More

    ನಾಡಿನ ಪ್ರಗತಿಗೆ ಮಾಧ್ಯಮದ ಶ್ರಮ ಅಪಾರ

    ಯಾದಗಿರಿ: ತಲತಲಾಂತರ ವರ್ಷಗಳಿಂದ ನಾಡಿನ ಸಮಗ್ರ ಪ್ರಗತಿ ಮಾಧ್ಯಮ ರಂಗದ ಸೇವೆ ಅಪಾರವಾಗಿದೆ ಎಂದು ಗುರುಮಠಕಲ್ ಜೆಡಿಎಸ್ ಅಭ್ಯಥರ್ಿ ಶರಣಗೌಡ ಕಂದಕೂರ ತಿಳಿಸಿದರು.

    ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಸಾಧಕ ಪತ್ರಕರ್ತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಜಕಾರಣಿಗಳು ಎಡವಿದಾಗ ಎಚ್ಚರಿಸುವ ಕೆಲಸ ಪತ್ರಕರ್ತರು ಸದಾ ಮಾಡುತ್ತಿದ್ದಾರೆ. ಇದರ ಜತೆಗೆ ತಾವು ನೈತಿಕೆಯಿಂದ ವೃತ್ತಿ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿ ಆಗಬೇಕು ಎಂದರು.

    ಸಾಮಾನ್ಯವಾಗಿ ರಾಜಕಾರಣಿಗಳು ಯಾರಿಗೂ ಹೆದರುವುದಿಲ್ಲ. ಆದರೆ ಪತ್ರಕರ್ತರಿಗೆ ಮಾತ್ರ ಹೆದರುತ್ತಾರೆ. ನಿಮ್ಮ ಲೇಖನಿಗೆ ಅಂಥ ಶಕ್ತಿಯಿದೆ. ಒಂದು ಸಕರ್ಾರ ಮಾಡಲಾಗದ ಕೆಲಸವನ್ನು ಒಬ್ಬ ಪತ್ರಕರ್ತ ತನ್ನ ವರದಿಯಿಂದ ಮಾಡುತ್ತಾನೆ. ಆದರೆ ಆತನ ಕುಟುಂಬ ಇಂದು ಸಂಕಷ್ಟದಲ್ಲಿದೆ. ಸಕರ್ಾರದಿಂದ ಪತ್ರಕರ್ತರಿಗೆ ಸೌಲಭ್ಯ ಕಲ್ಪಿಸಲು ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಈ ವಿಷಯದಲ್ಲಿ ಶಾಸಕ ನಾಗನಗೌಡ ಕಂದಕೂರ ಸಹ ನಿಮ್ಮ ಬೆನ್ನಿಗೆ ನಿಲ್ಲುತ್ತಾರೆ ಎಂದು ಹೇಳಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್ ಮಾತನಾಡಿ, ದೇಶದಲ್ಲಿ ನ್ಯಾಯಾಂಗ, ಕಾಯಾರ್ಂಗ, ಶಾಸಕಾಂಗ ಮತ್ತು ನಾಲ್ಕನೇ ಅಂಗವೇ ಮಾಧ್ಯಮ. ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿದಾಗ ಮಾತ್ರ ಸಮಾಜದಲ್ಲಿ ಸುಧಾರಣೆ ಕಾಣಲು ಸಾಧ್ಯ ಎಂದು ತಿಳಿಸಿದರು.

    ಕಲುಬರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ, ಪತ್ರಕರ್ತರು ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡುತ್ತಾರೆ. ಹಲವಾರು ಹಗರಣಗಳನ್ನು ಬಯಲಿಗೆ ಎಳೆದಿದ್ದಾರೆ. ಇದಕ್ಕೆ ಇತ್ತೀಚೆಗೆ ನಡೆದ ಪಿಎಸ್ಐ ನೇಮಕಾತಿ ಹಗರಣವೇ ಸಾಕ್ಷಿಯಾಗಿದೆ ಎಂದರು.

    ಖ್ಯಾತ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮಾತನಾಡಿ, ಪತ್ರಕರ್ತರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಅಮೋಘವಾಗಿದೆ. ಅವರು ತಮ್ಮ ಆರೋಗ್ಯದ ಕಡೆಗೆ ಗಮನ ಹರಸಿಕೊಂಡು ಕರ್ತವ್ಯ ನಿರ್ವಹಿಸಬೇಕಿದೆ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯತನ ಮಾಡಬಾರದು ಎಂದು ಸಲಹೆ ನೀಡಿದರು.

    ನರಸಪ್ಪ ನಾರಯಣೋರ್ ಪ್ರಾಸ್ತಾವಿಕ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್, ಪರಿಷತ್ತಿನ ರಾಜ್ಯ ಕಾರ್ಯದಶರ್ಿ ರಾಘವೇಂದ್ರ ಕಾಮನಟಗಿ, ಪ್ರಧಾನ ಕಾರ್ಯದಶರ್ಿ ದಿನೇಶ್ ವಿ.ಸಿ ಇದ್ದರು. ಭೀಮಶೇನರಾವ್ ಕುಲಕಣರ್ಿ ಸ್ವಾಗತಿಸಿದರು.

    ಇದೇ ವೇಳೆ ಹಿರಿಯ ಪತ್ರಕರ್ತರಾದ ಆನಂದ ಮದಸೂಧನ ಸೌದಿ, ಬಾಬುರಾವ್ ಯಡ್ರಾಮಿ, ಬಾಲಪ್ಪ ಕುಪ್ಪಿ, ಅಶೋಕ ಸಾಲವಾಡಗಿ ಮತ್ತು ಸಿದ್ದಪ್ಪ ಲಿಂಗೇರಿಗೆ ಸತ್ಕರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts