More

    ನಾಣ್ಯ ಸಂಗ್ರಹ ಯುವಕರಿಗೆ ಮಾದರಿ

    ನಿಪ್ಪಾಣಿ: ಮೂವತ್ತು ವರ್ಷಗಳಿಂದ ಶೇಖರ ಕೋನೆ ಅವರು ಸುಮಾರು 1400ಕ್ಕೂ ಹೆಚ್ಚು ನಾಣ್ಯ ಹಾಗೂ ನೋಟುಗಳನ್ನು ಸಂಗ್ರಹಿಸುವ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು. ಇಲ್ಲಿನ ವಿದ್ಯಾ ಸಂವರ್ಧಕ ಮಂಡಳದ ಎಲ್ಲ ಶೈಕ್ಷಣಿಕ ಅಂಗಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಎಸ್‌ಎಂ ಸಿಬಿಎಸ್‌ಇ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಾಣ್ಯ ಹಾಗೂ ನೋಟುಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಪ್ರದರ್ಶನದಲ್ಲಿ ಪ್ರಾಚೀನ ಕರೆನ್ಸಿ, ಸೋಮಾಲಿಲ್ಯಾಂಡ್‌ನಲ್ಲಿ ಬಳಸುವ 12 ನಾಣ್ಯ, ನಿಪ್ಪಾಣಿಯ ಸಿದ್ಧೋಜಿರಾಜೆ ದೇಸಾಯಿ ನಿಪ್ಪಾಣಿಕರ, ಟಿಪ್ಪುಸುಲ್ತಾನರ ಕಾಲದ ನಾಣ್ಯ ನೋಡಬಹುದು. ಜನಪದರ ಕಾಲದ, ಮರಾಠ, ಮೊಗಲ ಹಾಗೂ ವಿಜಯನಗರ ಕಾಲದ ನಾಣ್ಯಗಳಿವೆ ಎಂದರು.

    ದೇಶದ 1, 2, 5, 20, 50, 100 ರೂ. ನೋಟುಗಳು, 200 ರೂ. ನಾಣ್ಯ, ಬ್ರಿಟಿಷರ 100 ಪೌಂಡ್, ಪೆರು ದೇಶದ 500 ಸೋಲ್, ಜಿಂಬಾಬ್ವೆ ದೇಶದ 500 ಯುಎಸ್ ಡಾಲರ್, ಅಮೆರಿಕದ ಡಾಲರ್‌ಗಳಿವೆ. ನಾಣ್ಯ ಸಂಗ್ರಹ ಹವ್ಯಾಸ ಮತ್ತು ನೋಡುವುದು ವಿವಿಧ ದೇಶಗಳ ಕರೆನ್ಸಿ ವ್ಯವಹಾರ ತಿಳಿದುಕೊಳ್ಳಲು ಸಹಾಯಕವಾಗುತ್ತದೆ. ಶೇಖರ ಕೋನೆ ಅವರನ್ನು ಸತ್ಕರಿಸಲಾಯಿತು. ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಐತಿಹಾಸಿಕ ನಾಣ್ಯಗಳನ್ನು ನೋಡಿ ಮಾಹಿತಿ ಪಡೆದುಕೊಂಡರು. ಮಂಡಳದ ಉಪಕಾರ್ಯಾಧ್ಯಕ್ಷ ಆರ್.ವೈ.ಪಾಟೀಲ, ನಿರ್ದೇಶಕ ಸಂಜಯ ಮೊಳವಾಡೆ, ರಾವಸಾಹೇಬ ಪಾಟೀಲ, ಸಮೀರ್ ಬಾಗೇವಾಡಿ, ವಿನಾಯಕ ಢೋಲೆ, ಸಿಇಒ ಡಾ.ಸಿದ್ಧಗೌಡ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts