More

    ರಿಪ್ಪನ್‌ಪೇಟೆ: ನಾಗರಹಳ್ಳಿಯಲ್ಲಿ ನಾಗೇಂದ್ರಸ್ವಾಮಿ ಜಾತ್ರೆ ಸಡಗರ

    ರಿಪ್ಪನ್‌ಪೇಟೆ: ನಾಗರ ಪಂಚಮಿಯನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಸಂಪ್ರದಾಯದಂತೆ ನಾಗರ ಮೂರ್ತಿಗಳಿಗೆ, ಹುತ್ತಗಳನ್ನು ಅಲಂಕರಿಸಿ ಹೆಂಗೆಳೆಯರು ಮಂಗಳವಾರ ಮುಂಜಾನೆಯಿಂದಲೇ ತನಿ ಎರೆಯುವ ಮೂಲಕ ಪ್ರಾರ್ಥನೆ ಸಲ್ಲಿಸಿದರು.
    ಇಲ್ಲಿನ ಪುರಾಣ ಪ್ರಸಿದ್ಧ ನಾಗರಹಳ್ಳಿ ಶ್ರೀ ನಾಗೇಂದ್ರ ಸ್ವಾಮಿಯ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಈ ವರ್ಷವು ಅಸಂಖ್ಯಾತ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಜಾತ್ರೆಯಲ್ಲಿ ಪಾಲ್ಗೊಂಡು ಇಷ್ಟಾರ್ಥ ಸಿದ್ಧಿಗಾಗಿ ಸ್ವಾಮಿಯಲ್ಲಿ ಪ್ರಾರ್ಥಿಸಿದರು. ನಾಗದೈವನ ಸನ್ನಿಧಿಯಲ್ಲಿರುವ ಸಾವಿರಾರು ನಾಗರ ಕಲ್ಲುಗಳಿಗೆ ಸಾರ್ವಜನಿಕರು ತನಿ ಎರೆದು, ನೈವೇದ್ಯ ಅರ್ಪಿಸಿದರು. ಮುಖ್ಯರಸ್ತೆಯ ಇಕ್ಕೆಲಗಳಲ್ಲಿನ ಸಾಲು ಸಾಲು ಸಿಹಿತಿಂಡಿ, ಆಟಿಕೆ ಸಾಮಾನು, ಅಲಂಕಾರಿಕ ವಸ್ತುಗಳ ಅಂಗಡಿ ಮುಂಗಟ್ಟುಗಳು ಜಾತ್ರೆಗೆ ಮೆರಗು ನೀಡಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts