More

    ನಾಡು ರಕ್ಷಣೆಗೆ ಕಸಾಪ ಬದ್ಧ

    ಕಡೂರು: ಕನ್ನಡ ನಾಡು, ನುಡಿ, ಜಲಕ್ಕೆ ಧಕ್ಕೆ ಉಂಟಾದಾಗ ಬೀದಿಗಿಳಿದು ಹೋರಾಟ ಮಾಡಲು ಕನ್ನಡ ಸಾಹಿತ್ಯ ಪರಿಷತ್ ಸಿದ್ಧವಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
    ಸಿಂಗಟಗೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಸಾಪ ಹೋಬಳಿ ಘಟಕದ ಪದಾಧಿಕಾರಿಗಳ ಸೇವಾದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕಸಾಪ ಆಜೀವ ಸದಸ್ಯತ್ವವನ್ನು ಆಗಸ್ಟ್ ಅಂತ್ಯದ ಒಳಗೆ 4 ಸಾವಿರಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.
    ತಾಲೂಕು ಕಸಾಪ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞ್ಞಾವಿಧಿ ಬೋಧಿಸಿದರು. ಹೋಬಳಿ ಕಸಾಪ ಗೌರವಾಧ್ಯಕ್ಷ ಎಸ್.ಕೆ.ಮಲ್ಲಿಕಾರ್ಜುನ್ ಮಾತನಾಡಿದರು. ಸಿಂಗಟಗೆರೆ ಹೋಬಳಿ ಘಟಕದ ಅಧ್ಯಕ್ಷೆ ಷಪೀತಾಬೇಗಂ ಪರಿಷತ್ತಿನ ಧ್ವಜ ಸ್ವೀಕರಿಸಿ ಸೇವಾದೀಕ್ಷೆ ಪಡೆದರು. ದಿನೇಶ್, ಲಲಿತಮ್ಮ, ಎಸ್.ಎಲ್.ಕುಬೇರ, ಎಸ್.ಡಿ.ಬಾಬು, ಕೋಶಾಧ್ಯಕ್ಷ ವಡೇರಹಳ್ಳಿ ಅಶೋಕ್, ಮುಖ್ಯಶಿಕ್ಷಕಿ ಎಚ್.ಎಸ್.ಜಯಂತಿ, ಪದಾಧಿಕಾರಿಗಳಾದ ಗಿರೀಶಾರಾಧ್ಯ, ಕೆ.ಬಿದರೆ ನಾಗರಾಜ್, ಎಸ್.ವಸಂತಕುಮಾರಿ, ಮೋಹನಕುಮಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts