More

    ನಾಡು, ನುಡಿ ರಕ್ಷಣೆ ಎಲ್ಲರ ಹೊಣೆ

    ಬೈಲಹೊಂಗಲ, ಬೆಳಗಾವಿ: ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಹಿರಿಮೆ ಹೊಂದಿದೆ. ನಾಡಿನ ಭಾಷೆ, ನೆಲ ಜಲ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ತಾಲೂಕು ಆಡಳಿತ ವತಿಯಿಂದ ರಾಜ್ಯೋತ್ಸವ ನಿಮಿತ್ತ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಪುನೀತ ಅವರ ಸಮಾಜ ಸೇವೆಗೆ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದು ಸಂತಸ ತಂದಿದೆ ಎಂದರು. ತಹಸೀಲ್ದಾರ್ ಬಸವರಾಜ ನಾಗರಾಳ, ಶಶಿಧರ ಬಗಲಿ, ಬಸವರಾಜ ಜನ್ಮಟ್ಟಿ ಇತರರಿದ್ದರು.

    ಕಕ್ಕೇರಿ ವರದಿ: ಕಕ್ಕೇರಿ ಹಾಗೂ ಸಮೀಪದ ಲಿಂಗನಮಠ, ವಾಲ್ಮೀಕಿ ನಗರ, ಭೂರನಕಿ, ಮಾಸ್ಕಿನಟ್ಟಿ, ಸುರಪುರ, ಕೇರವಾಡ, ಗೊಧೋಳ್ಳಿ, ಗುಂಡಳ್ಳಿ, ಸುರಾಪುರ, ಘಸ್ಟೋಳ್ಳಿದಡ್ಡಿ, ಘಸ್ಟೋಳ್ಳಿ ಗ್ರಾಮಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಭೀಮಪ್ಪ ಅಂಬೋಜಿ, ದಯಾನಂದ ಗುಪಿತ, ಬದ್ರು ದೊಡಮನಿ, ರಿಯಾಜ್ ಅಹ್ಮದಪಾಟೀಲ್, ಕಾರ್ತಿಕ ಅಂಬೋಜಿ, ಪಿಡಿಒ ಸಂಜೀವ ಬೊಂಗಾಳೆ, ಆಜಾದ್ ಸೌದಾಗಾರ್, ಬಸವರಾಜ ಅಂಬಡಗಟ್ಟಿ, ಮಲ್ಲಿಕಾರ್ಜುನ ಕುಕುಡೊಳ್ಳಿ, ಶಾನೂರ ಮಾದಾರ, ಕಲ್ಲಪ್ಪ ಕರಿಕಟ್ಟಿ ಇತರರಿದ್ದರು.

    ಹಿರೇಬಾಗೇವಾಡಿ ವರದಿ: ಹಿರೇಬಾಗೇವಾಡಿ ಸಮೀಪದ ಅರಳೀಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ತೋಂಟೇಶ್ವರ ವಿರಕ್ತಮಠದ ಶಿವಮೂರ್ತಿ ಸ್ವಾಮೀಜಿ ಬಹುಮಾನ ವಿತರಿಸಿದರು. ನಾಗರಾಜ ಕರಲಿಂಗನವರ, ದುಂಡಯ್ಯ ಪೂಜಾರ, ನಾಗಪ್ಪ ಮನೆನ್ನಿ, ಸುರೇಶ ಪಾರ್ವತಿ, ಉಮೇಶ ಪಾಟೀಲ, ಶಿವಾನಂದ ಹಲಕರ್ಣಿಮಠ, ಸಿದ್ದು ಗಾಣಗಿ, ಇಂದ್ರಾ ಹರಿಜನ, ಭಾರತಿ ಅಂಗಡಿ, ಎ್, ಆರ್,ದೊಡಮನಿ ಇತರರಿದ್ದರು.

    ಕೆ.ಚಂದರಗಿ ವರದಿ: ಕೆ ಚಂದರಗಿ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಕೆ.ಚಂದರಗಿಯ ಶ್ರೀ ಜೈ ಭಜರಂಗಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿದರು. ಸೋಮನಟ್ಟಿ ಢವಳೇಶ್ವರ, ಜಾಧವ ಮುರಕಟ್ನಾಳ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts