More

    ನಾನು ಕೂಡ ಚಿತ್ರದುರ್ಗ ಲೋಕಸಭಾಕ್ಷೇತ್ರದ ಟಿಕೆಟ್‌ ಆಕಾಂಕ್ಷಿ

    ಚಿತ್ರದುರ್ಗ:ನಾನು ಕೂಡ ಚಿತ್ರದುರ್ಗ ಲೋಕಸಭಾಕ್ಷೇತ್ರದ ಆಕಾಂಕ್ಷಿ,ಆದರೆ ವರಿಷ್ಠರು ಹೇಳಿದರೆ ಮಾತ್ರ ಟಿಕೆಟ್‌ಗೆ ಅರ್ಜಿ ಸಲ್ಲಿಸು ವುದಾಗಿ ಚಿತ್ರದುರ್ಗದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.
    ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಖಂಡಿತಾ ನಾನು ಆಕಾಂಕ್ಷಿ ಆದರೆ,ತಾಲೂಕು,ಜಿಲ್ಲೆ,ರಾಜ್ಯಘಟಕ ಹಾಗೂ ಹೈಕಮಾಂಡ್ ಸೂಚಿಸದರೆ ಮಾತ್ರ ಕಣಕ್ಕೆ ಇಳಿಯುವೆ ಎಂದು ಜಾಣ್ಮೆಯ ಉತ್ತರ ನೀಡಿದರು. ಕಾಂಗ್ರೆಸ್ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇದೆ. ಸ್ಥಳೀಯರು,ಹೊರಗಿನವರೆಂಬ ಪ್ರಶ್ನೆಯೇ ಉದ್ಭವಿಸದು.
    1994ರಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಟ್ಟಿದ್ದ ಪಾರ್ಟಿ ಹಿಂಪಡೆದಿತ್ತು. ಆದರೂ ಬೇಸರಿಸಿಕೊಳ್ಳದೆ ಪಕ್ಷದಲ್ಲಿ ದುಡಿ ದಿದ್ದಕ್ಕೆ ಸಂಸದನಾಗುವ ಅವಕಾಶ ದೊರೆಯಿತು. ಅಭ್ಯರ್ಥಿ ಯಾರು ಎನ್ನುವುದಕ್ಕಿಂತ ಪಕ್ಷದ ಗೆಲುವು ಮುಖ್ಯ. ಗೆಲ್ಲುವಂಥವರನ್ನು ಪಕ್ಷ ಕಣಕ್ಕೆ ಇಳಿಸುತ್ತದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಸ್ವಾಗತಾರ್ಹ.
    ಕಳೆದ ವಿಧಾನಸಭಾ ಚುನಾವಣೆ ದೊರೆತಿರುವ ನಿಚ್ಚಳ ಬಹುಮತದಿಂದ ಸಂತೋಷವಾಗಿದ್ದರೂ ನಮ್ಮಗಳ ಮೇಲೆ ಜವಾಬ್ದಾರಿ ಹೆಚ್ಚಿ ದೆ.ಲೋಕಸಭಾ ಚುನಾವಣೆಯಲ್ಲಿ 28 ಸೀಟುಗಳನ್ನೂ ಗೆಲ್ಲಬೇಕಿದೆ. ತಾಪಂ,ಜಿಪಂ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸವಾಲು ನಮ್ಮ ಮುಂದಿದೆ. ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆಯಿಂದ ನಮ್ಮ ಪಕ್ಷಕ್ಕೆ ಒಳ್ಳೆಯದಾಗಲಿದೆ,ಜೆಡಿಎಸ್‌ನ ಹಲವು ಮುಖಂಡರು ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದರು.
    ಬಾಲಿಶ ಹೇಳಿಕೆ
    ಶಿವಮೊಗ್ಗ ಗಲಾಟೆ ಪ್ರಕರಣಕ್ಕೆ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕುಮ್ಮಕ್ಕಿದೆ ಎಂಬ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರ ಬಾಲಿಶ ಹೇಳಿಕೆಯನ್ನು ಖಂಡಿಸುತ್ತೇನೆ. ಬಿಜೆಪಿ ಜಾತಿಯ ವಿಷ ಬೀಜ ಬಿತ್ತುತ್ತಿದೆ ಎಂದು ದೂರಿದರು. ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಸೌಹಾರ್ದತೆಯಿಂದ ಜೀವನ ನಡೆಸಬೇಕಿದೆ.
    ಭದ್ರೆಗೆ ಅನುದಾನ ಕೊಡಲಿ
    ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರ ಕೂಡಲೇ 5300 ಕೋಟಿ ರೂ.ಅನುದಾನ ಬಿಡುಗಡೆ ಮಾಡಬೇಕು, ಯಾಕೆ ವಿಳಂಬವಾಗಿದೆ ಎಂದು ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರನ್ನು ನಾನು ಕೇಳ ಬಯಸುತ್ತೇನೆ. ಕೇಂದ್ರದ ಮೇಲೆ ಒತ್ತಡ ಹೇರುವಂತೆ ಸಿಎಂ,ಡಿಸಿಎಂಗೂ ಮನವಿ ಮಾಡುವುದಾಗಿ ತಿಳಿಸಿದರು.
    ಆರ್ಥಿಕ ಸ್ಥಿತಿ ಸರಿದಾರಿಗೆ ಬರಲಿದೆ
    ಗ್ಯಾರಂಟಿಗಳಿಂದ ಶಾಸಕರು ಮಲಗುವಂತಾಗಿದೆ ಎಂಬ ಕಾಂಗ್ರೆಸ್‌ಶಾಸಕರೊಬ್ಬರ ಹೇಳಿಕೆ ಕುರಿತಂತೆ ಗ್ಯಾರಂಟಿಗಳಿಂದ ಸದ್ಯಕ್ಕೆ ಆರ್ಥಿ ಕವಾಗಿ ತೊಂದರೆ ಆಗಿದ್ದರೂ 6-8 ತಿಂಗಳಲ್ಲಿ ಅಭಿವೃದ್ಧಿಗೆ ಅನುದಾನ ಸಿಗಲಿದೆ. 14 ಬಾರಿ ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ಸಮರ್ಥರಿದ್ದಾರೆ. ಬಿಜೆಪಿ ಅವಧಿ ಹದಗೆಟ್ಟಿದ್ದ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸರಿದಾರಿಗೆ ತರುತ್ತಿದ್ದಾರೆ. ಸಿಎಂ,ಡಿಸಿಎಂ ಹಾಗೂ ಸಚಿವ ಸಂಪುಟ ಅಭಿವೃದ್ಧಿ ನಿಟ್ಟಿನಲ್ಲಿ ವೇಗವಾಗಿ ಕೆಲಸ ಮಾಡುತ್ತಿದೆ. ಬರ ಕಾಡುತ್ತಿದೆ. ಬೆಳೆವಿಮೆಗೆ ಸಂಬಂಧಿಸಿದ ನ್ಯೂನ್ಯತೆಗಳನ್ನು ಸರಿ ಪಡಿಸುವಂತೆ ಸರ್ಕಾರಕ್ಕೆ ಕೋರುವುದಾಗಿ ಹೇಳಿದರು.
    ಕವಾಡಿಗರಹಟ್ಟಿಗೆ ಸಿಎಂ ಭೇಟಿ ಇಲ್ಲ
    ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳುತ್ತಾರೆ. ಸಿಎಂ ಸಿದ್ದರಾಮಯ್ಯ ಅ.6ರಂದು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಚಿತ್ರದುರ್ಗದಲ್ಲಿ ಜಿಲ್ಲಾ ಕಾಂಗ್ರೆಸ್ಸಿನಿಂದ ಅ ವರನ್ನು ಸ್ವಾಗತಿಸಲಾಗುವುದು. ಸಿಎಂ ಕವಾಡಿಗರ ಹಟ್ಟಿಗೆ ಭೇಟಿ ನೀಡುತ್ತಿಲ್ಲ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ ಮತ್ತಿತರ ಪ್ರಮುಖರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts