದ್ದ ಸಂದರ್ಭದಲ್ಲಿ, ಮಾಜಿ ಶಾಸಕ ದಿ. ಎಸ್.ಚಿಕ್ಕಮಾದು ಗ್ರಾಮದಲ್ಲಿ ನಾಯಕ ಸಮಾಜಕ್ಕೆ ಸ್ಮಶಾನ ನಿರ್ಮಾಣದ ಕನಸು ಕಂಡಿದ್ದನ್ನು ತಿಳಿಸಿದ್ದರು. 30 ವರ್ಷಗಳ ನಂತರ ಚಿಕ್ಕಮಾದು ಅವರ ಕನಸನ್ನು ನನಸು ಮಾಡಿದ್ದೇನೆ. ನಾಯಕ ಸಮಾಜ ಕಳೆದ 15 ವರ್ಷಗಳಿಂದ ನನಗೆ ಬೆಂಬಲ ನೀಡುತ್ತಿದೆ. ಮುಂದೆಯೂ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

    ಎಚ್.ಡಿ.ಕೋಟೆ ಶಾಸಕ ಅನಿಲ್ ಎಸ್.ಚಿಕ್ಕಮಾದು ಮಾತನಾಡಿ, ಶಾಸಕ ಎಚ್.ಪಿ.ಮಂಜುನಾಥ್ ನುಡಿದಂತೆ ನಡೆದುಕೊಳ್ಳುವ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ. ನನ್ನ ತಂದೆಯ ಆತ್ಮಕ್ಕೆ ಶಾಂತಿ ಸಿಕ್ಕಿದಂತಾಗಿದೆ. ಇಂತಹ ಕಾರ್ಯಗಳಿಂದ ತಾಲೂಕಿನ ಜನರ ಮನದಲ್ಲಿ ಶಾಶ್ವತವಾಗಿ ನಿಲ್ಲಲು ಮಂಜುನಾಥ್ ಅವರಿಗೆ ಸಾಧ್ಯವಾಗಿದೆ. ಸ್ಮಶಾನ ಅಭಿವೃದ್ಧಿಗಾಗಿ ನಾನು ಒಂದು ಲಕ್ಷ ರೂ.ದೇಣಿಗೆ ನೀಡುತ್ತೇನೆ. ಮುಂಬರುವ ಚುನಾವಣೆಯಲ್ಲಿ ಮಂಜುನಾಥ್ ಅವರಿಗೆ ಬೆಂಬಲ ನೀಡುವ ಮೂಲಕ ಕೈಬಲಪಡಿಸಬೇಕೆಂದು ಕೋರಿದರು.

    ಜಿ.ಪಂ. ಮಾಜಿ ಸದಸ್ಯ ಡಿ.ಕೆ.ಕುನ್ನೇಗೌಡ, ರಾಮದಾಸನಾಯಕ, ಸೋಮಣ್ಣನಾಯಕ, ಕೂಸಪ್ಪನಾಯಕ, ಸಣ್ಣನಾಯಕ, ನಾರಾಯಣ ನಾಯಕ, ಮುಖಂಡ ಪುಟ್ಟಮಾದಯ್ಯ, ನಾಡ ಯಜಮಾನ ವೀರಭದ್ರಶೆಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts