More

    ನಾಗರಹಳ್ಳಿ: ಕೂಳೆ ಪಂಚಮಿ ಜಾತ್ರೆ ಸಂಪನ್ನ

    ರಿಪ್ಪನ್‌ಪೇಟೆ: ಹುಂಚ ಗ್ರಾಪಂ ವ್ಯಾಪ್ತಿಯ ನಾಗರಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಕೂಳೆಪಂಚಮಿ ಜಾತ್ರೋತ್ಸವ ಸಂಭ್ರಮದಿಂದ ಜರುಗಿತು.
    ಸಂಪ್ರಾಯದಂತೆ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಸ್ವಾಮಿಯ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಂಡವು. ಸ್ವಾಮಿಗೆ ಕ್ಷೀರಾ, ನಾರಿಕೇಳ, ಹರಿದ್ರ, ಗಂಧ, ಪಂಚಾಮೃತ ಸಹಿತ ವಿವಿಧ ಅಭಿಷೇಕಗಳು ಸಂಪನ್ನಗೊಂಡು, ವಿಶೇಷ ಪುಷ್ಪಾಲಂಕಾರದೊಂದಿಗೆ ಕುಂಕುಮಾರ್ಚನೆ ನಡೆಯಿತು. ಮಹಾಮಂಗಳಾರತಿ ವೇಳೆ ಭಕ್ತರು ತಂದಿದ್ದ ಹಣ್ಣುಕಾಯಿ ನೈವೇದ್ಯ ಮಾಡಲಾಯಿತು. ಮೃತ್ತಿಕಾ ಹಾಗೂ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಹರಕೆಹೊತ್ತ ಭಕ್ತರು ಬೆಳ್ಳಿನಾಗರ, ಬಾಳೆಹಣ್ಣು ಅರ್ಪಿಸಿ ತುಲಾಭಾರ ನೆರವೇರಿಸಿದರು. ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ನಾಗನ ಸೇವೆಗೈದು ಕೃತಾರ್ಥರಾದರು. ಭಕ್ತಾದಿಗಳಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ವ್ಯವಸ್ಥಾಪನಾ ಸಮಿತಿಯ ಪದಾಧಿಕಾರಿಗಳು, ರಕ್ಷಣಾ ಇಲಾಖೆ ಸಿಬ್ಬಂದಿ ಜಾತ್ರಮಹೋತ್ಸವದ ಉಸ್ತುವಾರಿ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts