More

    ನಾಡಿನ ಯೋಜನೆಗಳ ಪ್ರೇರಕಶಕ್ತಿ ವಿಶ್ವೇಶ್ವರಯ್ಯ – ಪ್ರಭುದೇವ್ -ಬಿಇಎ ಶಿಕ್ಷಣ ಕಾಲೇಜಿನಲ್ಲಿ ಸರ್ ಎಂ ವಿ ಜನ್ಮ ದಿನಾಚರಣೆ

    ದಾವಣಗೆರೆ‘ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ಭಾಗ್ಯವಿಧಾತ ಹಾಗೂ ಆಧುನಿಕ ಮೈಸೂರಿನ ನಿರ್ಮಾತೃ ವಾಗಿದ್ದಾರೆ. ನಾಡಿನ ಮಹತ್ವದ ಚಿಂತನೆಗಳ, ಯೋಜನೆಗಳ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ತಾಪಂ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಎಲ್.ಎಸ್. ಪ್ರಭುದೇವ್ ತಿಳಿಸಿದರು.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಬಿಇಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ. ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
    ೧೦೨ ವರ್ಷಗಳ ಬದುಕಿನಲ್ಲಿ ಕರ್ಮಯೋಗಿಯಂತೆ ಬಾಳಿದವರು ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು. ಬದುಕಿಡೀ ನಾಡಿಗೆ ದುಡಿದು, ಸೇವೆ ಸಲ್ಲಿಸಿದ ನಮ್ಮ ಹೆಮ್ಮೆಯ ಈ ಭಾರತೀಯ, ತಮ್ಮ ಜೀವಿತ ಕಾಲದಲ್ಲಿಯೇ ದಂತಕತೆಯಾದರು ಎಂದು ಹೇಳಿದರು.
    ಕನ್ನಡದ ನೆಲ, ವಿಜ್ಞಾನ, ತಂತ್ರಜ್ಞಾನಗಳ ತವರೂರಾಗಿದೆ. ಇದರ ಬುನಾದಿಯಲ್ಲಿ ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮ ದೂರದೃಷ್ಟಿ, ಸಮಾಜಮುಖಿ ಯೋಜನೆಗಳಿವೆ. ಅವರ ಪ್ರತಿಭೆ ಮನಗಂಡು ಅವರೊಡನೆ ಸಹಕರಿಸಿದ, ಅವರ ಯೋಜನೆಗಳನ್ನು ಬೆಂಬಲಿಸಿದ ಮೈಸೂರು ಮಹಾರಾಜರು,ದಿವಾನರುಗಳ ಸಹಯೋಗವು ಇದೆ. ಎಂದು ತಿಳಿಸಿದರು.
    ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣಕರ್ತರೂ ಆಗಿರುವ ವಿಶ್ವೇಶ್ವರಯ್ಯ ಅವರು ಹಲವಾರು ಸಾಧನೆಗಳ ಕಿರೀಟ ಆಗಿದ್ದಾರೆ. ಇಂಜಿನಿಯರ್ ಗಳಲ್ಲದೆ ಎಲ್ಲರಿಗೂ ಅವರು ಆದರ್ಶ ಪುರುಷ ಆಗಿದ್ದಾರೆ ಎಂದರು.
    ಕಾಲೇಜಿನ ಪ್ರಾಚಾರ್ಯ ಡಾ. ಎ ಜೆ ನೀತಾ ಕಾರ್ಯಕ್ರಮ ಉದ್ಘಾಟಿಸಿದರು. ಲೋಕೋಪಯೋಗಿ ಇಲಾಖೆಯ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಡಾ ವೈ ಎನ್ ರಂಗನಾಥ್ ಅವರನ್ನು ಸನ್ಮಾನಿಸಲಾಯಿತು.
    ಕಾರ್ಯಕ್ರಮದಲ್ಲಿ ಮಹಾಲಿಂಗರಂಗ ಪ್ರಶಸ್ತಿ ಪುರಸ್ಕೃತ ಬಾ ಮಾ ಬಸವರಾಜಯ್ಯ,,ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ ದಿಳ್ಳಪ್ಪ, ಕೋಶಾಧ್ಯಕ್ಷರಾದ ಕೆ ರಾಘವೇಂದ್ರನಾಯರಿ, ಎಚ್ ಎನ್ ಶಿವಕುಮಾರ್, ಎ ಮಹಾಲಿಂಗಪ್ಪ, ನಿರುತ್ತಾ ನೌಕರರ ಸಂಘದ ಕಾರ್ಯದರ್ಶಿ, ಬಿ ಕೆ ರೇಣುಕಾ ಮೂರ್ತಿ ಇದ್ದರು.
    ತನುಶ್ರೀ ಪ್ರಾರ್ಥನೆ ಹಾಡಿದರೆ, ಕಲ್ಮನೆ ಉದಯ್ ಕುಮಾರ್ ಸ್ವಾಗತಿಸಿದರು. ಜ್ಯಾಸ್ಮಿನ್ ತಾಜ್ ತರ್ನಾಳ್ ಕಾರ್ಯಕ್ರಮ ನಿರೂಪಿಸಿದರು. ಬಿ.ನಿರೂಪಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts