More

    ನಾಗ ದೇವರಿಗೆ ಹಾಲೆರೆದು ಭಕ್ತಿ ಸಮರ್ಪಣೆ

    ಗದಗ: ಕರೊನಾ ವೈರಸ್ ಹಾವಳಿ ಮಧ್ಯೆಯೂ ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ಸಡಗರ-ಸಂಭ್ರಮದಿಂದ ನಾಗರ ಪಂಚಮಿ ಆಚರಿಸಲಾಯಿತು. ಕುಟುಂಬ ಸದಸ್ಯರೆಲ್ಲರೂ ನಾಗಪ್ಪನಿಗೆ ಹಾಲೆರೆದು ಭಕ್ತಿ ಸಮರ್ಪಿಸಿದರು.

    ಸ್ಥಳೀಯ ವಿವೇಕಾನಂದ ನಗರದ ನಿಸರ್ಗ ಬಡಾವಣೆಯ ನಾಗನಕಟ್ಟೆ, ಪಂಚಾಕ್ಷರಿ ನಗರದ ಬನ್ನಿಮಹಾಕಾಳಿ ದೇವಸ್ಥಾನ, ಈಶ್ವರ ದೇವಸ್ಥಾನ, ಕರಿಯಮ್ಮನಕಲ್ಲ ಬಡಾವಣೆಯ ದೇವಸ್ಥಾನ, ವೀರನಾರಾಯಣ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಗಳು ಹಾಗೂ ಬಡಾವಣೆಗಳಲ್ಲಿರುವ ನಾಗನ ಮೂರ್ತಿಗಳಿಗೆ ಮಹಿಳೆಯರು, ಯುವತಿಯರು ಹಾಲೆರೆದು ಪೂಜೆ ಸಲ್ಲಿಸಿದರು.

    ಪಂಚಮಿ ವಿಶೇಷವಾದ ಅಳ್ಳಿಟ್ಟು, ಶೇಂಗಾ, ಎಳ್ಳು, ರವೆ, ಪುಟಾಣಿ ಹಿಟ್ಟು, ಮಂಡಕ್ಕಿ, ಮೈದಾ ಹಿಟ್ಟಿನ ಗುಳಗಿ, ದಾಣಿ, ಅಳ್ಳು ಹಾಗೂ ವಿವಿಧ ಧಾನ್ಯಗಳಿಂದ ಮಾಡಿದ ಉಂಡೆಗಳು (ಲಡ್ಡು) ಹಾಗೂ ಕೊಬ್ಬರಿ, ಬೆಲ್ಲವನ್ನು ಪ್ರತಿಯೊಬ್ಬರೂ ಸವಿದರು.

    ಪ್ರತಿವರ್ಷ ಅಲ್ಲಲ್ಲಿ ದೊಡ್ಡದಾದ ಮರಗಳಿಗೆ ಜೋಕಾಲಿ ಕಟ್ಟಿ ಮಹಿಳೆಯರು, ಮಕ್ಕಳು ಉತ್ಸಾಹದಿಂದ ಜೋಕಾಲಿ ಜೀಕುತ್ತಿದ್ದ ದೃಶಗಳು ಈ ಬಾರೊ ಅಷ್ಟಾಗಿ ಕಂಡು ಬರಲಿಲ್ಲ. 3 ದಿನ ಆಚರಿಸುವ ಹಬ್ಬದಲ್ಲಿ ಗುರುವಾರ ರೊಟ್ಟಿ ಪಂಚಮಿ, ಶುಕ್ರವಾರ ನಾಗರ ಪಂಚಮಿ ಆಚರಿಸಲಾಯಿತು. ಶನಿವಾರ ಮನೆಯಲ್ಲಿಯೇ ಮಣ್ಣಿನ ನಾಗಮೂರ್ತಿಗೆ ಹಾಲೆರೆಯುವ ಸಂಪ್ರದಾಯ ಆಚರಿಸಲಾಗುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts