More

    ನಾಗದೇವರಿಗೆ ಭಕ್ತಿಯ ಆರಾಧನೆ

    ದಾವಣಗೆರೆ: ಮಹಿಳೆಯರ ಹಬ್ಬವೆಂದೇ ಹೆಸರಾದ ಶ್ರಾವಣ ಸಂಭ್ರಮ ಜಿಲ್ಲೆಯಲ್ಲಿ ಮನೆ ಮಾಡಿದೆ. ಭಾನುವಾರ, ಸೋಮವಾರ ಎರಡೂ ದಿನದಂದು ನಾಗರ ಪಂಚಮಿಯನ್ನು ಭಕ್ತಿ ಯಿಂದ ಆಚರಿಸಲಾಯಿತು.

    ಚೌತಿಯ ದಿನವಾದ ಭಾನುವಾರ ಜಿಲ್ಲೆಯ ಹಲವೆಡೆ ನಾಗರ ಪಂಚಮಿ ಆಚರಿಸಲಾಯಿತು. ಹೊಸ ಬಟ್ಟೆ ಧರಿಸಿದ ಮಹಿಳೆಯರು ಮತ್ತು ಮಕ್ಕಳು ಕುಟುಂಬ ಸಮೇತ ತಮ್ಮ ಮನೆಗಳಲ್ಲಿ ಹುತ್ತದ ಮಣ್ಣಿನಿಂದ ತಯಾರಿಸಿದ ಹಾಗೂ ಬೆಳ್ಳಿಯ ನಾಗಪ್ಪಗೆ ಹಾಲೆರೆದರೆ, ಹಲವರು ದೇವಸ್ಥಾನಗಳ ಬಳಿ ಪ್ರತಿಷ್ಠಾಪಿಸಿದ ನಾಗರ ಮೂರ್ತಿಗಳಿಗೆ ಹಾಲೆರೆದರು.
    ವಿಶೇಷವಾಗಿ ತಯಾರಿಸಿದ ತಂಬಿಟ್ಟು ನೈವೇದ್ಯ ಸಮರ್ಪಿಸಲಾಯಿತು. ಬತ್ತಿಗಳಿಂದ ನಾಗದೇವರನ್ನು ಅಲಂಕರಿಸಲಾಗಿತ್ತು.

    ಪಂಚಮಿ ಅಂಗವಾಗಿ ಶೇಂಗಾ, ಕಡಲೆ, ಎಳ್ಳು ಮೊದಲಾದ ಉಂಡೆಗಳನ್ನು ಕಟ್ಟಲಾಗುತ್ತದೆ. ಸೋಮವಾರ ವಿವಿಧೆಡೆ ಹುರುಳಿಕಾಳು ಪಾನಕ ಹಾಗೂ ಹೋಳಿಗೆ ಮಾಡಿನೈವೇದ್ಯ ಸಲ್ಲಿಸಲಾಯಿತು.

    ಹಳ್ಳಿಗಳಲ್ಲಿ ಮನೆಗಳಲ್ಲಿಯೇ ಜೋಕಾಲಿ ಜೀಕಿ ಮಕ್ಕಳು ಖುಷಿಪಟ್ಟರೆ, ದೊಡ್ಡವರು ಮರಗಳಿಗೆ ಜೋಕಾಲಿ ಕಟ್ಟಿಕೊಂಡು ಆಡಿದರು.
    ಶ್ರಾವಣದ ನಂತರ ಕುಟುಂಬದ ಹೆಣ್ಣುಮಕ್ಕಳಿಗೆ ಹೊಸ ಸೀರೆ ಕುಪ್ಪಸದೊಂದಿಗೆ ಕಾಯಿ – ಉಂಡೆ ಕೊಡುವ ಸಂಪ್ರದಾಯ ಹಲವೆಡೆ ಕಂಡುಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts