More

    ನಾಗಮಂಗಲದಲ್ಲಿ ಅರೆ ಸೇನಾಪಡೆಯಿಂದ ಪಥಸಂಚಲನ

    ನಾಗಮಂಗಲ: ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ನಿರ್ಭೀತಿ ಮತ್ತು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ನಾಗಮಂಗಲ ಉಪವಿಭಾಗದ ಡಿವೈಎಸ್‌ಪಿ ಲಕ್ಷ್ಮೀನಾರಾಯಣ ಪ್ರಸಾದ್ ನೇತೃತ್ವದಲ್ಲಿ ಪೊಲೀಸರು ಹಾಗೂ ಕೇಂದ್ರ ಅರೆ ಸೇನಾಪಡೆ ಸಿಬ್ಬಂದಿ ಪಟ್ಟಣದಲ್ಲಿ ಮಂಗಳವಾರ ಪಥ ಸಂಚಲನ ನಡೆಸಿದರು.

    ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಿಂದ ಪ್ರಾರಂಭವಾದ ಪೊಲೀಸ್ ಪಥಸಂಚಲನ ಪಡುವಲಪಟ್ಟಣ ರಸ್ತೆ, ಕೊಳದ ಬೀದಿ, ಮಂಡ್ಯ ವೃತ್ತ, ಮೈಸೂರು ಮತ್ತು ಮಂಡ್ಯ ರಸ್ತೆ ಮಾರ್ಗವಾಗಿ ಟಿ.ಮರಿಯಪ್ಪ ವೃತ್ತ, ಪಟ್ಟಣದ ಮುಖ್ಯರಸ್ತೆ ಮೂಲಕ ಟಿ.ಬಿ.ಬಡಾವಣೆಯ ಬಿಂಡಿಗನವಿಲೆ ರಸ್ತೆ, ಸುಭಾಷ್ ನಗರದ ಹೊರ ರಸ್ತೆ ಮೂಲಕ ಮುಳುಕಟ್ಟೆ ರಸ್ತೆ, ಬಿಜಿಎಸ್ ವೃತ್ತದ ಮೂಲಕ ಪಾಲಗ್ರಹಾರ ರಸ್ತೆಯಲ್ಲಿ ಹಿಂದಿರುಗಿ ಶ್ರೀ ಗಣಪತಿ ದೇವಾಲಯದ ಆವರಣದಲ್ಲಿ ಮುಕ್ತಾಯಗೊಂಡಿತು.

    ಕೇಂದ್ರ ಅರೆ ಸೇನಾಪಡೆಯ ಕಮಾಂಡರ್ ಮನೋಜ್‌ಕುಮಾರ್, ನಾಗಮಂಗಲ ವೃತ್ತ ನಿರೀಕ್ಷಕ ನಿರಂಜನ್, ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್, ಪಿಎಸ್‌ಐ ರವಿಕುಮಾರ್, ಗ್ರಾಮಾಂತರ ಠಾಣೆಯ ಪಿಎಸ್‌ಐ ರವಿಕುಮಾರ್, ಬೆಳ್ಳೂರು ಪಿಎಸ್‌ಐ ಲೋಕೇಶ್, ಬಿಂಡಿಗನವಿಲೆ ಪಿಎಸ್‌ಐ ರಾಜೇಂದ್ರ ಸೇರಿದಂತೆ ತಾಲೂಕಿನ 4 ಠಾಣೆಗಳ 80 ಪೊಲೀಸ್ ಸಿಬ್ಬಂದಿ ಹಾಗೂ ಕೇಂದ್ರ ಅರೆಸೇನಾಪಡೆಯ 92 ಸಿಬ್ಬಂದಿ ನಾಗಮಂಗಲ ಮತ್ತು ಬೆಳ್ಳೂರು ಪಟ್ಟಣಗಳಲ್ಲಿ ಪಥಸಂಚಲನ ನಡೆಸಿದರು.

    04ಎನ್ ಎಂಜಿ 01:ನಾಗಮಂಗಲ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸ್ಥಳೀಯ ಪೊಲೀಸರು ಹಾಗೂ ಕೇಂದ್ರ ಅರೆ ಸೇನಾಪಡೆಯ ಸಿಬ್ಬಂದಿ ಪಥ ಸಂಚಲನ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts