More

    ನಾಗರಿಕತೆ ಹಕ್ಕಿಗೆ ಚ್ಯುತಿ ಬಾರದಿರಲಿ

    ದಾಂಡೇಲಿ: ಎನ್​ಪಿಆರ್ (ನ್ಯಾಷನಲ್ ಪೊಪ್ಯುಲೇಶನ್ ರಿಜಿಸ್ಟರ್) ಜಾರಿ ವಿರೋಧಿಸಿ ಗುರುವಾರ ಸೋಮಾನಿ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಯಿತು.

    ನಿವೃತ್ತ ಪ್ರಾಧ್ಯಾಪಕ ಎಸ್.ವೈ. ಹಾದಿಮನಿ ಗಾಂಧೀಜಿ ಹಾಗೂ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.

    ನಂತರ ಮಾತನಾಡಿದ ಅವರು, ಎನ್​ಪಿಆರ್ ಕುರಿತು ಮಾಹಿತಿ ಕೇಳಲು ಮನೆಗೆ ಬರುವ ಅಧಿಕಾರಿಗಳಿಗೆ ಸಹಕರಿಸೋಣ ಆದರೆ, ನಮ್ಮ ನಾಗರಿಕತೆಗೆ ಹಕ್ಕು ಚ್ಯುತಿ ಬರುವಂತಹ ಹಾಗೂ ಸಂವಿಧಾನಕ್ಕೆ ಧಕ್ಕೆ ಬರುವಂತಹ ಯಾವುದೇ ಪ್ರಶ್ನೆಗಳನ್ನು ಕೇಳಿದರೆ ಅದಕ್ಕೆ ಉತ್ತರ ನೀಡಲು ನಾವು ನಿರಾಕರಿಸಬಹುದು ಎಂದರು.

    ಸಂವಿಧಾನ ಬಚಾವೋ ಸಮಿತಿ ಸಂಚಾಲಕ ಹರೀಶ ನಾಯಕ, ಸಮಿತಿಯ ಸದಸ್ಯ ಅಬ್ದುಲ್ ಸತ್ತಾರ ಅಜ್ರೇಕರ, ಸಮಿತಿಯ ಸದಸ್ಯ ಟಿ.ಎಸ್. ನಾಯ್ಕ, ತಸವರ್ ಸೌದಾಗರ್, ಜಾಫರ್ ಮಸಣಿಕಟ್ಟಿ ನಗರಸಭೆಯ ಮಾಜಿ ಅಧ್ಯಕ್ಷ ನಾಗೇಶ ಸಾಳುಂಕೆ, ನಗರಸಭೆ ಸದಸ್ಯರಾದ ಆದಂ ದೇಸೂರ ಯಾಸ್ಮಿನ್ ಕಿತ್ತೂರ, ಶಾಹಿದಾ ಪಠಾಣ, ಸುಧಾ ಜಾಧವ, ನೀಲವ್ವ ಬಂಡಿವಡ್ಡರ, ರುಕ್ಮೀಣಿ ಬಾಗಡೆ, ಪ್ರೀತಿ ನಾಯರ, ಶಿಲ್ಪಾ ಕೊಡೆ, , ಆಸಿಫ್ ಮುಜಾವರ್, ಕಾಂಗ್ರೆಸ್ ಮುಖಂಡರಾದ ಯಾಸರ್ ಇಮ್ತಿಯಾಜ್ ಶೇಖ್, ದಾದಾಪೀರ, ಮೊಜಸ್ ಆರ್.ಎನ್., ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅಕ್ರಮ ಖಾನ್, ಸದಸ್ಯ ಫಿರೋಜ ಪೀರಜಾದೆ, ಸೈಯದ ಅಬಿದ ಇದ್ದರು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts